ಚಿಕ್ಕಮಗಳೂರು: ಮುಂದಿನ ೧೦ ವರ್ಷದಲ್ಲಿ ಕಾಫಿ ಉದ್ಯಮವನ್ನು ಉಳಿಸಲು ಹಲವಾರು ಬದಲಾವಣೆಗಳನ್ನು ತರುವ ಮೂಲಕ ೧೭ ವಿವಿಧ ಸಮಿತಿಗಳನ್ನು ರಚಿಸಿದ್ದು, ೩೧೬ ಸದಸ್ಯರು ಕಾಫಿ ಗುಣಮಟ್ಟ ಹಾಗೂ ಸ್ಥಳೀಯವಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ತಿಳಿಸಿದರು.
ಅವರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಹಿಳಾ ಜಿಲ್ಲಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯಿಂದ ಗುಣಮಟ್ಟದ ಕಾಫಿ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.
ಪ್ರಸ್ತುತ ಪ್ರಪಂಚ ಬದಲಾವಣೆ ಕಾಣುತ್ತಿದ್ದು, ಯುವಕರು ಕಾಫಿ ಉದ್ಯಮಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬೆಳಗಾರರು ಬರುತ್ತಿಲ್ಲ ಎಂದು ವಿ?ಧಿಸಿದ ಅವರು, ಭಾರತದಲ್ಲಿ ಕಾಫಿ ಉದ್ಯಮಕ್ಕೆ ಭವ್ಯ ಭವಿ?ದ ದೃಷ್ಟಿಯಿಂದ ಬೇರೆ ಬೇರೆ ರಾಜ್ಯಗಳ ಯುವಕರು ಕಲಿಕೆ ಆರಂಭಿಸಿದ್ದಾರೆ ಎಂದರು.
ರತನ್ ಟಾಟಾ ಕಾಫಿ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗ ನೀಡಿ ಕಾಫಿ ಬೆಳಗಾರರಿಗೆ ಉತ್ತೇಜನ ನೀಡಿದ್ದಾರೆ ನಟ ಪುನೀತ್ ರಾಜಕುಮಾರ್ ಸಹ ಸಮಾಜ ಸೇವೆಗೆ ತೊಡಗಿಸಿಕೊಂಡಿದ್ದರಿಂದ ಇಂದು ಈ ಇಬ್ಬರು ಮಹನಿಯರನ್ನು ಜನತೆ ಸ್ಮರಿಸುತಿದ್ದಾರೆ. ಅದಕ್ಕಾಗಿ ಶ್ರದ್ಧಾಂಜಲಿ ಅರ್ಪಿಸೋಣವೆಂದು ಹೇಳಿದರು.
ಇಂದು ಕಾಫಿಗೆ ಉತ್ತಮ ಬೆಲೆ ಬಂದಿದೆ, ಅರೇಬಿಕಾ ಕಾಫಿ ಬೆಳೆಯುವ ಎಲ್ಲಾ ದೇಶಗಳಲ್ಲಿ ಕಡಿಮೆ ಆಗುತ್ತಿದೆ. ರೋಬಾಸ್ಟ್ ಹೆಚ್ಚು ಉತ್ಪಾದನೆ ಆಗುತ್ತಿರುವ ಕಾರಣಕ್ಕೆ ಉತ್ತಮ ಬೆಲೆಯನ್ನು ಕಾಣಬಹುದಾಗಿದೆ ಎಂದು ವಿವರಿಸಿದರು.
ಕೆಫೆ ಕಾಫಿಡೆಯನ್ನು ಎಲ್ಲ ಉದ್ಯಮಿ ಸಿದ್ದಾರ್ಥರವರು ಸ್ಥಾಪನೆ ಮಾಡಿದ ಪರಿಣಾಮ ಅನೇಕ ಯುವಕರು ಕಾಫಿಡೆಯಲ್ಲಿ ಉದ್ಯೋಗ ಪಡೆಯಲು ಆಕರ್ಷಿತರಾಗಿದ್ದಾರೆ. ಮೊದಲು ಅರೆಬಿಕಾ ರೊಬಾಸ್ಟ್ ಎಂಬ ವ್ಯತ್ಯಾಸ ಗೊತ್ತಿರಲಿಲ್ಲ ನಂತರ ಗುಣಮಟ್ಟದ ಕಾಫಿ ತಯಾರಿಕೆ ಮೂಲಕ ಗ್ರಾಹಕರಿಗೆ ತಲುಪಿಸಲಾಯಿತು. ಈಗ ವಿಯಟ್ನಾಂನಲ್ಲಿ ನೆರಳಿನಲ್ಲಿ ಕಾಫಿಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ನಮ್ಮ ಪೂರ್ವಿಕರು ಹಲವು ಸಂಕಷ್ಟಗಳ ನಡುವೆಯೂ ಕಾಫಿಯನ್ನು ಬೆಳೆದು ಇಂದು ನಮ್ಮನ್ನು ಸಂತೋ?ವಾಗಿಟ್ಟಿದ್ದಾರೆ. ಕಾಫಿ ಬೆಳೆಗಾರರು ತಮ್ಮ ಮಕ್ಕಳನ್ನು ಬೇರೆ ಕಡೆ ಉದ್ಯೋಗಕ್ಕೆ ಕಳಿಸಿ ವೇತನಕ್ಕೆ ಕಾಯದೆ ಕಾಫಿ ಉದ್ಯೋಗ ಉದ್ಯಮದಲ್ಲಿ ತೊಡಗಿಸಿ ಎಂದು ಕಿವಿಮಾತು ಹೇಳಿದರು.
ಬೆಳೆಗಾರರಿಂದ ಕಾಫಿಯನ್ನು ಖರೀದಿ ಮಾಡಿದ ವರ್ತಕ ಕಾಫಿಪುಡಿ ಮಾರಾಟ ಮಾಡಿ, ಅಧಿಕ ಲಾಭಗಳಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಗುಣಮಟ್ಟದ ಕಾಫಿ ಮಾರಾಟ ಮಾಡಿ ಚಿಕ್ಕಮಗಳೂರಿನಲ್ಲಿ ಕಾಫಿ ಉದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಇದೆ ಎಂದು ಹೇಳಿದರು.
ಕಾಫಿ ಅಪಪ್ರಚಾರದಿಂದಾಗಿ ಅದರ ಮಾರಾಟ ಮತ್ತು ಬೆಲೆ ಕಡಿಮೆ ಇತ್ತು. ಇದಕ್ಕೆ ಟೀ ಬೆಳೆಯ ಲಾಭಿಯೂ ಪ್ರಮುಖ ಕಾರಣ ಆದ್ದರಿಂದ ಕಾಫಿ ಕುಡಿಯುವುದರಿಂದ ಹಲವು ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ಮನಗಣಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾಸುಜೇಂದ್ರ ಮಾತನಾಡಿ, ಕಾಫಿ ಬೆಳೆಗಾರರು ಆರ್ಥಿಕ ಸಬಲರಾಗದಿದ್ದರೆ ಜನಾಂಗದ ಅಭಿವೃದ್ಧಿ ಅಸಾಧ್ಯ ಎಂದರು.
ಪ್ರತಿ ತಿಂಗಳು ಸಂಘದಿಂದ ಒಂದೊಂದು ವಿ?ಯದ ಆಧಾರದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು, ಇಂದು ನಡೆದ ಈ ಕಾರ್ಯಕ್ರಮದಿಂದ ಬೆಳಗಾರರು ಮತ್ತು ಕುಟುಂಬದ ಮಹಿಳೆಯರಿಗೆ ತುಂಬಾ ಉಪಯುಕ್ತ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈ.ಬಿ.ವೆಂಕಟರೆಡ್ಡಿ, ಪ್ರಭು ಗೌಡ, ಮಹಿಳಾ ಸಂಘದ ಉಪಾಧ್ಯಕ್ಷರಾದ ಕಾವ್ಯಸುಕುಮಾರನ್, ಕಾರ್ಯದರ್ಶಿಗಳಾದ ಅಮಿತವಿಜಯೇಂದ್ರ, ಸಹಕಾರ್ಯದರ್ಶಿ ಕೋಮಲಾರವಿ, ನಿರ್ದೇಶಕರುಗಳಾದ ಚಂಪಜಗಧೀಶ್, ಶಕುಂತಲಾವೀರೇಗೌಡ, ವೇದಚಂದ್ರಶೇಖರ್, ಅನುಪಮರಮೇಶ್, ವಿನುತಪ್ರಸಾದ್, ರಾಜೇಶ್ವರಿಅಭಿಷೇಕ್, ಕೀರ್ತಿಕೌಶಿಕ್, ಸಂಧ್ಯಾನಾಗೇಶ್, ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ರತೀಶ್, ಕಳವಾಸೆ ರವಿ, ನಾರಾಯಣಗೌಡ, ಮಲ್ಲೇಶ್, ಮೋಹನ್, ಲಕ್ಷ್ಮೀ, ಹೇಮಾಸುಧಾಕರ್, ಸಂಘದ ವ್ಯವಸ್ಥಾಪಕರಾದ ತೇಜಸ್ಮೂರ್ತಿ, ಸಿಇಓ ಕುಳ್ಳೇಗೌಡ ಉಪಸ್ಥಿತರಿದ್ದರು.
Many plans to protect the coffee industry in the next 10 years