ALSO FEATURED IN

Inter-high school level singing competition:ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿನಿ ಅನಘ ಪ್ರಥಮ

Spread the love

ಚಿಕ್ಕಮಗಳೂರು: ನಗರದ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಅಂತರ ಪ್ರೌಢಶಾಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿನಿ ಅನಘ ಪ್ರಥಮ ಸ್ಥಾನ ಪಡೆದಿದ್ದಾರೆ.

ಕುವೆಂಪು ವಿದ್ಯಾನಿಕೇತನದ ನಮ್ರತಾ ದ್ವಿತೀಯ. ಹಾಸನ ಸಂತ ಜೋಸೆಫರ ಶಾಲೆಯ ಲಾವಣ್ಯ ತೃತೀಯ. ಚರ್ಚಾ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಶಾಲೆಯ ಜೈಮಾ ದಾಹಿಯ ಮತ್ತು ಸುಮಿತ್ ಎಜುಕೇಶನ್ ಇನ್ಸ್ಟಿಟ್ಯೂಟ್ ನ ನಿಕ್ಷೇಪ್ ಪ್ರಥಮ. ಕುವೆಂಪು ಶಾಲೆಯ ಪ್ರಾರ್ಥನಾ ಹಾಗೂ ಯುನೈಟೆಡ್ ಶಾಲೆಯ ಅಪ್ರಾ ಆಜೀರ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಚಿತ್ರಕಲೆ ವಿಭಾಗದಲ್ಲಿ ಕುವೆಂಪು ವಿದ್ಯಾನಿಕೇತನದ ಸಾಯಿಪ್ರೇಕ್ಷ ಪ್ರಥಮ. ಸಂತ ಜೋಸೆಫರ ಶಾಲೆಯ ಆಶ್ರಯ್ ಎಮ್ ನಾಯಕ್ ದ್ವಿತೀಯ. ಜೆವಿಎಸ್ ಶಾಲೆಯ ದೀಪ್ತಿ ಮನ್ನಾ ತೃತೀಯ. ರಸಪ್ರಶ್ನೆಯಲ್ಲಿ ಕುವೆಂಪು ಶಾಲೆಯ ತಂಡ ಪ್ರಥಮ. ಅಂಬರ್ ವ್ಯಾಲಿ ಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಪ್ರಬಂಧ ಸ್ಪರ್ಧೆಯಲ್ಲಿ ಕುವೆಂಪು ವಿದ್ಯಾನಿಕೇತನದ ನುಡಿ ಆರ್ ಗೌಡ ಪ್ರಥಮ. ಪೂರ್ಣಪ್ರಜ್ಞ ಶಾಲೆಯ ಧನ್ಯಾರಾಗ ದ್ವಿತೀಯ. ಹಾಸನ ಸಂತ ಜೋಸೆಫರ ಶಾಲೆಯ ನಿಶಾ ಚೌದರಿ ತೃತೀಯ ಸ್ಥಾನ ಪಡೆದರು.

ಬೆಳಗಿನಿಂದ ಸಂಜೆಯವರೆಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ೨೦ ಶಾಲೆಗಳ ೧೬೦ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಸ್ಪರ್ಧೆಯ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಆರ್. ಲೋಹಿತ್ ಮಕ್ಕಳು ತಮ್ಮ ಸರ್ವಾಂಗೀಣ ಬೆಳವಣಿಗೆಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಸರ್ವಾಂಗೀಣ ಬೆಳವಣಿಗೆಯ ಜೊತೆಗೆ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ. ಸಿ. ಶಂಕರ್ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಕಳೆದ ಹತ್ತು ವರ್ಷಗಳಿಂದ ಶಾಲೆಯಲ್ಲಿ ಇಂತಹ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಾಲೆಯ ಟ್ರಸ್ಟಿ ಅರ್ಚನಾ ಶಂಕರ್. ಪ್ರಾಂಶುಪಾಲ ವಿ. ಎಸ್. ರಾಘವೇಂದ್ರ. ಉಪ ಪ್ರಾಂಶುಪಾಲೆ ಶಮ್ಮಿ. ಉಪನ್ಯಾಸಕರಾದ ಮಧು. ಓಂಕಾರ ಮೂರ್ತಿ ಉಪಸ್ಥಿತರಿದ್ದರು.

Inter-high school level singing competition

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version