ಚಿಕ್ಕಮಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾ.ಪಂ ಸದಸ್ಯರ ಒಕ್ಕೂಟದ ಸಹಯೋಗದಲ್ಲಿ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರ ಅಧ್ಯಕ್ಷತೆಯಲ್ಲಿ ಅ.೧೦ ರಂದು ಮಧ್ಯಾಹ್ನ ೩ ಗಂಟೆಗೆ ಸಭೆ ಕರೆಯಲಾಗಿದೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜುವಿಜಯನ್ ಅವರು ಮಾತನಾಡಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ೧೧ ವೃಂದ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಚರ್ಚಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಹಲವು ಸಭೆಗಳನ್ನು ಕರೆಯಲಾಗಿದ್ದು, ಮಾಹಿತಿ ಕೊರತೆಯ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ, ಆದ್ದರಿಂದ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗಿದೆ. ಸಚಿವರು ಅಂದು ಸಭೆಯನ್ನು ಕರೆಯಲು ಸೂಚಿಸಿದ್ದು, ಇಲಾಖಾ ಪ್ರತಿನಿಧಿಯಾಗಿ ಆಗಮಿಸಿ ಹೋರಾಟದ ಬಗ್ಗೆ ವಿವರಿಸಿದಾಗ ಬೇಡಿಕೆಗಳಲ್ಲಿ ಕೆಲವನ್ನು ಮಾತ್ರ ಈಡೇರಿಸಲು ಸಮ್ಮತಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಆಯುಕ್ತರು ಅ.೮ ರಂದು ಹೊರಡಿಸಿರುವ ಆದೇಶದಲ್ಲಿ ನೌಕರರ ಬೇಡಿಕೆಗಳ ಈಡೇರಿಸುವ ಬಗ್ಗೆ ಪ್ರಸ್ತಾಪಿಸದೆ ಕರ್ನಾಟಕ ನಾಗರಿಕ ಸೇವಾ ನಡೆತೆ ನಿಯಮಗಳು ನಿಯಮದಂತೆ ಎಲ್ಲಾ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಿಗೆ ಪತ್ರ ರವಾನಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತವಾದ ಬೇಡಿಕೆಗಳ ಬಗ್ಗೆ ಶಾಂತಿಯುತವಾಗಿ ಹೋರಾಟ ನಡೆಸುವ ೧ ಲಕ್ಷ ಸದಸ್ಯರು ಹಾಗೂ ೭೦ ಸಾವಿರಕ್ಕೂ ಹೆಚ್ಚು ನೌಕರರಿಗೆ ಅಪಮಾನ ಮಾಡಿ ಬೆದರಿಕೆ ಒಡ್ಡಿರುವುದರಿಂದ ಸಂಘ ಕರೆ ನೀಡಿದ್ದರಿಂದ ಪ್ರತಿಭಟನೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ಇಂದು ಜಿಲ್ಲಾ ಪಂಚಾಯಿತಿ ಬಳಿ ಪಂಚ ನೌಕರರು ನಡೆಸುತ್ತಿರುವ ಮುಷ್ಕರ ನಿರತರ ಬಳಿಗೆ ಆಗಮಿಸಿದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ಹಲವು ಒತ್ತಡಗಳ ಮಧ್ಯೆ ಸೇವೆ ಸಲ್ಲಿಸುತ್ತಿರುವ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿ ನೌಕರರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಿರುವ ನಿಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಉಪಾಧ್ಯಕ್ಷೆ ಶಾಂತಿ, ರಾಜ್ಯ ಪರಿಷತ್ ಸದಸ್ಯ ಸುನಿಲ್, ಸಂಘಟನಾ ಕಾರ್ಯದರ್ಶಿ ರಾಜ್ಕುಮಾರ್, ಪವಿತ್ರ, ಸಾಂಸ್ಕೃತಿಕ ಕಾರ್ಯದರ್ಶಿ ಸುರಯ್ಯಬಾನು, ಖಜಾಂಚಿ ಶೇಖರ್, ಕ್ರೀಡಾ ಕಾರ್ಯದರ್ಶಿ ನಾಗೇಶ್, ಆರ್.ಡಿ.ಪಿ.ಆರ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಪದ್ಮರಾಜ್, ಪಿ.ಡಿ.ಓ ತಾಲ್ಲೂಕು ಸಂಘದ ಅಧ್ಯಕ್ಷರುಗಳಾದ ಎನ್.ಎಸ್.ಜಗನಾಥ್, ಶಿವಕುಮಾರ್, ಮನೀಕ್ಷ್, ಕೃಷ್ಣಪ್ಪ, ಆದಿನಾಥ್ಬಿಳಗಿ, ಪ್ರಸನ್ನ, ಶಿವಮೂರ್ತಿ, ಪ್ರತಿನಿಧಿಗಳಾದ ಸಹದೇವ್, ರುದ್ರೇಶ್, ಎಸ್.ಡಿ.ಎ.ಎ ಜಿಲ್ಲಾ ಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ.ಎಸ್, ಮಹೇಶ್ವರಪ್ಪ, ರಾಜಪ್ಪ ಉಪಸ್ಥಿತರಿದ್ದರು.
A meeting to meet the demands of Gram Panchayat employees at Vikas Soudha at 10 am