ALSO FEATURED IN

cow protection:ಗೋಸಂರಕ್ಷಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ

Spread the love

ಚಿಕ್ಕಮಗಳೂರು:  ಮತದಾರರ ಬಿಟ್ಟಿ ಭಾಗ್ಯಗಳಿಗೆ ಹಣ ನೀಡುವ ಸರ್ಕಾರ ನೊಂದಾಯಿತ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡದಿರುವ ಪರಿಣಾಮ ಗೋವುಗಳ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಕೊಪ್ಪ ತಾಲ್ಲೂಕು ಹೆರೂರು ಕೆಮ್ಮಣ್ಣು ಶ್ರೀ ಕಾಮಧೇನು ಗೋಸೇವಾ ಟ್ರಸ್ಟ್ ನಾಗೇಶ್ ಅಂಗೀರಸ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಗೋ ನಿರ್ಲಕ್ಷ್ಯದಿಂದಾಗಿ ಗೊಬ್ಬರವನ್ನು ಬಳಕೆ ಮಾಡುತ್ತಿಲ್ಲ. ಜೊತೆಗೆ ಭೂಮಿಗೆ ಅತಿಯಾದ ಕೆಮಿಕಲ್ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಸರ್ಕಾರ ಆದೇಶದಂತೆ ಪ್ರತೀ ಹಸುವಿಗೆ ೧೭ ರೂ ೫೦ ಪೈಸೆ ಅಂತೆ ನೀಡಬೇಕಾಗಿದ್ದು, ಈಗ ಒಂದು ತಿಂಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಸಾಂವಿಧಾನಿಕವಾಗಿ ನಿಗಧಿಪಡಿಸಿದ ಗೋಶಾಲೆ ಮತ್ತು ಗೋವುಗಳ ನಿರ್ವಹಣೆಗೆ ನೀಡುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಅವರು, ಹಿಂದುತ್ವ, ತತ್ವ ಸಿದ್ಧಾಂತ ಎಂದು ಹೇಳಿಕೊಳ್ಳುವ ಪ್ರತಿಪಕ್ಷ ಬಿಜೆಪಿ ಈ ಬಗ್ಗೆ ಜಾಣ ಮೌನ ವಹಿಸಿರುವುದು ಖಂಡನೀಯ ಎಂದರು.

ಜಿಲ್ಲೆಯಲ್ಲಿ ಗೋಕಳ್ಳತನ, ಅಕ್ರಮ ಸಾಗಾಣೆ, ಗೋಹತ್ಯೆ ಮಿತಿಮೀರಿದ್ದು, ರಸ್ತೆಬದಿ, ಬಸ್ ನಿಲ್ದಾಣ ಪಕ್ಕ, ಅರಣ್ಯ, ನದಿಪಾತ್ರಗಳಲ್ಲಿ ಗೋಹತ್ಯೆ ಹವ್ಯಾತವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಇಲಾಖೆ ಮೌನವಾಗಿದೆ. ಪ್ರಾಮಾಣಿಕ ಅಧಿಕಾರಿಗಳು ಗೋರಕ್ಷಣೆಗೆ ಮುಂದಾಗಿದ್ದು, ಈ ಕುರಿತು ಜಿಲ್ಲಾಡಳಿತ ಬಿಗಿ ನಿಲುವು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಕಾಫಿ, ಟೀ ಎಸ್ಟೇಟ್, ರಬ್ಬರ್ ಎಸ್ಟೇಟ್‌ಗಳಲ್ಲಿ ಅಸ್ಸಾಂನಿಂದ ಆಗಮಿಸಿರುವ ರೋಹಿಂಗ್ಯಾಗಳು ಸದ್ದಿಲ್ಲದೆ ಗೋಹತ್ಯೆ ನಡೆಸುತ್ತಿದ್ದು, ಇವು ತಂಡಗಳ ರೂಪದಲ್ಲಿ ಗೋಮಾಂಸ ಸಾಗಾಣೆ ಮಾಡುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಗೋ ಸಂರಕ್ಷಣೆ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಇದಕ್ಕೆ ಸರ್ಕಾರ ಪೂರಕವಾದ ಅಂಶವನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.

The government is not releasing funds for cow protection.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version