ಆಸ್ತಿಗಾಗಿ ಸಹೋದರನನ್ನೇ ಕೊಲೆ ಮಾಡಿದ ಸಹೋದರಿಯರು
ಚಿಕ್ಕಮಗಳೂರು: ಆಸ್ತಿಗಾಗಿ ಸಹೋದರನನ್ನೇ ತನ್ನ ಮೂವರು ಸಹೋದರಿಯರು ಕೊಂದಿರುವ ಘಟನೆ ತರೀಕೆರೆ ತಾಲೂಕಿನ ಚೌಡೇಶ್ವರಿ ಕಾಲೋನಿಯಲ್ಲಿ ಕಳೆದ ರಾತ್ರಿ ನಡೆದಿದೆ.
ರಾಘವೇಂದ್ರ (೪೦) ಮೃತ ದುರ್ದೈವಿಯಾಗಿದ್ದು, ಆಸ್ತಿಗಾಗಿ ಕುಟುಂಬಸ್ಥರ ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು, ಬಾವನ ಜೊತೆಗೂಡಿ ಮೂವರು ಸಹೋದರಿಯರು ಕಣ್ಣಿಗೆ ಖಾರದ ಪುಡಿ ಎರಚಿ ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ. ರಾಘವೇಂದ್ರ ಮಂಚದ ಮೇಲೆ ಗಾಢ ನಿದ್ರೆಯಲ್ಲಿದ್ದರು.
ಬೆಳಗಿನ ಜಾವ ಎಚ್ಚರವಾಗಿ ಮೈ ಮುರಿಯುತ್ತಾ ಎದ್ದೇಳಲು ಕಣ್ಣು ಉಜ್ಜಿಕೊಳ್ಳಲು ಮುಂದಾಗಿದ್ದರು. ಆದರೆ ಇದಕ್ಕೂ ಮೊದಲೇ ಸಹೋದರನನ್ನು ಸುತ್ತವರಿದಿದ್ದ ನರಹಂತಕಿ ಸಹೋದರಿಯರು ಆಯುಧಗಳನ್ನು ಹಿಡಿದು ನಿಂತಿದ್ದರು.
ರಾಘವೇಂದ್ರ ಎದ್ದೊಡನೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಆತ ಏನಾಯಿತು ಎಂದು ಯೋಚಿಸುವ ಮುನ್ನವೇ ಸಿಕ್ಕ ಸಿಕ್ಕ ಕಡೆಗಳಲ್ಲಿ ಚಾಕುವಿನಿಂದ ಕೊಚ್ಚಿ ಹಾಕಿದ್ದಾರೆ. ಇವರ ರಾಕ್ಷಸಿ ಕೌರ್ಯಕ್ಕೆ ರಾಘವೇಂದ್ರ ಚಿರಾಡುತ್ತಾ, ಪ್ರಾಣ ಉಳಿಸಿಕೊಳ್ಳಲು ಆಗದೆ ಕ್ಷಣ ಮಾತ್ರದಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ. ಕೊಲೆಯಾದ ರಾಘವೇಂದ್ರ ಹಾಗೂ ಆಸ್ತಿಗಾಗಿ ಹಂತಕರಾದ ರಕ್ತ ಸಂಬಂಧಿಗಳು
ಆಸ್ತಿಗಾಗಿ ಕುಟುಂಬಸ್ಥರ ಜತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ಆಸ್ತಿ ಕೈ ತಪ್ಪಬಾರದೆಂದು ಯೋಜಿಸಿದ ಮೂವರು ಸಹೋದರಿಯರು ಬಾವನ ಜತೆಗೂಡಿ ಸಹೋದರ ರಾಘವೇಂದ್ರನನ್ನು ಮಲಗಿದ್ದಲ್ಲೇ ಮನಸೋ ಇಚ್ಛೆ ಕೊಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಕಂಡು ಪೊಲೀಸರೇ ತಬ್ಬಿಬ್ಬು ಆಗಿದ್ದರು. ಆಸ್ತಿಗಾಗಿ ಅಮಾನುಷವಾಗಿ ಅಣ್ಣನನ್ನೇ ಕೊಂದ ನಾಲ್ವರುನ್ನು ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಾಟೆ ಭೇಟಿ ನೀಡಿ ಪರಿಶೀಲಿಸಿದರು
Sisters killed brother for property