ಚಿಕ್ಕಮಗಳೂರು: ನಗರದ ಎಂ.ಜಿ ರಸ್ತೆಯ ೫ನೇ ಕ್ರಾಸ್‌ನಲ್ಲಿರುವ ಸೂರಪ್ಪ ಬೀದಿಯ ಎಂ.ಎಂ ಕಾಂಪ್ಲೆಕ್ಸ್‌ನಲ್ಲಿ ವೃದ್ಧಿ ಸೌಹಾರ್ದ ಸಹಕಾರಿ ಸಂಘವನ್ನು ಮೇ.೨೯ ರಂದು ಗುರುವಾರ ಬೆಳಗ್ಗೆ ೧೧ ಗಂಟೆಗೆ ಪ್ರಾರಂಭಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಟಿ. ಜಯವರ್ಧನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ನೂತನ ವೃದ್ಧಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಕಚೇರಿ, ಆಡಳಿತ ಮಂಡಳಿಯ ಸಭಾ ಕೊಠಡಿ ಅಧ್ಯಕ್ಷರು-ಉಪಾಧ್ಯಕ್ಷರು ನಿರ್ದೇಶಕರ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಅಂದು ಏರ್ಪಡಿಸಲಾಗಿದೆ ಎಂದರು.
ನೂತನ ಕಚೇರಿ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಉದ್ಘಾಟಿಸುವರು, ನೂತನ ಭದ್ರತಾ ಕೊಠಡಿಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ, ಆಡಳಿತ ಮಂಡಳಿಯ ಸಭಾ ಕೊಠಡಿಯನ್ನು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಸಿಇಓ ಕೊಠಡಿಯನ್ನು ಎಂಎಲ್‌ಸಿ ಎಸ್.ಎಲ್. ಭೋಜೇಗೌಡ ಉದ್ಘಾಟಿಸುವರು ಎಂದು ಹೇಳಿದರು.
ನಿರ್ದೇಶಕರ ಪದಗ್ರಹಣವನ್ನು ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಜಿ. ನಂಜನಗೌಡ, ಬೆಳ್ಳಿಪ್ರಕಾಶ್, ಡಿ.ಎನ್. ಸುರೇಶ್ ಕುಮಾರ್, ಡಾ. ಡಿ.ಎಸ್ ತೇಜಸ್ವಿನಿ, ಎಸ್.ಎಂ. ಶಶಿರೇಖಾ, ಮಹಮದ್ ನಯಾಜ್, ಗಾಯಿತ್ರಿ ಶಾಂತೇಗೌಡ, ಎಂ.ಆರ್. ದೇವರಾಜ್ ಶೆಟ್ಟಿ, ಹೆಚ್.ಪಿ. ಮಂಜೇಗೌಡ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಉದಯ್ ಶಂಕರ್ ಭಟ್, ಶ್ರೀರಾಂ ರಾವ್, ಸಿಇಓ ಮಂಜುನಾಥ.ಎ ಕುಡಲ್ಕರ್ ಉಪಸ್ಥಿತರಿದ್ದರು.
Vriddhi Sauharda Cooperative Society N. Inauguration ceremony on May 29th