ಚಿಕ್ಕಮಗಳೂರು: ಮನುಷ್ಯ ದೈನಂದಿನ ವೃತ್ತಿ ಬದುಕಿನಲ್ಲಿ ಹಲವಾರು ಒತ್ತಡದಿಂದ ಬಳಲುತ್ತಿದ್ದು, ದೇಗುಲದ ಸನ್ನಿಧಿಯಲ್ಲಿ ಸ್ವಇಚ್ಚೆಯಿಂದ ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿನ ದುಗುಡ ಮರೆಯಾ ಗಿ ಮಾನಸಿಕ ನೆಮ್ಮದಿ ಗಳಿಸಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ದಂಟರಮಕ್ಕಿ ಬಡಾವಣೆಯಲ್ಲಿ ಶ್ರೀ ಪ್ರಸನ್ನ ನೀಲಾಂಜನ ಶನೇಶ್ವರ ಸ್ವಾಮಿಯವರ ೩೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬ್ರಹ್ಮರಥೋತ್ಸವ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿ ಭಗವಂತನ ಆರಾಧನೆಯಿಂದ ಬದುಕಿನ ಸಮಸ್ಯೆಗಳು ಬಗೆಹರಿಯಲು ಸಾಧ್ಯ. ವಿಶೇಷವಾಗಿ ಶ್ರೀ ಶನೇ ಶ್ವರಸ್ವಾಮಿಯ ಹೆಚ್ಚು ಪೂಜೆ ಸಲ್ಲಿಸುವವರು ಸಂಕಷ್ಟದಿಂದ ದೂರವಿರುತ್ತಾರೆ. ಜೊತೆಗೆ ಶಾಂತಿ, ನೆಮ್ಮದಿ ಯನ್ನು ಜೀವನದಲ್ಲಿ ಗಳಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯಬಹುದು ಎಂದು ತಿಳಿಸಿದರು.
ಆಧುನಿಕ ಭರಾಟೆಯಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ. ಪೂರ್ವಿಕರ ಆಚಾರ-ವಿಚಾರಗಳ ಪದ್ಧತಿ ಉಳಿಸುವ ಕರ್ತವ್ಯವಾಗಬೇಕು ಎಂದ ಅವರು ಶ್ರೀ ಶನೇಶ್ವರ ದೇವಾಲಯ ಅಭಿವೃದ್ದಿ ವಿಚಾರದಲ್ಲೂ ಸದಾ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಇತ್ತೀಚಿನ ದಿನದಲ್ಲಿ ಮನುಷ್ಯ ನೆಮ್ಮದಿ ಗಳಿಸಿ ಕೊಳ್ಳುವಲ್ಲಿ ವಿಫಲನಾಗಿದ್ದೇನೆ. ಸದಾ ವೈಯಕ್ತಿಕ ಜೀವನ ಹಾಗೂ ಹೆಚ್ಚು ದುಡಿಮೆಯಲ್ಲಿ ತೊಡಗಿರುವ ಪರಿ ಣಾಮ ನೆಮ್ಮದಿ ಮರೆಯಾಗಿದೆ. ಹೀಗಾಗಿ ಮಾನಸಿಕ ಶಾಂತಿ ಗಳಿಸಲು ದೇವಾಲಯಕ್ಕೆ ತೆರಳುವುದು ಮುಖ್ಯ ಎಂದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಶ್ರೀ ಶನೇಶ್ವರನ ಆರಾಧ ಕರು ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ಶನಿದೇವನಿಗೆ ಪ್ರತಿಯೊಬ್ಬರು ಹೆಚ್ಚು ಭಕ್ತಿಪೂರಕರಾಗಿರುತ್ತಾರೆ. ಶನಿ ಯ ವಕ್ರದೃಷ್ಟಿ ಮನುಷ್ಯರ ಮೇಲೇ ಬೀಳದಂತೆ ಪೂಜಾವಿಧಾನಗಳನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.
ದೇವಾಲಯ ಪ್ರಧಾನ ಅರ್ಚಕ ಮಲ್ಲೇಶಸ್ವಾಮಿ ಮಾತನಾಡಿ ಭಕ್ತಾಧಿಗಳ ಸಹಕಾರದಿಂದ ಕಳೆದ ಮೂ ವತ್ತೈದು ವರ್ಷಗಳಿಂದ ನಿರಂತರವಾಗಿ ಶ್ರೀ ಶನೇಶ್ವರ ಸ್ವಾಮಿ ರಥೋತ್ಸವವನ್ನು ಹಮ್ಮಿಕೊಂಡಿದ್ದು ಇಂದು ವಿವಿಧ ಪೂಜೆ, ಹೋಮಹವನದಿ ಜೊತೆಗೆ ಬ್ರಹ್ಮರಥೋತ್ಸವ ಪೂರೈಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್ಕುಮಾರ್, ಬಿಜೆಪಿ ಮಹಿ ಳಾ ಘಟಕದ ಅಧ್ಯಕ್ಷೆ ಜಸಂತಾಅನಿಲ್ಕುಮಾರ್, ಮುಖಂಡರುಗಳಾದ ಕೆ.ಆರ್.ಅನಿಲ್ಕುಮಾರ್, ಬಿ. ಹೆಚ್.ಹರೀಶ್, ಎ.ವಿ.ಗಾಯತ್ರಿ ಶಾಂತೇಗೌಡ, ನಗರಸಭಾ ಸದಸ್ಯ ವರಸಿದ್ದಿ ವೇಣುಗೋಪಾಲ್ ಮತ್ತಿತ ರರು ಹಾಜರಿದ್ದರು.
35th Anniversary of Nilanjan Shaneshwara Swamy