ಚಿಕ್ಕಮಗಳೂರು: ಪ್ರವಾಸಿತಾಣಗಳಲ್ಲಿ ಹೊಸ ವ?ದ ಮೋಜು ಮಸ್ತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಿಗೆ ಮಂಗಳವಾರ ಸಂಜೆ ೬ ಗಂಟೆಯಿಂದ ಬುಧವಾರ ಬೆಳಿಗ್ಗೆ ೬ ಗಂಟೆಯವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ ಎಂದು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದರು
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊಸ ವ?ದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದು ಜಿಲ್ಲೆಯಲ್ಲಿ ರೇವ್ ಪಾರ್ಟಿಗಳನ್ನು ನಿ?ಧಿಸಲಾಗಿದ್ದು ಒಂದು ವೇಳೆ ಇಂತಹ ಪಾರ್ಟಿಗಳನ್ನು ನಡೆಸಿದರೆ ಆಯೋಜಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುದಾಗಿ ಎಸ್ಪಿ ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ರಾತ್ರಿ ೧೦ ಗಂಟೆಯ ನಂತರ ಔಟ್ ಡೋರ್ ಡಿಜೆಗಳಿಗೆ ನಿ?ಧ ಹೇರಲಾಗಿದೆ. ಹೊಸ ವ?ದ ಆಚರಣೆಗಳಿಗೆಂದು ಈ ಬಾರಿ ನೂತನವಾಗಿ ಪರಿಚಯಿಸಿರುವ ತಾತ್ಕಾಲಿಕ ಸಿಎಲ್ ೫ ಲೈಸೆನ್ಸ್ ಪಡೆದವರು ಕೂಡ ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಮಂಗಳವಾರ ಸಂಜೆಯ ನಂತರ ಪೊಲೀಸರು ರಸ್ತೆಗಳಲ್ಲಿ ಜಿಗ್ ಜಾಗ್ ರೀತಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಮದ್ಯಪಾನ ಮಾಡಿ ವೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣೀಡಲಿದ್ದಾರೆ ಎಂದು ಹೇಳಿ, ಜಿಲ್ಲೆಯಾದ್ಯಂತ ಈಗಾಗಲೇ ಡ್ರಿಂಕ್ & ಡ್ರೈವ್ ಮಾಡುವವರ ವಿರುದ್ಧ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಲಾಗುವುದು ಎಂದರು
ಹೊಸ ವ?ಚರಣೆಯ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ವಯಂಸೇವಕರು ಅಥವಾ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲು ತಿಳಿಸಲಾಯಿತು. ಹೊಸ ವ?ಚರಣೆಯ ಸಂದರ್ಭದಲ್ಲಿ ಎನ್ ಆರ್ ಐ / ವಿದೇಶಿಗರು / ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ವಿಶೇ? ಖಾಳಜಿ ವಹಿಸುವಂತೆ ಸೂಚಿಸಲಾಯಿತು.
ಹೊಸ ವ?ಚರಣೆ ಕಾರ್ಯಕ್ರಮ ನಡೆಸುವ ಸ್ಥಳಗಳಲ್ಲಿ ಹಾಗೂ ಸ್ವಾಗತ ಕಾರರ ಕೊಠಡಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಯಿತು. ರೆಸಾರ್ಟ್ ಹೋಂ ಸ್ಟೇ ಗಳಲ್ಲಿ ಹೊಸ ವ?ಚರಣೆ-೨೦೨೫ ರ ಸಂಬಂಧ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಧ್ವನಿವರ್ಧಕದ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳತಕ್ಕದ್ದು ಹಾಗೂ ನೆರೆಹೊರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು.
ಹೊಸ ವ?ಚರಣೆಯ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಳಿಂದ ಅಥವಾ ಸಂಘಟನೆಗಳಿಂದ ಗಲಾಟೆ ಅಥವಾ ಅಹಿತಕರ ಸನ್ನಿವೇಶಗಳು ಉಂಟಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ, ಹಿರಿಯ ಅಧಿಕಾರಿಗಳಿಗೆ ಅಥವಾ ಜಿಲ್ಲಾ ನಿಯಂತ್ರಣ ಕೊಠಡಿ ೯೪೮೦೮೦೫೧೦೦ ಸಂಖ್ಯೆಗೆ ಕರೆ ಅಥವಾ ವಾಟ್ಸಪ್ಪ್ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಅನ್ವಯ ರಾತ್ರಿ ೧೦:೦೦ ಗಂಟೆಯಿಂದ ಬೆಳಗ್ಗೆ ೬:೦೦ ವರೆಗೆ ಧ್ವನಿವರ್ಧಕಗಳನ್ನು ಬಳಸದಂತೆ ಹಾಗೂ ಮಾಲಿನ್ಯಕಾರಕ ಪಟಾಕಿಗಳನ್ನು ಸಿಡಿಸದಂತೆ ಸೂಚಿಸಲಾಯಿತು. ಹೋಂ ಸ್ಟೇ ರೆಸಾರ್ಟ್ ಮಾಲೀಕರು ಹೊಸ ವ?ಚರಣೆ ಸಂದರ್ಭದಲ್ಲಿ ಆಗಮಿಸುವ ಅತಿಥಿಗಳಿಗೆ ಸೂಕ್ತವಾದ ರಸ್ತೆ ಮತ್ತು ಉತ್ತಮ ಪಾಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಲಾಯಿತು ಎಂದರು
ಹೊಸ ವ?ಚರಣೆಯ ಸಂದರ್ಭದಲ್ಲಿ ಮಾದಕ ದ್ರವ್ಯ / ವಸ್ತುಗಳ ಬಳಕೆಯ ಸಾಧ್ಯತೆ ಯಿರುವುದರಿಂದ ಈ ಸಂಬಂಧ ಯಾವುದೇ ಮಾಹಿತಿ ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು. ಹೊಸ ವ?ಚರಣೆ ಹಿನ್ನೆಲೆಯಲ್ಲಿ ಆಗಮಿಸುವ ಅತಿಥಿಗಳ ಹೆಸರು, ವಿಳಾಸ, ಸಮಯ ಗುರುತಿನ ಚೀಟಿ ವಾಹನ ಚಾಲನಾ ಪರವಾನಿಗೆ ಇತ್ಯಾದಿ ಸಂಪೂರ್ಣ ವಿವರಗಳನ್ನು ಕಲೆ ಹಾಕುವಂತೆ ಹಾಗೂ ಸದರಿ ಮಾಹಿತಿಯನ್ನು ರಿಜಿಸ್ಟರ್ ಮತ್ತು ಗಣಕೀಕರಣ ಮಾಡಿ ನಿರ್ವಹಣೆ ಮಾಡಲು ತಿಳಿಸಲಾಗಿದೆ ಎಂದರು.
ಹೊಸ ವ?ಚರಣೆಯ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಿಎಲ್ -೫ ಲೈಸೆನ್ಸ್ ಪಡೆಯುವಾಗ ಕಡ್ಡಾಯವಾಗಿ ಪೊಲೀಸ್ ನಿರಕ್ಷೇಪಣಾ ಪತ್ರ ಪಡೆದುಕೊಳ್ಳುವಂತೆ ಸೂಚಿಸಲಾಯಿತು. ಹೊಸ ವ?ಚರಣೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕಡ್ಡಾಯವಾಗಿ ಲಿಖಿತ ಅನುಮತಿಯನ್ನು ಪಡೆದುಕೊಳ್ಳುವಂತೆ ಹಾಗೂ ರಾತ್ರಿ ೧೨೩೦ ರ ನಂತರ ಆಚರಣೆಗೆ ಅವಕಾಶ ಇರುವುದಿಲ್ಲ ಎಂದರು.
ಹೊಸ ವ?ಚರಣೆಯನ್ನು ಅತ್ಯಂತ ಶಾಂತಿಯುತವಾಗಿ ಜವಾಬ್ದಾರಿಯುತವಾಗಿ ಯಾವುದೇ ಅಹಿತಕರ ಆಗು ಹೋಗುಗಳಿಗೆ ಆಸ್ಪದ ನೀಡದಂತೆ ಆಚರಿಸಲು ಪ್ರತಿಯೊಬ್ಬರೂ ಸಹಕರಿಸುವಂತೆ ಸಭೆಯಲ್ಲಿ ಕೋರಲಾಯಿತು. ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ ಪೊಲೀಸ್ ಕಂಟ್ರೋಲ್ ರೂಂ ನಂಬರ್: ೯೪೮೦೮೦೫೧೦೦ /೮೨೭೭೯೯೧೦೦೦, ೦೮೨೬೨-೨೩೦೫೪೦/೨೩೫೬೦೮ ಅಥವಾ ತುರ್ತು ಸಹಾಯವಾಣಿ ೧೧೨ ಗೆ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದರು.
New Year’s fun in tourist destinations takes a break