ಚಿಕ್ಕಮಗಳೂರು: ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳಲ್ಲಿ ಮನೆ-ಮನೆಗೆ ತೆರಳಿ ಪಡಿಸಂಗ್ರಹ ಮಾಡಿದರು.
ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಮನೆ-ಮನೆಗೆ ತೆರಳಿ ದವಸ, ಧಾನ್ಯ, ತೆಂಗಿನಕಾಯಿ, ಅಕ್ಕಿ ಬೆಲ್ಲ ಮುಂತಾದ ಪದಾರ್ಥಗಳನ್ನು ಪಡಿಸಂಗ್ರಹ ರೂಪದಲ್ಲಿ ದತ್ತಮಾಲೆ ಧರಿಸಿದ್ದ ೩೦ಕ್ಕೂ ಹೆಚ್ಚು ಶ್ರೀರಾಮ ಸೇನೆ ಕಾರ್ಯಕರ್ತರು ವಿಜಯಪುರ ರಸ್ತೆ, ಕೋಟೆಬಡಾವಣೆ, ಬಸವನಹಳ್ಳಿ, ಸೇರಿದಂತೆ ವಿವಿಧೆಡೆ ಹತ್ತಾರು ಮನೆಗಳಲ್ಲಿ ಪಡಿ ಸಂಗ್ರಹಿಸಿದರು.
ದತ್ತಮಾಲಾ ಅಭಿಯಾನದ ಅಂಗವಾಗಿ ಕನಿಷ್ಠ ೫ ಮನೆಗಳಲ್ಲಾದರೂ ಪಡಿ ಸಂಗ್ರಹಗಳನ್ನು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದ್ದು, ದತ್ತ ಗುರುಗಳಿಗೆ ಪ್ರಿಯವಾದ ಪಡಿಸಂಗ್ರಹಣೆಯನ್ನು ಎಂದು ಮಾಡುತ್ತಿದ್ದೇವೆ.
ನಂತರ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ದತ್ತಮಾಲೆ ಧಾರಣೆ ಮಾಡಿದ ಬಳಿಕ ಭಿಕ್ಷಾಟನೆ ಮಾಡಿದ ಮೂಲಕ ಪಡಿಸಂಗ್ರಹಿಸಿದಾಗ ನಮ್ಮ ಮನಸ್ಸಿನಲ್ಲಿರುವ ಲೋಭ, ಅಹಂಕಾರವೆಲ್ಲವೂ ನಿವಾರಣೆಯಾಗುತ್ತದೆ ಎಂಬುದು ಗುರುಗಳ ಅಭಿಪ್ರಾಯವಾಗಿದೆ ಎಂದರು.
ದತ್ತಮಾಲಾ ಹಿನ್ನಲೆಯಲ್ಲಿ ನಾಳೆ ಬೆಳಿಗ್ಗೆ ೮ ಗಂಟೆಗೆ ಶಂಕರಮಠದಲ್ಲಿ ಧರ್ಮಸಭೆ ನಡೆಯಲಿದ್ದು, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ೧೦ ಗಂಟೆಗೆ ಶೋಭಾಯಾತ್ರೆ ಆರಂಭಗೊಂಡು ಅಜಾದ್ಪಾರ್ಕ್ನಲ್ಲಿ ಸಮಾವೇಶಗೊಳ್ಳಲಿದೆ ಅಲ್ಲಿಂದ ದತ್ತಪೀಠಕ್ಕೆ ಹೋಗಿ ದತ್ತಮಾಲಾಧಾರಿಗಳು ಹೋಮ ಹವನಗಳಲ್ಲಿ ಪಾಲ್ಗೊಂಡು ದತ್ತಪಾದಿಕೆ ದರ್ಶನ ಪಡೆಯುವ ಮೂಲಕ ಈ ವರ್ಷದ ದತ್ತಮಾಲಾ ಅಭಿಯಾನ ತೆರೆಕಾಣಲಿದೆ ಎಂದು ತಿಳಿಸಿದರು.
ರಾಜ್ಯಾದ್ಯಾಂತ ನಾಳೆ (ನ.೧೦) ರಂದು ಸುಮಾರು ಆರು ಸಾವಿರ ದತ್ತ ಭಕ್ತರು ಇನಾಂ ದತ್ತಾತ್ರೆಯ ಪೀಠಕ್ಕೆ ಆಗಮಿಸಲಿದ್ದಾರೆ. ಇಲ್ಲಿಗೆ ಆಗಮಿಸಿದ ಭಕ್ತರಿಗೆ ವಸತಿ ಊಟದ ವಸತಿ, ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ದತೆಗಳನ್ನು ವಿಭಾಗದ ಅಧ್ಯಕ್ಷ ರಂಜಿತ್ ಶೆಟ್ಟಿ ಮತ್ತು ತಂಡ ಮಾಡಿದೆ ಎಂದು ಹೇಳಿದರು.
ಒಟ್ಟಾರೆಯಾಗಿ ಈ ಭಾರಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಹಂತ-ಹಂತವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿ, ಯಶಸ್ವಿಯಾಗಿವೆ. ವಿಶೇಷ ಅತಿಥಿಗಳಾಗಿ ಮಾಧವಿ ಲತಾ, ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ತು ಸದಸ್ಯ ಸಿ.ಟಿ ರವಿ, ಮತ್ತಿತರರು ಭಾಗವಹಿಸುತ್ತಿರುವುದರಿಂದ ಸಮಾಜದಲ್ಲಿ ಸಂಚಲನ ಮೂಡಿಸುತ್ತದೆ ಎಂದರು.
ಶೋಭಾಯಾತ್ರೆ ನಡೆಸಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ, ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿಗ್ರಹ, ಭಜನೆ, ಘೋಷಣೆಗಳು ನಡೆಯಲಿವೆ. ಇವುಗಳನ್ನು ಮಾಡಬೇಡಿ ಎಂಬ ನಿಬಂಧನೆಗಳನ್ನು ವಿಧಿಸಲು ಇದು ಶವಯಾತ್ರೆ ಅಲ್ಲ ನಮ್ಮ ಧಾರ್ಮಿಕ ಹಕ್ಕು ಆಗಿದ್ದು, ಇದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಈ ನಮ್ಮ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ಕೊಡುತ್ತದೆ ಎಂಬ ಪೂರ್ಣವಿಶ್ವಾಸವಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ಕೆಟ್ಟ ಧಾರ್ಮಿಕ ಪರಂಪರೆ ಹುಟ್ಟುಹಾಕುತ್ತಿದೆ ಇದರಿಂದ ಮುಸ್ಲಿಂ ತುಷ್ಠೀಕರಣದ ಪರಮಾವಧಿಯಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷ ರಂಜಿತ್ಶೆಟ್ಟಿ, ಶ್ರೀವಿವೇಕಾ ಚಿಂತಾಮಣಿ ಮಹಾರಾಜ ಗಾಣಿಗಾಪುರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆನಂದ್ ಅಡ್ಡಿಯಾರ್, ಅಭಿಜಿತ್ಗೌಡ, ನವೀನ ರಂಜಿತ್ ಮತ್ತಿರರು ಉಪಸ್ಥಿತರಿದ್ದರು.
Dattamala Abhiyan was thwarted by Sri Ram Sena activists