ಚಿಕ್ಕಮಗಳೂರು: ಅಂಬೇಡ್ಕರ್ ತತ್ವ-ಸಿದ್ಧಾಂತವನ್ನು ಒಳಗೊಂಡಿರುವ ಬಿಎಸ್ಪಿ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಮುನ್ನೆಡೆದರೆ ಮಾತ್ರ ಸಮಸಮಾಜ ನಿರ್ಮಿಸುವ ಮೂಲಕ ಬಡತನವನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲು ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.
ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಏರ್ಪಡಿಸಿದ್ಧ ಆರ್ಥಿಕ ಸಹಯೋಗ ದಿವಸ್, ಜನಕಲ್ಯಾಣ ದಿನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿ ಪಕ್ಷವನ್ನು ಸಂಘಟಿಸುವ ಹಾಗೂ ಚಳುವಳಿಯನ್ನು ರೂಪಿಸುವ ಸಲುವಾಗಿ ಜನರಿಂದ ದೇಣಿಗೆ ರೂಪ ದಲ್ಲಿ ಹಣ ಪಡೆಯಲಾಗುತ್ತಿದೆ. ಅದರಂತೆ ಇಂದಿನಿಂದ ಮುಂದಿನ ಜನವರಿ ೧೫ರವರೆಗೆ ಹೆಚ್ಚಿನ ಮೊತ್ತದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ರಾಜ್ಯ ಸಮಿತಿಗೆ ಹಸ್ತಾಂತರಿಸಿ ಚಳುವಳಿ ಹಾಗೂ ಇನ್ನಿತರೆ ಕಾರ್ಯಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ದೇಶದ ರಾಜಕೀಯ ಪಕ್ಷಗಳ ಇತಿಹಾಸದಲ್ಲಿ ಬಿಎಸ್ಪಿ ಹೊರತಾಗಿ ಬಹುತೇಕ ಎಲ್ಲಾ ಪಕ್ಷಗಳು ಕಾರ್ಪೋರೇಟ್ ಕಂಪನಿಗಳಿಂದ ದೇಣಿಗೆ ಪಡೆದು ಚುನಾವಣೆ ಎದುರಿಸಿವೆ ಹಾಗೂ ಚುನಾವಣಾ ಆಯೋ ಗವು ಛೀಮಾರಿಯು ಹಾಕಿದೆ. ಆದರೆ ಬಿಎಸ್ಪಿ ಎಲ್ಲದಕ್ಕಿಂತ ಭಿನ್ನವಾಗಿ ಕಾರ್ಯಕರ್ತರ ನೆರವಿನಿಂದ ಹೊರ ಹೊಮ್ಮಿ ಇಂದಿಗೂ ಉತ್ತಮ ಪಕ್ಷವಾಗಿದೆ ಎಂದು ಹೇಳಿದರು.
ದೇಶವನ್ನು ಹಲವಾರು ವರ್ಷಗಳಿಂದ ಆಳ್ವಿಕೆ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಜಾತಿ, ಧರ್ಮದ ಹೆಸರಿನಲ್ಲಿ ಕೋಮುವಾದ ಭಿತ್ತಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮು ಖ್ಯಮಂತ್ರಿಗಳೆ ಹಗರಣದಲ್ಲಿ ಸಿಲುಕಿದ ಪರಿಣಾಮ ರಾಜ್ಯವು ಅಭಿವೃದ್ದಿ ಶೂನ್ಯವಾಗುತ್ತಿದೆ ಎಂದು ಆರೋಪಿ ಸಿದರು.
ಡಾ|| ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸುವ ವೇಳೆ, ಚುನಾವಣೆ ಸೋಲಿಗೆ ಹಾಗೂ ಕೊನೆ ಕ್ಷಣ ದಲ್ಲಿ ಅಂತ್ಯಕ್ರಿಯೆಗೂ ಸ್ಥಳಾವಕಾಶ ಒದಗಿಸದೇ ಕಾಂಗ್ರೆಸ್ ನಿರಂತರ ಮೋಸ ಮಾಡಿದೆ. ಇನ್ನೊಂದೆಡೆ ಬಿಜೆಪಿ ಪಕ್ಷ ಉಗಮಗೊಳ್ಳುವ ಮುನ್ನ ಆರ್ಎಸ್ಎಸ್ ಸಂಘಟನೆ ಅಂಬೇಡ್ಕರ್ ಸಿದ್ಧಾಂತಕ್ಕೆ ಕೊಡಲಿ ಪೆಟ್ಟು ಹಾಕಿ ದ್ರೋಹವೆಸಗಿತ್ತು ಎಂದು ದೂರಿದರು.
ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ದೃಷ್ಟಿಯಿಂದ ಬೂತ್ಮಟ್ಟದಿಂದ ಕಾರ್ಯಕರ್ತರು ಜನಸಾಮಾ ನ್ಯರಿಗೆ ಪಕ್ಷದ ಸಿದ್ದಾಂತವನ್ನು ಪರಿಚಯಿಸಿ ಸದಸ್ಯತ್ವರನ್ನಾಗಿ ಮಾಡಬೇಕು. ಬಡವರು, ಕೂಲಿಕಾರ್ಮಿಕರ ಪರವಾದ ನಿಲುವು ಹೊಂದಿರುವ ಬಿಎಸ್ಪಿ ಪಕ್ಷವನ್ನು ಬಲಿಷ್ಟಗೊಳಿಸಬೇಕು ಎಂದರು.
ಪಕ್ಷದಲ್ಲಿ ಸದಸ್ಯತ್ವ ಅಭಿಯಾನ ಸಂಬಂಧ ಪ್ರತಿ ವರ್ಷಕ್ಕೆ ಒಬ್ಬರಿಂದ ಕನಿಷ್ಟ ೫೦ ರೂ.ಗಳ ಹಣ ಸಂ ಗ್ರಹಿಸುತ್ತಿದೆ ಜೊತೆಗೆ ಪಕ್ಷ ಸದೃಢತೆ ಹೋರಾಟ ರೂಪಿಸಿಕೊಳ್ಳಲು ಸಂಗ್ರಹಿಸಿದ ಹಣವನ್ನು ಬಳಸಿಕೊಳ್ಳಲಾ ಗುತ್ತಿದೆ ಎಂದ ಅವರು ಪಕ್ಷಕ್ಕಾಗಿ ಕೊಡುವ ಮನಸ್ಸು ಎಲ್ಲರಿಗೂ ಬರಬೇಕು. ಆಗ ಮಾತ್ರ ಸಮಾಜದಲ್ಲಿ ಎಲ್ಲ ವನ್ನೂ ಗಳಿಸಿಕೊಳ್ಳಲು ಸಾಧ್ಯ ಎಂದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ ಮಾತನಾಡಿ ಕಾರ್ಯಕರ್ತರಿಂದಲೇ ಪಕ್ಷವನ್ನು ಸದೃಢಗೊಳಿಸಿರು ವ ಏಕೈಕ ಪಕ್ಷ ಬಿಎಸ್ಪಿ. ದೇಶದಲ್ಲಿ ಬಿಎಸ್ಪಿ ಸ್ಥಾಪನೆಗೊಂಡ ಬಳಿಕವೇ ದಲಿತರಿಗೆ ಹೆಚ್ಚು ಬೆಲೆಸಿಕ್ಕಿದೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಅಂಭೇಡ್ಕರ್ ಹೆಸರಿನಲ್ಲಿ ಜನತೆಗೆ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದು ಯಶಸ್ವಿಗೊಳ್ಳಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ಸಮಾಜ ದಲ್ಲಿ ಎಲ್ಲರೂ ಒಂದೇ ಎಂಬ ದೃಷ್ಟಿಯಿಂದ ಅಂಭೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿದರು. ಅವರ ಆಶಯದಂತೆ ಬಿಎಸ್ಪಿ ಸಂಪೂರ್ಣ ಕಾರ್ಯಪ್ರವೃತ್ತವಾಗಿದೆ. ಕಾರ್ಯಕರ್ತರು ಪಕ್ಷದ ತಳಮಟ್ಟದಿಂ ದ ಗಟ್ಟಿಗೊಳಿಸಲು ಜನತೆಯಲ್ಲಿ ಅರಿವು ಮೂಡಿಸಿ ಸದಸ್ಯರನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿಗಳಾದ ಪಿ.ವೇಲಾಯುಧನ್, ಕೆ.ಬಿ.ಸುಧಾ, ಉಡುಪಿ- ಚಿಕ್ಕಮಗಳೂರು ಉಸ್ತುವಾರಿ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್. ವಸಂತ್, ತಾಲ್ಲೂಕು ಉಪಾಧ್ಯಕ್ಷರಾದ ಸಿದ್ದಯ್ಯ, ಹೊನ್ನಪ್ಪ, ಕಚೇರಿ ಕಾರ್ಯದರ್ಶಿ ತಂಬನ್ ಮತ್ತಿತರರರು ಉಪಸ್ಥಿತರಿದ್ದರು.
District B.S.P. Membership campaign program