ALSO FEATURED IN

Beetamma gang: ಕಾಫಿನಾಡಿಗೆ ಲಗ್ಗೆ ಇಟ್ಟಿರುವ ಬೀಟಮ್ಮ ಗ್ಯಾಂಗ್

Spread the love

ಚಿಕ್ಕಮಗಳೂರು: ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್‌ನಲ್ಲಿದ್ದ ಕೆಲವು ಆನೆಗಳು ಬೇರ್ಪಟ್ಟಿರುವ ಕಾಡಾನೆಹಿಂಡು ಲಗ್ಗೆ ಇಟ್ಟಿದ್ದು, ಕಾಡಾನೆಗಳ ಹಿಂಡನ್ನ ಕಂಡು ಜನರು ಎದ್ದು,ಬಿದ್ದು ಓಟಕಿತ್ತಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿತೋಟದಲ್ಲಿ ಹೂವುಬಿಟ್ಟು, ಕಾಫಿಕಟ್ಟಿ ಈಗ ಹಣ್ಣಾಗಿರುವ ಕಾಫಿಯನ್ನು ಕಾರ್ಮಿಕರು ಕೊಯ್ಲುಮಾಡುತ್ತಿರುವಾಗಲೇ ಕಾಡಾನೆ ಹಿಂಡು ತೋಟಕ್ಕೆ ಲಗ್ಗೆಇಟ್ಟಿದ್ದು, ಕಾರ್ಮಿಕರು ಜೀವಭಯದಿಂದ ಮನೆಸೇರಿಕೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.ಉದಯಗೌಡ ಮತ್ತು ಮಹೇಶಗೌಡ ಎಂಬುದವರ ತೋಟದಲ್ಲಿವೆ. ತೋಟದ ಗೇಟ್ ಮುರಿದು ೧೭ಕ್ಕೂ ಹೆಚ್ಚು ಆನೆಗಳು ತೋಟಕ್ಕೆ ನುಗ್ಗಿದ್ದರಿಂದ ಕಾಫಿಹಣ್ಣನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಕಾರ್ಮಿಕರು ಓಟ ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿನೀಡಿ ಪರಿಶೀಲಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಇದೆಹಿಂಡು ಸಕಲೇಶಪುರದಿಂದ ಬೇಲೂರು, ಕೆ.ಆರ್.ಪೇಟೆಯ ಮೂಲಕ ಚಿಕ್ಕಮಗಳೂರು ತಾಲೂಕನ್ನು ಪ್ರವೇಶಿಸಿದ್ದವು. ವಸ್ತಾರೆ, ಆಣೂರು ಜೋಳದಾಳ್‌ಮೂಲಕ ತಳಿಹಳ್ಳ, ಜಗ್ಗನಹಳ್ಳಿಯ ತೋಟಗಳಲ್ಲಿ ಬೀಡುಬಿಟ್ಟಿದ್ದವು. ಇನ್ನೇನು ಭದ್ರಾಅಭಯಾ ರಣ್ಯಕ್ಕೆ ಮುಖಮಾಡುತ್ತವೆ ಎನ್ನುವಷ್ಟರಲ್ಲಿ ಯೂಟರ್ನ್ ಹೊಡೆದು ನಲ್ಲೂರು ಗುಡ್ಡಕ್ಕೆ ಆಗಮಿಸಿದ್ದವು.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆನೆಕಾವಲು ಪಡೆ, ಪೊಲೀಸರು ಗೃಹರಕ್ಷಕ ಸಿಬ್ಬಂದಿಗಳು ಪಟಾಕಿ ಸಿಡಿಸಿ ಬಂದದಾರಿಯಲ್ಲೇ ಮರಳಿಸಲು ಯತ್ನಿಸಿದ್ದರು. ಮೂಗ್ತಿಹಳ್ಳಿಯಲ್ಲಿರುವ ಆಂಬರ್ ವ್ಯಾಲಿ ಶಾಲೆಯ ಆಟದ ಮೈದಾನದ ಪಕ್ಕದಲ್ಲಿರುವ ಅರಣ್ಯ ನೆಡುತೋಪಿನಲ್ಲಿ ಮರಿ ಆನೆಗಳೊಂದಿಗೆ ಬೀಡುಬಿಟ್ಟಿದ್ದವು.

ಬಳಿಕ ಮತ್ತಾವರ ಅರಣ್ಯದಮೂಲಕ ತಾವು ಬಂದದಾರಿಯಲ್ಲೆ ಹಿಂದಿರುಗಲು ಅಣಿಯಾಗಿದ್ದವು. ಚಿಕ್ಕಮಗ ಳೂರು ತಾಲೂಕು ಗಡಿದಾಟಿ ಬೇಲೂರು ಕಡೆಗೆ ಮುಖಮಾಡಿದಾಗ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಬೀಟಮ್ಮ ಗ್ಯಾಂಗ್ ಕಾಫಿನಾಡಿಗೆ ಬಂದಿದ್ದು, ತೋಟದಲ್ಲಿರುವ ಬಗನೆ, ಬಾಳೆಗಿಡಗಳ ಮೇಲೆ ಕಣ್ಣುಹಾಕಿವೆ. ಕಾಡಾನೆ ನಿಗ್ರಹ ಪಡೆಯ ಸಿಬ್ಬಂದಿಗಳು ಈ ಆನೆಗಳ ಚಲನವಲನದ ಮೇಲೆ ನಿಗಾಇಟ್ಟಿದ್ದಾರೆ.

Beetamma gang has laid hold of Kafinadi

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version