ಚಿಕ್ಕಮಗಳೂರು: : ನೂರಾರು ವರ್ಷಗಳಿಂದ ರೈತರು ಸಾಂಪ್ರದಾಹಿಕವಾಗಿ ಕೋಟೆ ಬಡಾವಣೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನರಕ ಚತುರ್ದಶಿ ಪ್ರಯುಕ್ತ ಭೂಮಿ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಕೋಟೆ ರಂಗನಾಥ್ ಹೇಳಿದರು.
ಅವರು ಇಂದು ಕೋಟೆ ಬಡಾವಣೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಕೆ ಸೋಪ್ಪು ತರುವ ಮೂಲಕ ರೈತರ ಬೆಳೆದ ಕಬ್ಬು, ರಾಗಿ, ಜೋಳ ಮುಂತಾದವುಗಳನ್ನು ಒಂದೆಡೆ ಕಟ್ಟಿಕೊಂಡು, ಕೋಟೆ ಬಡಾವಣೆಯ ಬಾವಿ ಕಟ್ಟೆಗೆ ಬರುತ್ತೇವೆ ಎಂದು ತಿಳಿಸಿದರು.
ಈ ಬಾಗದಲ್ಲಿ ಎಂಟು ದೇವಾಲಯಗಳಿದ್ದು ಲಕ್ಕೆ ಇಟ್ಟು ಪೂಜೆ ಸಲ್ಲಿಸಿ ಮನೆಗಳಿಗೆ ಹೋಗಿ ಪಶುಗಳಿಗೆ ತೊಂದರೆ ಆಗದಂತೆ ಹಾಲು, ನೀರು ಎರೆದು ಮನೆಯ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತೇವೆ ಎಂದರು.
ಮುಂದಿನ ಪೀಳಿಗೆಗೆ ಹಬ್ಬಗಳ ಧಾರ್ಮಿಕ ಭಾವನೆಗಳು ಉಳಿಸುವ ನಿಟ್ಟಿನಲ್ಲಿ ಜಾಗೃತಿ-ಅರಿವು ಮೂಡಿಸಲು ದೀಪಾವಳಿ ಹಬ್ಬದಂದು ಸಾಂಪ್ರದಾಯಕ ಪೂಜೆ ಸಲ್ಲಿಸಿ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ, ವಿಜೃಂಭಣೆಯಿಂದ ದೀಪಾವಳಿ ಆಚರಿಸಿತ್ತಿರುವ ಜನತೆಗೆ ಶುಭಾಶಯ ಕೋರಿದರು.
ಕಾಂಗ್ರೆಸ್ ಮುಖಂಡ ಆನಂದ್ ಮಾತನಾಡಿ ದೀಪಾವಳಿ ಸಂದರ್ಭದಲ್ಲಿ ಹಿಂದಿನ ತಲೆಮಾರಿನಿಂದ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಗದ್ದೆ, ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ಪೂಜಿಸುವುದು ಭೂಮಿ ಪೂಜೆ ಉದ್ದೇಶ ಎಂದರು.
ಗ್ರಾಮದ ಮುಖಂಡ ಕೋಟೆ ಸೋಮಶೇಖರ್ ಮಾತನಾಡಿ ಪ್ರತಿವರ್ಷ ರೈತ ಕುಟುಂಬದವರು ಗ್ರಾಮ ದೇವತೆಗಳನ್ನು ದರ್ಶನ ಮಾಡುವ ಮೂಲಕ ಭೂಮಿ ಪೂಜೆ ನೆರೆವೇರಿಸಿ ಲಕ್ಕೆ ಸೊಪ್ಪುಸಹಿತ ರೈತರ ಉತ್ಪನ್ನಗಳನ್ನು ಹಾಗೂ ಹಸು, ಎಮ್ಮೆ, ಎತ್ತುಗಳಿಗೆ ಸಾಂಪ್ರದಾಯಕ ಪೂಜೆ ಸಲ್ಲಿಸುವುದು ಪ್ರತೀತಿಯಾಗಿದೆ ಎಂದರು.
ಹಬ್ಬದ ಈ ಸಂದರ್ಭದಲ್ಲಿ ಒಳ್ಳೆಯ ಮಳೆ, ಬೆಳೆ, ಪ್ರಾಣಿಗಳ ಸಂರಕ್ಷಣೆ ಮಾಡುವಂತೆ ಭಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತೇವೆ, ತಿಪ್ಪೆಗಳನ್ನು ಸ್ವಚ್ಚಗೊಳಿಸಿ ದೀಪ ಇಟ್ಟು ಪ್ರಸಾದದೊಂದಿಗೆ ಪೂಜೆ ಸಲ್ಲಿಸಿ ಮುಂದೆಯು ಇದೇ ರೀತಿ ಇರುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು.
Traditional Puja at Kotbadanga on Diwali