ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ೨೫ ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಸಂಭ್ರಮದಲ್ಲಿ ನ.೩೦ ರಂದು ಸಂಜೆ ೭ ಗಂಟೆಗೆ ನಗರ ಕೇಸರೀಕರಣ ಅಲಂಕಾರ ಉದ್ಘಾಟನೆ ಹನುಮಂತಪ್ಪ ವೃತ್ತದಲ್ಲಿ ನಡೆಯಲಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಬಜರಂಗದಳ ಜಿಲ್ಲಾ ಸಹ ಸಂಚಾಲಕ ಶ್ಯಾಮ್ ವಿ ಗೌಡ ಡಿ.೧೧ ರಂದು ಬೈಕ್ಜಾಥ ಶ್ರೀ ರಾಮಮಂದಿರದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ, ಡಿ.೧೩ ರಂದು ಶೋಭಾಯಾತ್ರೆಯ ಧಾರ್ಮಿಕ ಸಭೆ ನಡೆಯಲಿದ್ದು, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಧಾರ್ಮಿಕ ಪುರು?ರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತಜಯಂತಿ ಉತ್ಸವದ ಅಂಗವಾಗಿ ದತ್ತಮಾಲಾ ಅಭಿಯಾನ ಕಾರ್ಯಕ್ರಮ ಕಾರ್ಯಕರ್ತರಲ್ಲಿ ಧಾರ್ಮಿಕ ಭಾವನೆಗಳ ಜೊತೆಗೆ ಅಧ್ಯಾತ್ಮಿಕ ಭಾವನೆಗಳನ್ನು ಜೋಡಿಸುವ ಹಿನ್ನೆಲೆಯಲ್ಲಿ ದತ್ತಮಾಲೆ ೧೯೯೯ ನೇ ಇಸವಿಯಲ್ಲಿ ಪ್ರಾರಂಭವಾಯಿತು. ದತ್ತಮಾಲಾ ಅಭಿಯಾನದ ೨೫ನೇ ವ?ದ ರಜತ ಮಹೋತ್ಸವದ ಪ್ರಯುಕ್ತ ಇಡೀ ನಗರವನ್ನು ಕೇಸರಿ ಬಂಟಿಂಗ್ಸ್ ಧ್ವಜಗಳಿಂದ ಅಲಂಕಾರ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿ ವ?ದಂತೆ ಈ ವ?ದ ದತ್ತಮಾಲಾ ಅಭಿಯಾನ ಡಿ.೦೬ ರಿಂದ ಪ್ರಾರಂಭವಾಗಲಿದ್ದು, ಈ ವ? ದತ್ತಮಾಲಾ ಅಭಿಯಾನಕ್ಕೆ ೨೫ ವ? ಆಗಲಿದ್ದು, ಸಾರ್ವಜನಿಕರಲ್ಲಿ ವಿಶ್ವ ಹಿಂದೂ ಪರಿ?ತ್ ಬಜರಂಗದಳ ದತ್ತಜಯಂತಿ ಉತ್ಸವ ೨೦೨೪ ಅಲಂಕಾರ ಸಮಿತಿ ಪರವಾಗಿ ನಿಮ್ಮ ಮನೆ ಹಾಗೂ ಕಟ್ಟಡಗಳ ಮೇಲೆ ಕೇಸರಿ ಧ್ವಜವನ್ನು ಆರಿಸಿ ಎಂದು ಮನವಿ ಮಾಡಿದರು.
೩೫ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಲಂಕಾರ ಮಾಡಲು ನಿಶ್ಚಯಿಸಲಾಗಿದ್ದು, ಶೋಭಾಯಾತ್ರೆ ಸಂಚರಿಸುವ ಮಾರ್ಗದಲ್ಲಿ ಸಂಪೂರ್ಣ ಕೇಸರಿಮಯ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಲಂಕಾರ ಸಮಿತಿ ಪ್ರಮುಖರಾದ ಅಮಿತ್ಗೌಡ, ಸುನಿಲ್ ಆಚಾರ್ಯ, ರವಿಕಿರಣ್, ಘನಶ್ಯಾಮ್ ಕೋಟೆ, ಆಕಾಶ್, ರಾಹುಲ್ ದಂಡರಮಕ್ಕಿ ಇದ್ದರು.
Dattamala Campaign kicks off with city decoration on November 30