ಚಿಕ್ಕಮಗಳೂರು: ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ ೩೧ ರಿಂದ ನವೆಂಬರ್ ೦೩ ರವರೆಗೆ ದೀಪೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ೩೧ ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜಾ ಪ್ರಾರಂಭ. ರಾತ್ರಿ ೭.೦೦ ಗಂಟೆಗೆ ದೀಪೋತ್ಸವ ನಡೆಯಲಿವೆ.
ನವೆಂಬರ್ ೦೧ ರಂದು ಬೆ. ೦೯.೩೦ ಗಂಟೆಗೆ ಶ್ರೀ ದೇವೀರಮ್ಮನವರ ದೇವಸ್ಥಾನದಲ್ಲಿ ಶ್ರೀ ದೇವಿಯವರಿಗೆ ಉಡುಗೆ, ಪೂಜೆ, ಸಂಜೆ ೦೪.೦೦ ಗಂಟೆಯಿಂದ ಭಕ್ತಿ-ಭಾವಗೀತಾ ಕಾರ್ಯಕ್ರಮ ನಂತರ ಬೆಣ್ಣೆ ಬಟ್ಟೆ ಸುಡುವುದು, ಮಂಗಳಾರತಿ ಪ್ರಸಾದ ವಿನಿಯೋಗ.
ನವೆಂಬರ್ ೦೨ ರಂದು ಬೆ. ೮.೦೦ ಗಂಟೆಯಿಂದ ಶ್ರೀ ದೇವಿರಮ್ಮನವರ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ, ಸಂಜೆ ೫.೦೦ ರಿಂದ ಭರತನಾಟ್ಯ ಕಾರ್ಯಕ್ರಮ ನಂತರ ರಾತ್ರಿ ಶ್ರೀ ದೇವಿಯವರ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿವೆ.
ನವೆಂಬರ್ ೦೩ ರಂದು ಸೂರ್ಯೋದಯಕ್ಕೆ ಕೆಂಡಾರ್ಚಾನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾಧಿಗಳಿಗೆ ವಿಶೇಷ ಸೂಚನೆ:- ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಇದೇ ದಿನ ದೇವೀರಮ್ಮನವರ ದೇವಸ್ಥಾನದಲ್ಲಿ ಹಣ್ಣು ಕಾಯಿಯನ್ನು ಮಾಡಿಸಬಹುದು. ದೇವಸ್ಥಾನದಲ್ಲಿ ಹಣ್ಣು ಕಾಯಿ ಮತ್ತು ತೀರ್ಥ-ಪ್ರಸಾದ ದೊರೆಯುತ್ತದೆ.
ಭಕ್ತರು ಪಾದರಕ್ಷೆಗಳನ್ನು ಧರಿಸದೇ ಬರೀಕಾಲಿನಲ್ಲಿಯೇ ಬೆಟ್ಟ ಹತ್ತುವುದು. ದೇವಿಯವರ ದರ್ಶನವಾದ ತಕ್ಷಣ ಬೆಟ್ಟದ ಮೇಲೆಯೇ ಕುಳಿತುಕೊಳ್ಳದೇ ಬೆಟ್ಟದಿಂದ ಕೆಳಗೆ ಇಳಿಯತಕ್ಕದ್ದು. ಬೆಟ್ಟದಲ್ಲಿ ಹಾಗೂ ದೇವಸ್ಥಾನದ ಸುತ್ತ-ಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆಯಬೇಡಿ – ಬೆಟ್ಟದಲ್ಲಿ ಹಾಗೂ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ವ್ಯವಸ್ಥೆ ಇರುತ್ತದೆ. ಪ್ರತಿದಿನ ಅನ್ನ ದಾಸೋಹ ಇರುತ್ತದೆ. ಅನ್ನ ದಾಸೋಹ ಮಾಡಿಸುವವರು ದೇವಸ್ಥಾನದ ಕಾರ್ಯಾಲಯದಲ್ಲಿ ಹೆಸರು ನೊಂದಾಯಿಸಬಹುದು. ಬೆಟ್ಟದ ಮೇಲೆ ಪಟಾಕಿ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Dipotsava of Bindiga Deviram from October 31