ಚಿಕ್ಕಮಗಳೂರು: ಪ್ರಪಂಚದಲ್ಲಿ ಹಿಂದುತ್ವವು ಬದುಕಿನ ಒಂದು ಪದ್ಧತಿಯ ರೂಪದಲ್ಲಿ ಪ್ರಾಚೀನ ಸಂಸ್ಕೃತಿ, ಧರ್ಮ ಮತ್ತು ನಾಗರೀಕತೆಯ ಭಾಗವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘ ದ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ನಗರದ ಮಧುವನ ಬಡಾವಣೆಯ ಆರ್ಎಸ್ಎಸ್ ಸಮರ್ಪಣಾ ಕಚೇರಿಯಲ್ಲಿ ಶನಿವಾರ ಸಂಜೆ ಹ ಮ್ಮಿಕೊಂಡಿದ್ಧ ‘ಹಿಂದುತ್ವ ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಹಿಂದೂ ಸಂಸ್ಕೃತಿ ಧರ್ಮವನ್ನು ಆಚರಿಸುವ ಪರಂಪರೆ ನಮ್ಮಲ್ಲಿ ರೂಪುಗೊಂಡಿತು. ಸಣ್ಣ ಸಣ್ಣ ಆ ಚಾರ, ಸಂಸ್ಕಾರಗಳನ್ನು ನೀಡಿದೆ. ಹಿಂದುತನದಲ್ಲಿ ಪರಸ್ತ್ರೀಯರನ್ನು ತಾಯಿಯಂತೆ, ಇತರರ ವಸ್ತುವನ್ನು ಮಣ್ಣಿನಂತೆ, ಎಲ್ಲಾ ಜೀವಸಂಕುಲವನ್ನು ತನ್ನಂತೆಯೇ ನೋಡಬೇಕು. ಈ ಆಚರಣೆಗಳಿಂದ ಜೀವನವನ್ನು ವಿಕಾಸ ಮಾಡಿಕೊಳ್ಳಬೇಕು ಎಂದರು.
ಹಿಂದುತ್ವದ ಪೂಜೆ, ಪುನಸ್ಕಾರಗಳು, ಪದ್ಧತಿಗಳು, ಆಹಾರ ಮತ್ತು ರೀವಾಜುಗಳನ್ನು ಬಂಧಿಸಿಡುವ ಕೆಲವು ಪ್ರಯತ್ನ ನಡೆದಿವೆ. ಹಿಂದುತ್ವವು ಇಷ್ಟೆಕ್ಕೆ ಸೀಮಿತವಾಗಿಲ್ಲ. ರಿಲೀಜನ್ ಎಂದರೆ ಧರ್ಮವಲ್ಲ. ಧರ್ಮ ಅತ್ಯಂತ ವಿಶಾಲ ಅರ್ಥವುಳ್ಳದ್ದು. ನಮ್ಮ ದೇಶದಲ್ಲಿ ಹಿಂದೂ ರಿಲೀಜನ್ ಎಂಬ ಸಂಗತಿಯಿಲ್ಲ, ಅನೇಕ ರಿಲೀ ಜನ್ಗಳಿವೆ, ಅವೆಲ್ಲವೂ ಹಿಂದು ಸ್ವಭಾದ ರೀಲೀಜನ್ಗಳೇ ಎಂದು ತಿಳಿಸಿದರು.
ಹಿಂದುತ್ವ ಒಂದು ಇಸಂ ಅಲ್ಲ, ಹಿಂದುತ್ವ ಎಂಬ ಪದವನ್ನು ಇಂಗ್ಲೀಷ್ಗೆ ಭಾಷಾಂತರಿಸಿದರೆ ಅದು ಹಿಂದುತನ ಎಂದಾಗುತ್ತದೆ. ಇಸಂ ರೂಢಿಗತ ಅರ್ಥವು ಸೀಮಿತ ಪರಿಕಲ್ಪನೆಯನ್ನು ಹೊಂದಿದೆ. ಆ ಕಲ್ಪನೆ ಯೊಂದಿಗೆ ನೀವು ನಿಮ್ಮನ್ನು ಹೊಂದಿಸಿಕೊಳ್ಳಬೇಕು. ಹಿಂದುತ್ವದ ಜೊತೆ ಇರುವವರು, ತಮ್ಮ ಸಾಮರ್ಥ್ಯ ಕ್ಕೆ ಹಿಂದುತ್ವವನ್ನು ಒಪ್ಪುವವರು ವಿಕಾಸಗೊಳಿಸಲಿದೆ ಎಂದರು.
ಹಿಂದುತ್ವ ಎನ್ನುವುದನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಬಹಳ ಉತ್ತಮ ಶಬ್ದಗಳಲ್ಲಿ ತಿಳಿಸಿ ದ್ದಾರೆ. ಏಕರೂಪದ ಸ್ಥಾಯಿಯಾದ ಬದಲಾಯಿಸಲಾಗದ ಹಿಂದು ಧರ್ಮ ಎಂಬುದು ಯಾವುದೂ ಇಲ್ಲ. ಅವರ ಕಾಲದಲ್ಲಿ ಹಿಂದೂಯಿಸಂ ಎಂಬ ಪದವನ್ನೇ ಬಳಸಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಅವರು ಹೇಳ ಲು ಪ್ರಯತ್ನಿಸಿರುವುದು ಹಿಂದುತನ ಎನ್ನುವುದು ಹೊರತು, ಇಸಂ ಅಲ್ಲ ಎಂದು ಹೇಳಿದರು.
ಪ್ರಸ್ತುತ ವಿಶ್ವದಲ್ಲಿ ಸಾಮಾಜಿಕ, ಆರ್ಥಿಕ, ಮಾನಸಿಕ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಅನೇಕ ಅಸ್ಥಿ ತ್ವದ ಬಿಕ್ಕಟ್ಟುಗಳಿವೆ ಪರಿಹಾರವನ್ನು ನೀಡಲು ಸಾಧ್ಯವಿರುವುದು ಹಿಂದುತ್ವಕ್ಕೆ ಮಾತ್ರ. ವರ್ತಮಾನ ಸಂದರ್ಭ ದಲ್ಲಿ ಹಿಂದುತ್ವದ ದರ್ಶನ, ಸಿದ್ದಾಂತ, ಪರಂಪರೆ, ಆಚಾರ-ವಿಚಾರಗಳನ್ನು ಅರ್ಥಮಾಡಿಕೊಂಡು ಪದ ಬಳಕೆಯೊಂದಿಗೆ ಪ್ರಸ್ತುತಪಡಿಸುವುದು ಎಲ್ಲರಿಗೂ ಸವಾಲಿನ ಕೆಲಸವಾಗಿದೆ ಎಂದರು.
ಹಿಂದುತ್ವದ ಮೇಲೆ ಕಾಲ್ಪನಿಕ ಆರೋಪಗಳನ್ನು ಹೊರಿಸುವ ಬದಲು ನಿಜವಾದ ಹಿಂದುತ್ವವನ್ನು ಪಾಲಿ ಸಬೇಕು. ಹಿಂದುತ್ವದ ಹೆಸರು ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ. ನಡವಳಿಕೆಯನ್ನು ಪುರಸ್ಕರಿಸಬೇಕು. ಜಗ ತ್ತಿಗೆ ಧರ್ಮ, ಸಮತೋಲನ ಮತ್ತು ಧೈರ್ಯವನ್ನು ನೀಡುವ, ಎಲ್ಲಾ ವಿರೋಧಗಳನ್ನು ಸರಿದೂಗಿಸಿಕೊಂ ಡು ಪ್ರಗತಿಗೆ ಸಹಾಯ ಮಾಡುವ ಹೊಸ ಜಗತ್ತನ್ನು ರಚಿಸಬೇಕಾದರೆ ಹಿಂದುತ್ವ ಧರ್ಮದಲ್ಲಿ ಸಾಗಬೇಕಿದೆ ಎಂದರು.
ಹಿಂದುತ್ವ ಯಾವುದೇ ಒಂದು ಜಾತಿಯ ಪ್ರಾಬಲ್ಯದ ಬಗ್ಗೆ ಮಾತನಾಡುವುದಿಲ್ಲ. ನಿಜವಾದ ಹಿಂದು ತ್ವವವನ್ನು ಅನುಸರಿಸುವ ಮೂಲಕ ವಿಕೃತಿ ಭಾವನೆಗಳನ್ನು ಸಂಪೂರ್ಣ ತೊಲಗಿಸಬೇಕು. ನಮ್ಮ ಮುಂದೆ ಸಂತರ ನಡವಳಿಕೆ ಹಾಗೂ ಜೀವನದ ಉದಾಹರಣೆಗಳಿವೆ. ಸಮಾಜದಲ್ಲಿ ಈ ನಡವಳಿಕೆಯ ಪರಿವರ್ತನೆ ಬದಲಾವಣೆಯನ್ನು ತರುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ವಿಭಾಗ ಸಂಘ ಚಾಲಕ ಮಲ್ಲಿಕಾರ್ಜುನ ಉಪ ಸ್ಥಿತರಿದ್ದರು. ನಗರ ಪ್ರಚಾರ ಪ್ರಮುಖ್ ವಿಕ್ರಮ್ ನಿರೂಪಿಸಿದರು. ಮಂಥನ ಸದಸ್ಯರಾದ ಪ್ರವೀಣ್ ಸ್ವಾಗತಿಸಿ ದರು. ಶೃತಿ ವಂದಿಸಿದರು.
Hinduism is a part of ancient culture and civilization.