ಚಿಕ್ಕಮಗಳೂರು: ಇಂದಿನ ಕಾಲಕ್ಕೆ ತಾಂತ್ರಿಕ ಕೌಶಲ್ಯತೆ ಮತ್ತು ಜ್ಞಾನ ಸಂಪಾದನೆ ಯ ಅವಶ್ಯವಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಶೋಧಿಸುವ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.
ನಗರದ ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ಬಿ.ಎಸ್.ಎನ್.ಎಲ್ ೨೫ನೇ ಸಂಸ್ಥಾಪನಾ ದಿನಾಚರಣೆ ಹಾಗು ಹಿಂದಿ ದಿವಸ್ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಟೆಲಿಕಾಂನಲ್ಲಿ ಬಿ.ಎಸ್.ಎನ್.ಎಲ್. ಅತ್ಯಂತ ಉನ್ನತ ಹೆಸರನ್ನು ಹೊಂದಿದೆ. ಅನೇಕ ವರ್ಷಗಳಿಂದ ಲ್ಯಾಂಡ್ಲೈನ್ ಮುಖಾಂತರ ಜನರ ಪರಸ್ಪರ ಮಾತುಕತೆಗೆ ಹೆಜ್ಜೆಯಿಟ್ಟ ಸಂಸ್ಥೆ ಎಂದ ಅವರು ಇದೀಗ ಗ್ರಾಹಕರಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಬಿ.ಎಸ್.ಎನ್.ಎಲ್. ಸಂಸ್ಥೆ ಡಿಜಿಎಂ ಬಾಲಾಜಿ ಮಾತನಾಡಿ ತಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ೮೦ ಸ್ಥಳಗಳಲ್ಲಿ ೪ಜಿ ಸೇವೆಯನ್ನು ಆರಂಭಿಸಲಾಗಿದೆ ಹಾಗೂ ಉಳಿದ ೧೬೫ ಸ್ಥಳಗಳಲ್ಲಿ ೪ಜಿ ಸೇವೆಯನ್ನು ಇನ್ನು ಎರಡು ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಹಿಂದಿ ಭಾ?ಯ ಅವಶ್ಯಕತೆ ಮತ್ತು ಉಪಯುಕ್ತತೆ ಬಗ್ಗೆ ಸಾಹಿತಿ ರಮೇಶ್ ಬೊಂಗಾಳೆ ಅವರು ಉಪ ನ್ಯಾಸ ನೀಡಿದರು. ಸಂಸ್ಥಾಪನಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಚಿತ್ರಕಲಾ ಹಾಗೂ ರಸಪ್ರಶ್ನೆ ಭಾಗವಹಿಸಿ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಬಿ.ಎಸ್.ಎನ್.ಎಲ್ ಮತ್ತು ಎ ಐ ಟಿ ಕಾಲೇಜಿನ ನಡುವೆ ಶೈಕ್ಷಣಿಕ ಹಾಗೂ ವ್ಯವಹಾರಿಕ ಒಪ್ಪಂದಕ್ಕೆ ಸಹಿಹಾಕಲಾಯಿತು. ಬಳಿಕ ಡಾ. ಸಿ.ಟಿ.ಜಯದೇವ ಅವರಿಂದ ೪ಜಿ ಸೇವೆಯನ್ನು ಪ್ರಾರಂಭಿಸ ಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿ.ಎಸ್.ಎನ್.ಎಲ್. ಕಚೇಋಇಯಿಂದ ಹಾಲಿ ಹಾಗೂ ನಿವೃತ್ತ ನೌ ಕರರಿಂದ ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿ.ಎಸ್. ಎನ್.ಎಲ್. ಕಚೇರಿಯ ಅಧಿಕಾರಿಗಳಾದ ಎ.ಎನ್.ಗೋಪಾಲಕೃ?, ಜೋಸೆಫ್, ಚಂದ್ರಹಾಸ ನೌಕರರು ಮತ್ತು ನಿವೃತ್ತ ನೌಕರರು ಹಾಗೂ ಪ್ರಾಂಚೈಸಿಯವರು ಬಾಗವಹಿಸಿದ್ದರು.
BSNL 25th Foundation Day Celebration