ALSO FEATURED IN

Bharatanatyam:ಡಿ.28 ರಂದು ಎಲ್.ಆರ್. ಚಿನ್ಮಯಿ ಅರ್ಪಿಸುವ ಭರತನಾಟ್ಯ

Spread the love

ಚಿಕ್ಕಮಗಳೂರು: ವಿದುಷಿ ಸುಮನ ರಾಮಚಂದ್ರ ಅವರ ಬಳಿ ಭರತನಾಟ್ಯ ಶಿಕ್ಷಣ ಪಡೆಯುತ್ತಿರುವ ಎಲ್.ಆರ್. ಚಿನ್ಮಯಿ ಅರ್ಪಿಸುವ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಡಿ.೨೮ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೫ ಗಂಟೆಗೆ ಆಯೋಜಿಸಲಾಗಿದೆ ಎಂದು ಚಿನ್ಮಯಿ ಸಂಬಂ ಶೈಲಜಾ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಎಲ್.ಕೆ.ರಮೇಶ್ ಮತ್ತು ಶೃತಿ ಅವರ ಪುತ್ರಿಯಾಗಿರುವ ಚಿನ್ಮಯಿ ಅವರು ಬೆಂಗಳೂರು ಜೈನ್ ವಿವಿಯಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ನಗರದ ಪ್ರತಿಷ್ಠಿತ ನಾಟ್ಯಶಾಲೆಯಾದ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಭರತನಾಟ್ಯ ಗುರು ಸುಮನರಾಮಚಂದ್ರ ಅವರ ಬಳಿ ಚಿನ್ಮಯಿ ಐದನೇ ವಯಸ್ಸಿನಿಂದ ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದಾಳೆ ಎಂದರು.

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಚಿನ್ಮಯಿ ಸದ್ಯ ಸೀನಿಯರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಅನೇಕ ಸಭೆ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾಳೆ. ಇವಳಲ್ಲಿರುವ ಕಲಾಸಕ್ತಿಗೆ ಮೆಚ್ಚಿ ಇಡೀ ಕುಟುಂಬ ವರ್ಗ ಇವಳ ಬೆಳವಣಿಗೆ ಹಾಗೂ ಕಲಿಕೆಗೆ ಬೆನ್ನಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿನ್ಮಯಿ, ತಾಯಿ ಶೃತಿರಮೇಶ್, ಸಂಬಂಧಿಕರಾದ ನಂಜುಂಡ, ಅನುಸೂಯ ಇದ್ದರು.

Bharatanatyam to be performed by LR Chinmayi on December 28

Facebook
X
WhatsApp
Telegram
Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

[t4b-ticker]
Exit mobile version