ALSO FEATURED IN

ಅಹಿಂದ ವರ್ಗದ ಜನಪರವಾದ ಗಟ್ಟಿ ಧ್ವನಿ ಹೋರಾಟ ಮಾಡಿದವರು ಸಿದ್ದರಾಮಯ್ಯ

Spread the love

ಚಿಕ್ಕಮಗಳೂರು: ಅಹಿಂದ ವರ್ಗದ ಜನರ ಪರವಾಗಿ ಗಟ್ಟಿ ಧ್ವನಿಯಿಂದ ಹೋರಾಟ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಎಲ್ಲಾ ವರ್ಗದ ಬಡ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಅಹಿಂದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ತ್ರಿಭುವನ್ ಎತ್ತಿನಮನೆ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಅಹಿಂದ ನಾಯಕರಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಎರಡು ಬಾರಿ ದಾಖಲೆಯ ಮುಖ್ಯಮಂತ್ರಿಗಳಾಗಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ತತ್ವದಡಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಎಲ್ಲಾ ವರ್ಗದ ಬಡವರ ಬದುಕನ್ನು ಹಸನುಗೊಳಿಸಿದ್ದಾರೆಂದು ಶ್ಲಾಘಿಸಿದರು.

ಎಐಸಿಸಿ ಯಿಂದ ಸಿದ್ದರಾಮಯ್ಯನವರನ್ನು ಹಿಂದುಳಿದ ನಾಯಕರನ್ನಾಗಿ ಆಯ್ಕೆಮಾಡಿದ್ದಾರೆ ಜೊತೆಗೆ ಶೋಷಿತ ವರ್ಗದ ಜನರ ಪರವಾಗಿ ಅಹಿಂದ ಜನಾಂಗದ ಏಳಿಗೆಗೆ ಶ್ರಮಿಸಲಿ ಎಂದು ಶುಭ ಹಾರೈಸಿದರು.

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಜಿಲ್ಲಾ ಅಹಿಂದ ಅಧ್ಯಕ್ಷರಾಗಿ ತ್ರಿಭುವನ್ ಆಯ್ಕೆಯಾಗಿರುವುದು ಎಲ್ಲರಿಗೂ ಸಂತೋಷವಾಗಿದೆ, ದೇಶದಲ್ಲಿ ಧ್ವನಿ ಇಲ್ಲದ ಜನರ ಪರವಾಗಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ದಾಸಶ್ರೇಷ್ಟ ಕನಕದಾಸರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರು ಶೋಷಿತರ ಪರವಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹನೀಯರಾಗಿದ್ದಾರೆಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ನಂತರ ಎಲ್ಲಾ ಶೋಷಿತ ಸಮುದಾಯಗಳ ನಾಯಕರಾಗಿ ಸಿದ್ದರಾಮಯ್ಯನವರು ಕೆಲಸ ಮಾಡುತ್ತಿದ್ದಾರೆ. ಇವರ ಅಧಿಕಾರವಧಿಯಲ್ಲಿ ಯಾವುದೇ ಸಮುದಾಯಕ್ಕೆ ಅವಮಾನ ಮಾಡಿಲ್ಲ, ಉದಾಸೀನತೆ ತೋರಿಲ್ಲ ಎಂದರು. ಅಹಿಂದ ರಾಷ್ಟ್ರೀಯ ನಾಯಕರಾಗಿ ಸಿದ್ದರಾಮಯ್ಯನವರನ್ನು ಆಯ್ಕೆಮಾಡಿರುವುದನ್ನು ಬಿಜೆಪಿ ಮುಖಂಡರು ಸಹಿಸಿಕೊಳ್ಳದೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ಖಂಡಿಸುತ್ತೇನೆ ಎಂದ ಅವರು, ಸಿದ್ದರಾಮಯ್ಯನವರ ದಾರಿಯಲ್ಲಿ ತ್ರಿಭುವನ್ ಸಾಗಬೇಕು, ನಾವೆಲ್ಲಾ ನಿಮ್ಮೊಂದಿಗೆ ಇರುತ್ತೇವೆಂದು ಭರವಸೆ ನೀಡಿದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿಯಲ್ಲಿ ಹಿಂದುಳಿದ ವರ್ಗ ಇಂದು ಜನಪರವಾದ ಕೆಲಸ ಮಾಡುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ ನೆಲೆಯಿಂದ ಬಂದವರು. ಅಹಿಂದ ಸಂಘಟನೆ ಸ್ಥಾಪನೆ ಮಾಡಿ ಈ ರಾಜ್ಯಕ್ಕೆ ಹೊಸ ನಾಂದಿ ಹಾಡಿದರು ಎಂದು ಹೇಳಿದರು. ಸಿದ್ದರಾಮಯ್ಯನವರು ರಾಜ್ಯ ಮತ್ತು ರಾಷ್ಟ್ರಕಂಡ ಅಪ್ರತಿಮ ನಾಯಕ, ರೈತ ಕಾರ್ಮಿಕ, ದಲಿತ, ಅಲ್ಪಸಂಖ್ಯಾತರ ನಾಯಕರಾಗಿದ್ದು, ಅದೇ ರೀತಿ ಜೊತೆ ಎಲ್ಲಾ ವರ್ಗದ ಜನರ ವಿಶ್ವಾಸವನ್ನು ಗಳಿಸಬೇಕು, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಲಭಿಸಿದೆ. ಅಹಿಂದ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿ ಹೊರಹೊಮ್ಮಿರುವ ಬೆನ್ನಲ್ಲೇ ನಿಮಗೆ ಈ ಅವಕಾಶ ಸಿಕ್ಕಿದೆ ಎಂದು ಬಣ್ಣಿಸಿದರು.

ಸೈದ್ಧಾಂತಿಕ ಹಿನ್ನೆಲೆಯಲ್ಲಿ ಸಂಘಟನೆ ಮಾಡಬೇಕು. ಅದಕ್ಕೆ ಪೂರಕವಾದ ಎಲ್ಲಾ ರೀತಿಯ ಬೆಂಬಲ ಕೊಡುತ್ತೇವೆ, ಅಹಿಂದ ಅಂದರೆ ಒಂದು ಜಾತಿಗೆ ಸೀಮಿತವಾಗದೆ ತುಳಿತಕ್ಕೊಳಗಾದ ಎಲ್ಲಾ ವರ್ಗದ ಜನರನ್ನು ಸಂಘಟನೆ ಮಾಡಿ, ಎಲ್ಲೂ ಅತೀರೇಖಕ್ಕೆ ಹೋಗದೆ ಶಾಂತಿಯಿಂದ ವರ್ತಿಸಬೇಕೆಂದು ಕಿವಿಮಾತು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಒಕ್ಕೂಟಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಸಂದರ್ಭದಲ್ಲಿ ಅಹಿಂದ ಜಿಲ್ಲಾಧ್ಯಕ್ಷರಾಗಿ ತ್ರಿಭುವನ್ ಆಯ್ಕೆಯಾಗಿರುವುದು ಸಂತೋಷದ ವಿಚಾರ ಎಂದರು. ಈ ಸಂಘಟನೆಯನ್ನು ಗಟ್ಟಿಗೊಳಿಸುವ ಜೊತೆಗೆ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ರೂಪಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಸರ್ವ ಜನರ ಪ್ರೀತಿಗೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರನ್ನು ಬಿಜೆಪಿ ಮುಖಂಡರು ಅವಹೇಳನ ಮಾಡಿರುವುದು ಖಂಡನೀಯ, ಸಿದ್ದರಾಮಯ್ಯನವರ ಆಚಾರ-ವಿಚಾರಗಳನ್ನು ಎಲ್ಲಾ ರಾಜಕಾರಣಿಗಳು ಮೈಗೂಡಿಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಹಿಂದ ಸಂಘಟನೆಗಳನ್ನು ಸ್ಥಾಪನೆ ಮಾಡಿ, ಹಿರಿಯರ ಮಾರ್ಗದರ್ಶನ ಪಡೆದು ಮುಂದುವರೆಯಿರಿ ಎಂದು ತಿಳಿಸಿದರು.
ನೂತನ ಅಧ್ಯಕ್ಷ ತ್ರಿಭುವನ್ ಮಾತನಾಡಿ, ಅಹಿಂದ ಸಂಘಟನೆ ರಥವನ್ನು ಎಳೆಯಲು ಅವಕಾಶ ಮಾಡಿಕೊಟ್ಟ ಎಲ್ಲಾ ನನ್ನ ಹಿರಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಗಟ್ಟಿಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಎ.ಎನ್. ಮಹೇಶ್, ರೇಖಾ ಹುಲಿಯಪ್ಪಗೌಡ, ನಯಾಜ್ ಅಹಮದ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು.

Siddaramaiah was the one who fought loudly for the people of the non-Hind community.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version