ಚಿಕ್ಕಮಗಳೂರು: ಇತ್ತಿಚಿನ ದಿನಗಳಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸ್ಕೌಟಿಂಗ್ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಸ್ವಯಂಪ್ರೇರಿತ ಶಿಸ್ತಿನ ಜೀವನದ ಆಯ್ಕೆ ಇಂತಹ ಸಂಸ್ಥೆಗಳಿಂದ ಸಾಧ್ಯ ಎಂದು ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್ ಶಂಕರ್ ನುಡಿದರು.
ಅವರು ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ವತಿಯಿಂದ ಹೌಸಿಂಗ್ ಬೋರ್ಡ್ನ ಬಿ.ಜಿ.ಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ೫ ದಿನಗಳ ಕಾಲ ನಡೆದ ಕಬ್ ಮತ್ತು ಬುಲ್ಬುಲ್ ಉತ್ಸವದ ಸಮಾರೋಪ ಭಾಷಣ ಮಾಡುತ್ತಾ “ದಿಕ್ಸೂಚಿ: ಸ್ಮರಣ ಸಂಚಿಕೆಯಲ್ಲಿ ಗೊರೂರು ಚನ್ನಬಸಪ್ಪರವರು ಸೇವೆಯ ಬಗ್ಗೆ ಬರೆದಿರುವ ಲಖನವನ್ನು ಸ್ಮರಿಸುತ್ತಾ ಯಾವುದೇ ಅಪೇಕ್ಷೆ ಇಲ್ಲದೆ ನಿಸ್ಪಕ್ಷಪಾತ ಸೇವೆಯನ್ನು ನಾವು ಸ್ಕೌಟಿಂಗ್ನಲ್ಲಿ ನೋಡಲು ಸಾಧ್ಯ ಈ ರೀತಿಯ ಸಂಸ್ಥೆಗಳು ಮಕ್ಕಳನ್ನು ವಿಶ್ವಮಾನವನ್ನಾಗಿ ಮಾಡಲು ಸಹಕಾರಿಯಾಗಿವೆ ಎಂದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ನಾಣ್ಣುಡಿಯಂತೆ ಶಿಸ್ತು, ಸಮಯಪ್ರಜ್ಞೆ, ವಿಧೇಯತೆ, ರಾಷ್ಟ್ರಪ್ರೇಮ, ಸೇವೆ ಇಂತಹ ಒಳ್ಳೆಯ ನಡತೆಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಈ ಸ್ಕೌಟ್ ಚಳುವಳಿಯ ಮಹತ್ತರ ಪಾತ್ರ ವಹಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಮಕ್ಕಳು ಸಹಬಾಳ್ವೆಯ ಮೂಲಕ ಬ್ರಾತೃತ್ವವನ್ನು ಬೆಳೆಸಿಕೊಳ್ಳುತ್ತಾರೆ.
ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಬ್ರಾತೃತ್ವವನ್ನು ಈ ರೀತಿಯ ಸೇವಾ ಸಂಸ್ಥೆಗಳು ಮಹತ್ತರ ಕೊಡುಗೆ ನೀಡಬಹುದಾಗಿದೆ. ಕ್ಷೀಣಿಸುತ್ತಿರುವ ಸಾಮಾಜಿಕ ಮೌಲ್ಯಗಳ ನಡುವೆ ಈ ಚಳುವಳಿಯು ಒಂದು ಮಹತ್ತರ ಆಶಾಕಿರಣವಾಗಿದೆ ಎಂದರು.
ಉತ್ಸವದ ಅಂಗವಾಗಿ ಹೊರತರಲಾದ “ದಿಕ್ಸೂಚಿ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಭದ್ರಕಾಡ ಅಧ್ಯಕ್ಷ ಡಾ. ಅಂಶುಮಂತ್ ಈ ಒಂದು ಮೌಲ್ಯದಾರಿತ ಕಾರ್ಯಕ್ರಮದಲ್ಲಿ ಅವಕಾಶ ದೊರೆತದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು. ಪುಟ್ಟ ಮಕ್ಕಳು ಇಂತಹ ಸಂಸ್ಥೆಗಳ ಸದಸ್ಯರಾಗಿ ದೇಶಕ್ಕೆ ಕೀರ್ತಿ ತಂದು ದೇಶದ ಉತ್ತಮ ಭವಿಷ್ಯವನ್ನು ರೂಪಿಸಬೇಕು ಎಂದರು. ಶಿಬಿರ ಪ್ರಾರಂಭವಾಗಿ ೪ ದಿನಗಳಾದರು ಮಕ್ಕಳ ಮುಖದಲ್ಲಿರುವ ಲವಲವಿಕೆಯನ್ನು ನೋಡಿದರೆ ಎಲ್ಲರೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವ ಲಕ್ಷಣ ಎದ್ದು ಕಾಣುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳಲ್ಲಿ ಕೌಶಲಗಳು, ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿಗಳ ಜೊತೆಗೆ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಲು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಸಹಕಾರಿಯಾಗಿದೆ. ಈಗಾಗಲೆ ಈ ಸಂಸ್ಥೆ ಸುಮಾರು ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯುತ್ತಿರುವುದು ಸಂತಸದ ಸಂಗತಿ. ನಮ್ಮ ದೇಶದ ಉತ್ತರ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಈ ಸಂಸ್ಥೆಗಳು ಈ ರೀತಿಯ ಚಟುವಟಿಕೆಗಳನ್ನು ನಿಸ್ವಾರ್ಥ ಸೇವೆಯಿಂದ ನಡೆಸಬೇಕು ಎಂದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಮಾತನಾಡಿ ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಮಕ್ಕಳಲ್ಲಿ ದೈರ್ಯ, ಉತ್ಸಾಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳೆಲ್ಲಾ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮವಾಗಿ ಬೆಳೆಯಬೇಕು ಎಂದರು.
ಗೃಹಮಂಡಳಿ ನಗರಸಭೆ ಸದಸ್ಯ ಕವಿತಾ ಶೇಖರ್ ಮತನಾಡಿ ವಿದ್ಯಾರ್ಥಿಗಳು ಹಾಡಿದ ಉತ್ಸವ ಗೀತೆಯು ಸ್ಕೌಟಿಂಗ್ನಲ್ಲಿ ಕಲಿಯಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ವೇದಿಕೆಯಾಗಿದ್ದ ಅವರಲ್ಲಿ ಆತ್ಮಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುತ್ತದೆ ಎಂದರು.
ಮಂಜುನಾಥೇಶ್ವರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಮಾತನಾಡಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು ಜೊತೆಗೆ ವ್ಯಕ್ತಿತ್ವ ಬೆಳವಣಿಗೆಗೆ ಅನುಕೂಲಕರವಾಗಿದೆ ಎಂದರು. ವಿದ್ಯಾರ್ಥಿಗಳು ಜೊತೆಗೆ ಶಿಬಿರ ಮುದಿಗ ಬಳಿಕ ಇಲ್ಲಿ ಕಲಿತ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಕ್ಷರಿ ಮಾತನಾಡಿ ಯಾವುದೇ ಸೋಂಕಿಲ್ಲದೆ ನಡೆಯುತ್ತಿರುವ ಸಂಸ್ಥೆ ಎಂದರೆ ಅದುವೇ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ. ಕ್ರಿಯಾಶೀಲಾ ಕಲಿಕೆಗೆ ಇಂತಹ ಚಟುವಟಿಕೆಗಳು ಸಾಕ್ಷಿಯಾಗಿರುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳೆಲ್ಲಾ ಹೊಸತನವನ್ನು ಹುಟ್ಟು ಹಾಕುತ್ತದೆ. ವಿದ್ಯಾರ್ಥಿಗಳೆಲ್ಲಾ ಹೋಗುತ್ತಾ ಸಿಹಿನೆನಪುಗಳನ್ನು ತೆಗೆದುಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್, ಉತ್ಸವದ ನಾಯಕರುಗಳು, ದಳನಾಯಕರುಗಳು ಉಪಸ್ಥಿತರಿದ್ದರು.
Scouting is popular in most countries of the world