ALSO FEATURED IN

Karnataka Celebration-50: ಸೈಮನ್ ಎಕ್ಸಿಬಿಟರ್‍ಸ್‌ನಿಂದ ಕರ್ನಾಟಕ ಸಂಭ್ರಮ-೫೦

Spread the love

ಚಿಕ್ಕಮಗಳೂರು: ಸೈಮನ್ ಎಕ್ಸಿಬಿಟರ್‍ಸ್ ವತಿಯಿಂದ ಕರ್ನಾಟಕ ಸಂಭ್ರಮ-೫೦ ನ್ನು ಅ.೨೩ ರಿಂದ ನವೆಂಬರ್ ೨೪ ರವರೆಗೆ ನಗರದ ಬೈಪಾಸ್ ರಸ್ತೆಯಲ್ಲಿರುವ ಎಐಟಿ ಮಹಿಳಾ ಹಾಸ್ಟೆಲ್ ಹತ್ತಿರ ಓಪನ್ ಗ್ರೌಂಡ್‌ನಲ್ಲಿ ಬೃಹತ್ ಗ್ರಾಹಕರ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಎಂ.ಎಸ್ ನಾಗಚಂದ್ರ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೭೩ ರ ನವೆಂಬರ್ ೧ ರಂದು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಿದ ಸುವರ್ಣ ಮಹೋತ್ಸವದ ಅಂಗವಾಗಿ ಈ ಮೇಳವು ಅ.೨೩ ರಿಂದ ಒಂದು ತಿಂಗಳ ಕಾಲ ನಡೆಯಲಿದೆ ಎಂದರು.

ಕರ್ನಾಟಕ ಸಂಭ್ರಮ-೫೦ ಗ್ರಾಹಕರ ಮೇಳದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಇರುತ್ತವೆ. ಅನಿಮಲ್ ಕಿಂಗ್‌ಡಮ್ ಮತ್ತು ಅವತಾರ್ ಎಂಬ ಎರಡು ಪರಿಕಲ್ಪನೆಗಳನ್ನು ಹೊಂದಿದ್ದು, ಇದರ ಜೊತೆಗೆ ೧೯೫೨ ರಿಂದ ಈವರೆಗೆ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಸಂಗ್ರಹಗಳು, ವಿವಿಧ ಕ್ರೀಡಾಪಟುಗಳು, ಚಲನಚಿತ್ರ ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ನಟರ ಸಮಗ್ರ ಮಾಹಿತಿ ವಿಶೇಷ ಆಕರ್ಷಣೆಯಾಗಿದೆ ಎಂದು ಹೇಳದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ಮಾಹಿತಿಯನ್ನು ಇಲ್ಲಿ ಪ್ರದರ್ಶಿಸಲಾಗುವುದು. ಈ ಮೇಳ ಕೇವಲ ವ್ಯಾಪಾರಕಷ್ಟೇ ಅಲ್ಲದೆ ಗ್ರಾಹಕರಿಗೆ ಜ್ಞಾನವನ್ನು ಒದಗಿಸುತ್ತದೆ. ರಾಜ್ಯದ ಕಲ್ಯಾಣಕ್ಕಾಗಿ ವಿವಿಧ ಕ್ಷೇತ್ರಗಳ ಜನರ ಕೊಡುಗೆಯನ್ನು ಇಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಡ್ರೆಸ್ ಮೆಟೀರಿಯಲ್, ರೆಡಿಮೇಡ್ ಉಡುಪು, ಸೀರೆ, ಕುರ್ತಾ, ಪೈಜಾಮ, ಶರ್ಟಿಂಗ್ ಮತ್ತು ಶೂಟಿಂಗ್‌ಗಳತ್ತ ಗಮನ ಹರಿಸುವವರು ಈ ಎಕ್ಸ್‌ಪೋಗೆ ಭೇಟಿ ನೀಡಲೇಬೇಕು ಎಂದು ಮನವಿ ಮಾಡಿದ ಅವರು, ವ್ಯಾಪಕ ಶ್ರೇಣಿಯ ಮಸಾಲ ಪುಡಿಗಳು, ಜೇನುತುಪ್ಪ, ಚಾಕಲೇಟ್‌ಗಳು, ಉಪ್ಪಿನಕಾಯಿ, ಒಣ ಹಣ್ಣುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಚಿಕ್ಕ ಕಂಪನಿಗಳಿಂದ ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಲಭ್ಯವಿರುತ್ತವೆ. ಮಕ್ಕಳಿಂದ ಹಿರಿಯರವರೆಗೆ ಮನರಂಜನಾ ಉದ್ಯಾನವನವು ಆಕರ್ಷಿಸಲಿದೆ.

ಪ್ರತಿದಿನ ಸಂಜೆ ೫ ರಿಂದ ರಾತ್ರಿ ೯ ರವರೆಗೆ ಈ ಎಕ್ಸ್‌ಪೋ ತೆರೆದಿರುತ್ತದೆ. ಆಹಾರ ಪ್ರೇಮಿಗಳಿಗಾಗಿ ಫುಡ್ ಕೋರ್ಟ್ ಕೂಡ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸೈಮನ್ ಎಕ್ಸಿಬಿಟರ್‍ಸ್ ಮುಖ್ಯಸ್ಥರಾದ ಎ. ಭದ್ರಪ್ಪ, ವೀರೇಶಾಚಾರ್, ವೆಂಕಟೇಶ್ ಉಪಸ್ಥಿತರಿದ್ದರು.

Karnataka Celebration-50 by Simon Exhibitors

Facebook
X
WhatsApp
Telegram
Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

[t4b-ticker]
Exit mobile version