ವಿದೇಶಿ ವೈದ್ಯ ಮಹಿಳೆ ಮೇಲೆ ಯೋಗಗುರು ಅತ್ಯಚಾರ – ಬಂಧನ
ಚಿಕ್ಕಮಗಳೂರು: ವಿದೇಶಿ ವೈದ್ಯ ಮಹಿಳೆ ಮೇಲೆ ಯೋಗಗುರು ಅತ್ಯಚಾರ ಎಸಗಿರುವ ಘಟನೆ, ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯೋಗಗುರು ಹಾಗೂ ಆರೋಪಿ ಪ್ರದೀಪ್ ನನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ‘ಕೇವಲ’ ಎಂಬ ಆಶ್ರಮದಲ್ಲಿ ಈ ಘಟನೆ ನಡೆದಿದೆ. ಅನಿವಾಸಿ ಭಾರತಿ ಮಹಿಳೆ ವೈದ್ಯೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊರಿಸಲಾಗಿದೆ.
ಕೆಲವು ತಿಂಗಳ ಹಿಂದೆ ಯೋಗ, ಧ್ಯಾನ ಕಲಿಯಲು ಆಶ್ರಮಕ್ಕೆ ಬಂದಿದ್ದರು. ಯೋಗ, ಧ್ಯಾನ ಕಲಿಸುತ್ತಿದ್ದ ಆರೋಪಿ ಪ್ರದೀಪ್ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿದೆ.
ಈ ಸಂಬಂಧ ವೈದ್ಯ ಮಹಿಳೆ ಟ್ವೀಟರ್ ನಲ್ಲಿ ಬರೆದುಕೊಂಡಿದ್ದು, ಆರೋಪಿ ಪ್ರದೀಪನನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Yogaguru rapes foreign doctor woman – Arrested