ಚಿಕ್ಕಮಗಳೂರು: ಮಕ್ಕಳಲ್ಲಿರುವ ಅಡಗಿರುವ ಕಲೆ, ಸಂಗೀತ, ಸಾಹಿತ್ಯ ಹಾಗೂ ಸಾಂ ಸ್ಕೃತಿಕ ಚಟುವಟಿಕೆಗಳನ್ನು ಹೊರಹೊಮ್ಮಿಸುವ ಶಿಕ್ಷಕರು ಶ್ರಮಿಸಿದಾಗ ವಿದ್ಯಾರ್ಥಿಗಳು ಸಮಾಜದ ಮು ಂಚೂಣಿಯಲ್ಲಿ ಪ್ರತೀತಿ ಹೊಂದಲು ಸಾಧ್ಯ ಎಂದು ಉಪವಿಭಾಗಾಧಿಕಾರಿ ದಲ್ಜಿತ್ಕುಮಾರ್ ಹೇಳಿದರು.
ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಪಿ.ಎಂ.ಶ್ರೀ ಕೇಂದ್ರಿಯ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆರಂಭಗೊಂಡಿರುವ ಕೇಂದ್ರೀಯ ವಿದ್ಯಾಲಯ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುತ್ತಿದೆ. ಪಠ್ಯದ ಜೊತೆಗೆ ಕ್ರೀಡಾಕೂಟ, ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತಿರುವುದು ಖುಷಿಯ ಸಂಗತಿ ಎಂದರು.
ದೇಶಾದ್ಯಂತ ಹಲವಾರು ಶಾಲೆಗಳನ್ನು ಹೊಂದಿರುವ ಕೇಂದ್ರಿಯ ವಿದ್ಯಾಲಯ ಮಕ್ಕಳಲ್ಲಿ ಪಠ್ಯದ ಸಮ ಗ್ರ ಅರಿವು, ಆತ್ಮಸ್ಥೈರ್ಯ, ಶಾರೀರಿಕ ಹಾಗೂ ದೈಹಿಕ ಶಕ್ತಿ ತುಂಬಿ ಕಾಳಜಿ ವಹಿಸುತ್ತಿರುವುದು ಭವಿಷ್ಯದಲ್ಲಿ ಮಕ್ಕಳ ಬದುಕಿಗೆ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಕೇಂದ್ರಿಯ ವಿದ್ಯಾಲಯ ಪ್ರಾಚಾರ್ಯೆ ಮಾಲತಿ ಮಾತನಾಡಿ ಪ್ರಸ್ತುತ ಶಾಲೆಯಲ್ಲಿ ೩೫೦ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು ಒಂದರಿಂದ ಹತ್ತನೇ ತರಗತಿಗಳಿವೆ. ಉತ್ತಮ ಶಿಕ್ಷಕರನ್ನು ಒದಗಿಸಿ ಗುಣಮಟ್ಟದ ಪಠ್ಯವನ್ನು ಬೋಧಿಸಲಾಗುತ್ತಿದೆ ಎಂದ ಅವರು ಮುಂದೆ ಪಿಯುಸಿ ತರಗತಿ ತೆರೆಯು ವ ಆಲೋಚನೆ ಹೊಂದಲಾಗಿದೆ ಎಂದರು.
ಶಾಲಾ ಪೋಷಕರ ಸಂಘದ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ ಕೇಂದ್ರಿಯ ಶಾಲೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಹೊರೆಯಾಗದಂತೆ ಸಂಘದಿಂದ ರಿಯಾಯಿತಿ ದರದಲ್ಲಿ ಅನುಕೂಲವಾಗಲು ಮೂರು ಬಸ್ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇದರಿಂದ ಮಕ್ಕಳ ದೈನಂದಿನ ಓಡಾಟಕ್ಕೆ ಬಹಳಷ್ಟು ಉಪಯೋ ಗವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರಿಯ ವಿದ್ಯಾಲಯ ಶಿಕ್ಷಕರಾದ ಪ್ರಕಾಶ್, ಚೈತ್ರ, ಸೂರಜ್, ಅಬ್ರೀನ್, ಪೋಷಕ ರ ಸಂಘದ ಕಾರ್ಯದರ್ಶಿ ಸುಚಿತ್ರಾ, ಖಜಾಂಚಿ ಯತೀಶ್, ಉಪಾಧ್ಯಕ್ಷ ಕುಮಾರಸ್ವಾಮಿ, ಸಹ ಕಾರ್ಯ ದರ್ಶಿ ಶ್ರೀ ಲಕ್ಷ್ಮೀ ನಾರಾಯಣ್, ನಿರ್ದೇಶಕರುಗಳಾದ ಶಬರೀಶ್, ಮಮತಾ, ರಾಘವೇಂದ್ರ, ಕಿರಣ್, ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ ರಾಜ್ ಅರಸ್ ಮತ್ತಿತರರಿದ್ದರು.
Kendriya Vidyalaya’s anniversary program