ಚಿಕ್ಕಮಗಳೂರು: ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಕನ್ನಡ ರಾಜ್ಯೋತ್ಸವವನ್ನು ರಕ್ಷಣಾ ವೇದಿಕೆ ಪದಾಧಿಕಾರಿಗಳು ಅತ್ಯಂತ ಸಂಭ್ರಮದಿಂದ ಭಾಗ ವಹಿಸಿ ಯಶಸ್ವಿಗೊಳಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ ಹೇಳಿದರು.
ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರವೇಯ ಪುರುಷ ಹಾಗೂ ಮಹಿಳಾ ಪದಾಧಿಕಾರಿಗಳು ಕರ್ನಾಟಕ ಸಂಸ್ಕೃತಿ ಪ್ರತಿಬಿಂಬಿಸುವ ಉಡುಗೆ-ತೊಡುಗೆಯಲ್ಲಿ ಆಗಮಿಸಬೇಕು. ಪ್ರತಿಯೊಬ್ಬರು ಕೂಡಾ ತಮ್ಮ ಮನೆಗಳಲ್ಲಿ ಕನ್ನಡಧ್ವಜ ಕಟ್ಟುವ ಮೂಲಕ ರಾಜ್ಯೋತ್ಸವಕ್ಕೆ ಕಳೆ ತುಂಬಬೇಕು ಎಂದು ತಿಳಿಸಿದರು.
ಅಂದು ಬೆಳಿಗ್ಗೆ ೮.೩೦ಕ್ಕೆ ಜಿಲ್ಲಾ ಕರವೇ ಪ್ರತ್ಯೇಕ ವಾಹನವನ್ನು ತಳಿರು ತೋರಣದಿಂದ ಶೃಂಗರಿಸಿ ಶ್ರೀ ಕನ್ನಡಾಂಬೆ ಭಾವಚಿತ್ರ ಇರಿಸಿ ಪುಷ್ಪಾರ್ಚನೆ ಮೂಲಕ ಎಂ.ಜಿ.ರಸ್ತೆ ಮುಖಾಂತರ ಜಿಲ್ಲಾ ಆಟದ ಮೈದಾನದ ವರೆಗೆ ಮೆರವಣಿಗೆ ಜಾಥಾ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಂಭ್ರಮದ ರಾಜ್ಯೋತ್ಸವಕ್ಕೆ ಮುಂದಾಗಬೇಕು ಎಂದರು.
ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಮಣ್ಣಿನ ಋಣ ತೀರಿಸುವ ಕಾರ್ಯವಾಗಬೇಕು. ಹಾಗಾಗಿ ಕನ್ನಡಕ್ಕೆ ಧಕ್ಕೆ ಅಥವಾ ಸಮಸ್ಯೆ ಎದುರಾದಾಗ ವೈಯಕ್ತಿಕ ಕೆಲಸವನ್ನು ಬದಿಗಿರಿಸಿ ನಾಡು, ನುಡಿಯ ರಕ್ಷಣೆಗೆ ಮೊದ ಲು ನಿಂತಾಗ ಮಾತ್ರ ಪುರಾತನ ಇತಿಹಾಸವುಳ್ಳ ಕನ್ನಡ ಸೊಗಡನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕರವೇ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಮಾತನಾಡಿ ಕನ್ನಡ ಹಬ್ಬದಲ್ಲಿ ಮಹಿಳೆ ಯರು ಅತಿಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ರಾಜ್ಯೋತ್ಸವಕ್ಕೆ ಇನ್ನಷ್ಟು ಮೆರಗು ಹೆಚ್ಚಿಸಬೇಕು. ಅಲ್ಲದೇ ನಾಡಿ ನ ಸಂಸ್ಕೃತಿಯ ಪರಿಚಯಿಸುವ ಸೀರೆತೊಟ್ಟು ಮೆರವಣಿಗೆಯಲ್ಲಿ ಸಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್ ಸಿಂಹಾದ್ರಿ, ಸಹ ಕಾರ್ಯದರ್ಶಿಗಳಾದ ಯುವರಾಜ್, ಮಧು, ತಾಲ್ಲೂಕು ಅಧ್ಯಕ್ಷ ಮನೋಜ್, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ಶೈಲಾ, ಕಾರ್ಯದರ್ಶಿ ಅನ್ನಪೂರ್ಣ ಮತ್ತಿತ ರರು ಹಾಜರಿದ್ದರು.
Karave is bound to celebrate Rajyotsava with gaiety