ALSO FEATURED IN

ಸಾರ್ವಜನಿಕರ ಪ್ರಶಂಸೆ ವ್ಯಕ್ತವಾದಾಗ ರೋಟರಿ ಸಂಸ್ಥೆಯ ಸೇವೆ ಸಾರ್ಥಕ

Spread the love

ಚಿಕ್ಕಮಗಳೂರು: ರೋಟರಿ ಸಂಸ್ಥೆಯ ಸೇವೆ ಸಾರ್ವಜನಿಕರ ಮನಮುಟ್ಟಿ ಪ್ರಶಂಸೆ ವ್ಯಕ್ತವಾದಾಗ ಮಾತ್ರ ಸಾರ್ವಜನಿಕ ಸೇವೆಗೆ ಅರ್ಥ ಬರುವುದರ ಜೊತೆಗೆ ಗೌರವದ ಭಾವನೆ ಬೆಳೆಯುತ್ತದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ದೇವ್ ಆನಂದ್ ಹೇಳಿದರು.

ಅವರು ಇಂದು ಇಲ್ಲಿಗೆ ಸಮೀಪದ ಆವತಿಯಲ್ಲಿ ಏರ್ಪಡಿಸಲಾಗಿದ್ದ ರೋಟರಿ ಕ್ಲಬ್ ಡಿ.೩೧೮೨ ಜೋನ್ ೮ ಚಾರ್ಟರ್ ಪ್ರಸೆಂಟೇಷನ್ ಉದ್ಘಾಟಿಸಿ ಮಾತನಾಡಿ ನೂತನ ಅಧ್ಯಕ್ಷರಿಗೆ ಹಿರಿಯರ ಮಾರ್ಗದರ್ಶನದಲ್ಲಿ ಈ ಆವತಿ ರೋಟರಿ ಕ್ಲಬ್ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದ ಅವರು, ರೋಟರಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಉಪಯೋಗವನ್ನು ಈ ಭಾಗದ ಬಡವರು ಪಡೆದುಕೊಂಡಿದ್ದು, ಇಂತಹ ಸಮಾಜ ಮುಖಿ ಕಾರ್ಯಗಳು ವರ್ಷವಿಡೀ ನಡೆಯುತ್ತಿರಲಿ ಎಂದು ಕಿವಿಮಾತು ಹೇಳಿದರು.

೩೨ ಸದಸ್ಯರಿಂದ ಆರಂಭಗೊಂಡ ರೋಟರಿ ಸಂಸ್ಥೆ ಇಂದು ಶೇ.೫೦ ರಷ್ಟು ಸದಸ್ಯರನ್ನು ಹೊಂದಿದ್ದು, ಎಲ್ಲಾ ನೂತನ ಸದಸ್ಯರಿಗೆ ಶುಭಾಶಯ ಕೋರಿದರು.
ಸದಸ್ಯತ್ವ ಹೆಚ್ಚಳ, ನಿಧಿ ಸಂಗ್ರಹ, ಸೇವಾ ಚಟುವಟಿಕೆ ಇವು ರೋಟರಿ ಕ್ಲಬ್‌ನ ಉದ್ದೇಶವಾಗಿದ್ದು, ಈ ಬಾರಿ ಕಾಫಿ, ಅಡಿಕೆ, ಮೆಣಸಿಗೆ ಉತ್ತಮ ಬೆಲೆ ಬಂದಿರುವುದರಿಂದ ದೇಣಿಗೆ ಸಂಗ್ರಹ ಸುಲಭವಾಗಲಿದೆ. ಪ್ರಕೃತಿಯ ಮಡಿಲಲ್ಲಿ, ಪ್ರಕೃತಿಯ ಸೊಬಗಿನ ಮಧ್ಯೆ ಇರುವ ಆವತಿ ಗ್ರಾಮ ಪುಟ್ಟ ಸ್ವರ್ಗ ಎಂದು ಬಣ್ಣಿಸಿದರು.

ಆವತಿ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಬಿ.ಮಹೇಂದ್ರ ಮಾತನಾಡಿ, ಕಳೆದ ೫ ತಿಂಗಳ ಅಧಿಕಾರವಧಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಸಾರ್ವಜನಿಕರಿಗೆ ನೆರವಾಗಿರುವುದು ಸಂತಸ ತಂದಿದೆ. ಬಡವರಿಗೆ ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಚೆನ್ನಾಗಿದ್ದು, ವೈದ್ಯರಿಲ್ಲದೆ ತೊಂದರೆಯಾಗಿದ್ದು, ಇದನ್ನು ಮನಗಂಡು ವೈದ್ಯರ ನೇಮಕ ಮಾಡುವಲ್ಲಿ ಶ್ರಮಿಸಿದ್ದೇನೆ ಎಂದರು.

ರೋಟರಿ ಸಂಸ್ಥೆಯ ಸಾರ್ವಜನಿಕ ಸೇವೆಯಲ್ಲಿ ನನ್ನೊಂದಿಗೆ ಕೈಜೋಡಿಸಿರುವ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಚಟುವಟಿಕೆ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಗೋಣಿಬೀಡು ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಆವತಿ ರೋಟರಿ ಕ್ಲಬ್ ಸ್ಥಾಪಿಸುವ ಕುರಿತು ಹಾಗೂ ನಡೆದುಬಂದ ದಾರಿಯ ಬಗ್ಗೆ ಸ್ಮರಿಸಿದರು.

ರೋಟರಿಯನ್ ಅರುಣ್ ಮಾತನಾಡಿ, ಆವತಿ ರೋಟರಿ ಕ್ಲಬ್ ಇಂದು ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಉತ್ತಮ ಸಮಾಜಮುಖಿ ಸೇವೆ ಮಾಡಲಿ ಎಂದು ಶುಭಹಾರೈಸಿದರು. ಸಮಾಜ ಸೇವೆಗೆ ಪ್ರಥಮ ಹೆಜ್ಜೆ ಈ ರೋಟರಿ ಸಂಸ್ಥೆಯಾಗಿದ್ದು, ನಾಮಫಲಕ ಹಾಕಿದರೆ ಸಾಲದು, ಈ ಭಾಗದಲ್ಲಿರುವ ಕೂಲಿಕಾರ್ಮಿಕರು, ರೈತರು, ಬೆಳೆಗಾರರು, ಬಡವರಿಗೆ ಸ್ನೇಹ ಮತ್ತು ಸೇವೆ ಎಂಬ ದ್ಯೇಯದೊಂದಿಗೆ ಕಾರ್ಯಚಟುವಟಿಕೆ ನಡೆಸುತ್ತಿರುವ ರೋಟರಿ ಸಂಸ್ಥೆ ಪರಿಸರ, ಶಿಕ್ಷಣ, ರಸ್ತೆ ಸುರಕ್ಷತೆ, ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ಪ್ರತೀ ವರ್ಷ ನಡೆಸುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಸದಸ್ಯತ್ವ ಅಭಿಯಾನಕರಾದ ಅಶೋಕ್‌ಕುಮಾರ್ ಶೆಟ್ಟಿ ಮಾತನಾಡಿ, ಸದಸ್ಯತ್ವವನ್ನು ಪ್ರತಿಯೊಬ್ಬರೂ ಪಡೆಯುವ ಮೂಲಕ ಸಮಾಜಸೇವೆಗೆ ಸಮರ್ಪಿಸಿಕೊಳ್ಳಬೇಕೆಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಪ್ರಥಮ ಮಹಿಳೆ ರೇಖಾ ದೇವಾನಂದ್, ಜಯಕಿಶನ್ ಶೆಟ್ಟಿ, ವೈ.ಡಿ. ಲೋಕೇಶ್, ಪ್ರಥಮ್, ಪ್ರಸನ್ನ, ರತನ್ ಕುಮಾರ್, ಸಿ.ಸಿ. ಸವಿನ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕು ಮೊದಲು ಹೊಸಹಳ್ಳಿ ಬಸ್ ನಿಲ್ದಾಣದ ಬಳಿ ರೋಟರಿ ಲಾಂಚನವನ್ನು ಬಿಡುಗಡೆ ಮಾಡಿದರು.

Rotary’s service is meaningful when it is appreciated by the public.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

[t4b-ticker]
Exit mobile version