ಚಿಕ್ಕಮಗಳೂರು: ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೫ನೇ ಸಾಲಿನ ಜೂನ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ.
ದಿನಾಂಕ ೩ ರಂದು ಶಿವಮೊಗ್ಗದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ೪ರಂದು ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ಜಡಿಮಠ ಶ್ರೀಗಳವರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭ, ೬ರಂದು ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದಲ್ಲಿ ರಜತ ಸಂಚಿಕೆ ಬಿಡುಗಡೆ ಮತ್ತು ಇಷ್ಟಲಿಂಗ ಮಹಾಪೂಜಾ, ೭ರಂದು ಅಜ್ಜಂಪುರ ತಾಲೂಕ ಹಣ್ಣೆಮಠದಲ್ಲಿ ಧರ್ಮ ಜಾಗೃತಿ ಸಮಾರಂಭ,
೮ರಂದು ಕೊರಟಗೆರೆ ತಾಲೂಕ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ವೀರಭದ್ರ ಶ್ರೀಗಳವರ ಪಟ್ಟಾಧಿಕಾರದ ವರ್ಧಂತಿ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೯ರಂದು ಮೈಸೂರಿನಲ್ಲಿ ಇಷ್ಟಲಿಂಗ ಮಹಾಪೂಜಾ, ೧೦ರಂದು ಭದ್ರಾವತಿ ತಾಲೂಕ ಹನುಮಂತಪುರದಲ್ಲಿ ಇಷ್ಟಲಿಂಗ ಮಹಾಪೂಜಾ ನಡೆಸುವರು. ದಿನಾಂಕ ೧೧ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆಯ ನಿಮಿತ್ಯ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು.
ದಿನಾಂಕ ೧೩ರಂದು ಚಿಕ್ಕಮಗಳೂರಿನಲ್ಲಿ ಶ್ರೀ ಜಗದ್ಗುರು ರೇಣುಕ-ಬಸವ ಜಯಂತಿ ಸಮಾರಂಭ, ೧೪ರಂದು ಕಡೂರು ತಾಲೂಕ ಹುಲಿಕೆರೆಯಲ್ಲಿ ವಿರೂಪಾಕ್ಷಲಿಂಗ ಶ್ರೀಗಳವರ ೮೦ನೇ ವರ್ಷದ ಜನ್ಮ ದಿನೋತ್ಸವ ಸಮಾರಂಭ, ೧೫ರಂದು ಅಜ್ಜಂಪುರ ತಾಲೂಕ ಬಗ್ಗವಳ್ಳಿ ಗ್ರಾಮದಲ್ಲಿ ಇಷ್ಟಲಿಂಗ ಮಹಾಪೂಜಾ, ೧೬ ಮತ್ತು ೧೭ರಂದು ಕೊಪ್ಪಳ ತಾಲೂಕ ಹುಲಿಗಿಯಲ್ಲಿ ಪುರ ಪ್ರವೇಶ- ಇಷ್ಟಲಿಂಗ ಮಹಾಪೂಜಾ ನೆರವೇರಿಸುವರು.
ದಿನಾಂಕ ೧೯ಮತ್ತು ೨೦ರಂದು ಮಹಾರಾಷ್ಟ್ರ ರಾಜ್ಯದ ಜತ್ ತಾಲೂಕಿನ ಸುಸಲಾದಿ ಗ್ರಾಮದಲ್ಲಿ ಪುರ ಪ್ರವೇಶ ಮತ್ತು ಶ್ರೀ ಮಲ್ಲಯ್ಯನ ಗುಡಿ ಉದ್ಘಾಟನೆ-ಕಳಸಾರೋಹಣ, ೨೨ರಂದು ತಮಿಳು ನಾಡಿನ ಕಾಟೇರಿಯಲ್ಲಿ ಶಾಲಾ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.
ದಿನಾಂಕ ೨೬ರಂದು ಕೋಲಾರ ಜಿಲ್ಲೆ ಬೆಳ್ಳಾವಿಯಲ್ಲಿ ಇಷ್ಟಲಿಂಗ ಮಹಾಪೂಜಾ, ೨೭ರಂದು ಬೆಂಗಳೂರಿನಲ್ಲಿ ಇಷ್ಟಲಿಂಗ ಮಹಾಪೂಜಾ, ೨೮ರಂದು ಬೆಂಗಳೂರು ಜೆ.ಪಿ,ನಗರದಲ್ಲಿ ಇಷ್ಟಲಿಂಗ ಮಹಾಪೂಜಾ-ಧರ್ಮ ಸಮಾರಂಭ, ೨೯ರಂದು ಬೆಂಗಳೂರು ನಗರದ ಭಾರತಿ ನಗರದಲ್ಲಿ ಧರ್ಮ ಸಮಾರಂಭ-ಮಹಾಪೂಜಾ ಹಾಗೂ ೩೦ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು.
ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
Sri Rambhapuri Jagadguru’s June tour