ಚಿಕ್ಕಮಗಳೂರು: ದೇಶ-ವಿದೇಶಗಳ ಆಗುಹೋಗುಗಳ ಬಗ್ಗೆ ಅರಿತಿರುವ ಹಾಗೂ ರಾಷ್ಟ್ರದ ಸಮಗ್ರ ಹಿತಚಿಂತನೆ ಬಯಸುವ ಯುವ ಕಲಾವಿದರು, ಲೇಖಕರು, ಬರಹಗಾರರು ಹಾಗೂ ಕವಿಗಳಿಗೆ ಮಲೆನಾಡು ಗೋಷ್ಠಿ ಬಹಳಷ್ಟು ಶಕ್ತಿ ತುಂಬಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ‘ನಮ್ಮ ದೇಶ, ನಮ್ಮ ಸಂಸ್ಕೃತಿ ಎಂಬ ವಿಚಾರಧಾರೆ’ ಕುರಿತ ಮಲೆನಾಡಿನ ಸಮ್ಮೇಳನ ಆಚರಣೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ ಸಾಹಿತ್ಯಾತ್ಮಕ ಚಟುವಟಿಕೆಗಳ ಮುಖಾಂತರ ಕೆಲವರು ರಾಷ್ಟ್ರದ ಇತಿಹಾಸ ತಿರುಚಿ ಹಿಂದುತ್ವ ವಿರೋ ಧಿ ನೀತಿ ಅನುಸರಿಸುತ್ತಿವೆ. ದೇಶದ ಜನತೆಯಲ್ಲಿ ರಾಷ್ಟ್ರೇಪ್ರಮ ನಶಿಸಿ, ಉಳಿದೆಲ್ಲವನ್ನು ಬಿತ್ತುವ ಕಾರ್ಯದಲ್ಲಿ ತೊಡಗಿವೆ. ಹೀಗಾಗಿ ಸಮ್ಮೇಳನದಲ್ಲಿ ರಾಷ್ಟ್ರದ ಸಮಗ್ರ ಪರಿಚಯ, ಹಿಂದುತ್ವಕ್ಕಾಗಿ ಮಡಿದವರ ವಿಚಾರಧಾ ರೆಗಳನ್ನು ಲೇಖಕರು ಮಂಡಿಸಬಹುದು ಎಂದರು.
ಹೊಸ ವಿಚಾರದಡಿ ರೂಪಿಸಿರುವ ಗೋಷ್ಠಿಯನ್ನು ಕಾರ್ಯಕರ್ತರಲ್ಲದೇ, ವಿರೋಧಿಸುವ ಬಣವು ಚರ್ಚಿಸಬೇಕು. ಈ ಸಂಘರ್ಷಗಳು ಸಮಾಜಕ್ಕೆ ಒಂದು ಸೇತುವೆಯಾಗಬೇಕು. ಪಕ್ಷದಿಂದ ಹಮ್ಮಿಕೊಂಡಿ ರುವ ಗೋಷ್ಟಿಗೆ ಶಕ್ತಿ ಕೇಂದ್ರದ ಪ್ರಮುಖರು ಗಮನಹರಿಸಬೇಕು. ಗ್ರಾಮಗಳಲ್ಲಿ ರಾಷ್ಟ್ರದ ಹಿತಾಸಕ್ತಿದಡಿ ಎಲೆ ಮರೆಕಾಯಂತಿರುವ ಲೇಖಕರನ್ನು ಗುರುತಿಸಿ ಕರೆತರಬೇಕು ಎಂದು ಸೂಚಿಸಿದರು.
ಜನತೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಕೆಲವರು ಕೈವಶಪಡಿಸಿ ರಾಷ್ಟ್ರದ ಸತ್ಯಾಂಶವನ್ನು ಮರೆಮಾಚುತ್ತಿವೆ. ಅಲ್ಲದೇ ಬಿಜೆಪಿ ವಿರುದ್ಧ ತಂಡೋಪಾದಿಯಲ್ಲಿ ಷಡ್ಯಂತ್ರ ರೂಪಿಸುವವರಿಗೆ ಈ ಸಮ್ಮೇಳ ನ ಗೋಷ್ಠಿ ಬಿಸಿಮುಟ್ಟಲಿದೆ. ಹೀಗಾಗಿ ಆಸಕ್ತಿ ಹೊಂದಿರುವ ಲೇಖಕರು, ಸಂಘ-ಸಂಸ್ಥೆ ಮುಖಂಡರು ಹಾ ಗೂ ಸರ್ಕಾರಿ ನೌಕರರು ಒಂದೆಡೆ ಸೇರಿಸುವ ಕಾರ್ಯವಾದರೆ ಗೋಷ್ಟಿ ಪ್ರಭಾವ ಬೀರಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ನೇರವಾಗಿ ಪಕ್ಷದಲ್ಲಿ ಗುರುತಿಸಿಕೊಳ್ಳದೇ, ವೈಯಕ್ತಿಕವಾಗಿ ಸಣ್ಣಪುಟ್ಟ ಲೇಖನದ ಮುಖಾಂತರ ಬೆಂಬಲಿಸುವವರು ಕಾಣಸಿಗ ಲಿದ್ದು ರಾಷ್ಟ್ರಹಿತದ ಪರಿಕಲ್ಪನೆ ಹೊಂದಿರುವ ಬರಹಗಾರರನ್ನು ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು ಗೋ ಷ್ಟಿಗೆ ಆಹ್ವಾನಿಸುವ ಮುಖಾಂತರ ರಾಷ್ಟ್ರಹಿತಾಸಕ್ತಿಗೆ ಕೈಜೋಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಹಣೆಪಟ್ಟಿ ಕಟ್ಟಿಕೊಳ್ಳದ ಕೆಲವು ಎಡಪಂಥೀಯ ಸಾಹಿತಿಗಳು ನಿರಂತರ ದೇಶದ ಸಂ ಸ್ಕೃತಿಗೆ ಧಕ್ಕೆ ತರುತ್ತಿವೆ. ದೇಶವನ್ನಾಳಿದ ಭಾಜಪವನ್ನು ತುಳಿಯುವುದೇ ನಿತ್ಯದ ಕಾಯಕ ಮಾಡಿಕೊಂಡಿರು ವ ಎಡಪಂಥೀಯ ಮುಖವಾಡ ಕಳಚಿ ಹೊರತೆಗೆಯಲು ಮಲೆನಾಡು ಸಮ್ಮೇಳನ ಗೋಷ್ಠಿಗಳು ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ತಯಾರಿ ಸಂಬಂಧ ಕೆಲವು ಮುಖಂಡರುಗಳು ಮಾತನಾಡಿ ಸಮ್ಮೇಳನ ಗೋಷ್ಠಿಗೆ ಸ್ವಪಕ್ಷ, ವಿದ್ಯಾರ್ಥಿ ಪರಿಷತ್, ನಿವೃತ್ತ ನೌಕರರಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೇ ಕಾರ್ಯಕ್ರಮದ ಯಶಸ್ವಿಗೆ ಖ್ಯಾತ ವಾಗ್ಮಿಗಳ ಆಹ್ವಾನಿಸಿ ರಾಷ್ಟ್ರದ ರೂಪರೇಷಗಳು, ಸಮಗ್ರ ಚಿಂತನೆಗಳ ಸಾರಾಂಶವನ್ನು ಅರಿವು ಮೂ ಡಿಸುವವರಿಗೆ ಕರೆತರಬೇಕು ಎಂದರು.
ನಾಡಿನ ಕೆಲವು ಸಾಹಿತಿಗಳು ದೇಶದ ಇತಿಹಾಸ ಪುಸ್ತಕಗಳಲ್ಲಿ ಸುಳ್ಳು ವದಂತಿ ಹಬ್ಬಿಸುತ್ತಿವೆ. ವಿಷಾಧ ವೆಂದರೆ ಎಡಪಂಥೀಯ ಪ್ರಾಧ್ಯಾಪಕರು ಆ ಪುಸ್ತಕಗಳನ್ನು ಅತಿಹೆಚ್ಚು ಖರೀದಿ ವಿದ್ಯಾರ್ಥಿಗಳಿಗೆ ಹಂಚುತ್ತಿರು ವುದು ದುದೈರ್ವ ಎಂದ ಅವರು ನಕಲಿ ಪ್ರಗತಿಪರರ, ಎಡಪಂಥಿಯರ ಸತ್ಯವನ್ನು ಬಯಲಿಗೆಳೆಯಲು ವಿಚಾರ ಗೋಷ್ಠಿಗಳು ಬಹಳ ಅಗತ್ಯವಿದೆ ಎಂದರು.
ನೆರೆದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗೊಂಡರೆ ಬಿಜೆಪಿ ಹೊರತಾಗಿ ಭೇರ್ಯಾವ ಪಕ್ಷಗಳು ಧ್ವನಿ ಗೂಡಿಸುತ್ತಿಲ್ಲ. ಅದೇ ಪ್ಯಾಲೆಸ್ತೀನ್ ಪರವಾಗಿ ವಿರೋಧಿ ಅಲೆಗಳು ಧ್ವನಿಗೂಡಿಸುತ್ತಿವೆ. ಹಾಗಾಗಿ ಖಡ್ಗಗಿಂತ ಲೇಖನಿ ಹರಿತು ಎಂಬಂತೆ ಸಾಹಿತ್ಯದ ಶಕ್ತಿಯೊಂದಿಗೆ ಸಂಘಟಿತರಾಗಿ ಸತ್ಯವನ್ನು ರಾಜ್ಯದ ಉದ್ದಗಲಕ್ಕೂ ಪಸರಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ ಆರ್ ಎಸ್ಎಸ್ ಸಂಘಟನೆ ಎಂದಿಗೂ ಜಾತಿ ಆಧಾರದಲ್ಲಿಲ್ಲ. ರಾಷ್ಟ್ರಚಿಂತನೆಗೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಭಾಜಪ ರಾಜಕಾರಣವು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯಿದೆ. ಹೀಗಾಗಿ ಯುವ ಕರನ್ನು ಎಚ್ಚರಿಸಿ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಾಯೋಗಿಕವಾಗಿ ಸಮ್ಮೇಳನ ಆಯೋಜಿಸಿ ಇದೀಗ ಚಿಕ್ಕಮಗ ಳೂರು ಹಮ್ಮಿಕೊಳ್ಳಲು ನಿರ್ಧರಿಸಿ ದಿನಾಂಕವನ್ನು ನಿಗಧಿಗೊಳಿಸಲಾಗುವುದು ಎಂದರು.
ಈ ಸಭೆಯಲ್ಲಿ ಮಲೆನಾಡು ಸಮ್ಮೇಳನದ ಮುಖ್ಯಸ್ಥ ಬಿ.ರಾಜಪ್ಪ, ವಾಗ್ಮಿಗಳಾದ ಸ.ಗಿರಿಜಾಶಂಕರ್, ಮೋಹನ್ ಭಗವಾನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ನರೇಂದ್ರ, ಪುಣ್ಯಪಾಲ್, ರವಿಂ ದ್ರ ಬೆಳವಾಡಿ, ಮುಖಂಡರುಗಳಾದ ಕೋಟೆ ರಂಗನಾಥ್, ಕುರುವಂಗಿ ವೆಂಕಟೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಈಶ್ವರಹಳ್ಳಿ ಮಹೇಶ್, ಸಂತೋಷ್ ಕೋಟ್ಯಾನ್, ವಕೀಲರು, ಹಿರಿಯ ಪತ್ರಕರ್ತರು ಸೇರಿದಂ ತೆ ಮತ್ತಿತರರಿದ್ದರು.
Preparatory meeting for the celebration of the Malanadu Conference on the ideology of ‘Our Country, Our Culture’