Author: chikkamagalur express

ಚಿಕ್ಕಮಗಳೂರು: ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಸಮರ್ಥ ನಾಡನ್ನು ಕಟ್ಟಲು ಸಾಧ್ಯ ಎಂದು ಶಾಸಕ ಸಿ.ಟಿ ರವಿ  ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಎ.ಐ.ಟಿ ಕಾಲೇಜು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಸತಿ ನಿಲಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದ ಅವರು ರೂ. ೨ ಕೋಟಿ ವೆಚ್ಚದಲ್ಲಿ ಈ ವಿದ್ಯಾರ್ಥಿ ನಿಲಯ ನಿರ್ಮಿಸಲಾಗಿದ್ದು, ೧೦೦ ಜನ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು  ಅವಕಾಶವಿದ್ದು  ಈ ವರ್ಷದಿಂದಲೇ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ಕ್ರಮವಹಿಸಲಾಗುವುದು  ಎಂದರು. ಜಿಲ್ಲೆಗೆ ೩ ವರ್ಷದಲ್ಲಿ ೪ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದ್ದು ನಾರಾಯಣ ಗುರುಗಳ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾಪಿಸಿ ಸಲ್ಲಿಸಲಾಗಿದೆ, ಸಮಾಜ ಕಲ್ಯಾಣ ಇಲಾಖೆ…

Read More

ಚಿಕ್ಕಮಗಳೂರು: ಜಲ ಜೀವನ್ ಮಿಷನ್ ಅಭಿಯಾನ ಯೋಜನೆಯಡಿ ದೇಶದ ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಪ್ರಧಾನ ಮಂತ್ರಿಗಳ ಮಹತ್ವಕಾಂಕ್ಷೆ ಯೋಜನೆಯಾಗಿದೆ ಎಂದು ಶಾಸಕ ಸಿ.ಟಿ ರವಿ ಹೇಳಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇವರ ವತಿಯಿಂದ ಜಿಲ್ಲಾ ಪಂಚಾಯತ್‌ನ ಐ.ಬಿ ಹಿಂಭಾಗ ನಿರ್ಮಿಸಿರುವ ಜಿಲ್ಲಾ ಮಟ್ಟದ ಕುಡಿಯುವ ನೀರು ಪರೀಕ್ಷಾಲಯದ ನೂತನ ಕಟ್ಟಡವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಂತರ ಯಾರೊಬ್ಬರು ಕೂಡ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂಬ ಸಂಕಲ್ಪವನ್ನು ಮಾಡಿರಲಿಲ್ಲ ಆದರೆ ಪ್ರಧಾನ ಮಂತ್ರಿಗಳ ಸಂಕಲ್ಪದಿಂದಾಗಿ ಪ್ರತೀ ರಾಜ್ಯಗಳಿಗೂ ಕೋಟ್ಯಾಂತರ ರೂಗಳ ಅನುದಾನ ಬಿಡುಗಡೆಮಾಡಿ ಶುದ್ಧ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿದ್ದಾರೆ ಎಂದ ಅವರು ಇದರ ಉದ್ದೇಶ ಶುದ್ಧ ಕುಡಿಯುವ ನೀರು ಒದಗಿಸಿದರೆ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ, ಸಾಂಕ್ರಾಮಿಕ ರೋಗಗಳಿಗೆ ಮೂಲ ಕಲುಷಿತ ನೀರು, ಕಲುಷಿತ ವಾತಾವರಣ, ಕಲುಷಿತ ಆಹಾರಗಳಿಂದ ಸಾಂಕ್ರಾಮಿಕ…

Read More

ಚಿಕ್ಕಮಗಳೂರು: ನಾನು ಸಿದ್ದರಾಮಯ್ಯನವರಿಗೆ (Siddaramaiah) ಖುಷಿಯಾಗುವ ಸಂಗತಿಯನ್ನೇ ಹೇಳಿದ್ದೇನೆ. ಅವರಿಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟವರು ಮಡಿಕೇರಿ-ಮೈಸೂರಿನ ಜನ. ಅವರಿಗೆ ಪ್ರಿಯವಾಗಿರೋದು ಟಿಪ್ಪು ಟೋಪಿ. ಅದನ್ನೇ ಹೇಳಿದ್ದೇನೆ. ಟೋಪಿ ಅವರಿಗೆ ಆನಂದ ಕೊಡುವ ಸಂಗತಿ. ಅದನ್ನೇ ಹೇಳಿದ್ದೇನೆ ಎಂದು ತಮ್ಮ ಹೇಳಿಕೆ ಕುರಿತಾಗಿ ಶಾಸಕ ಸಿ.ಟಿ (C.T Ravi) ಸ್ಪಷ್ಟನೆ ನೀಡಿದ್ದಾರೆ. ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ (Congress) ಕಾರ್ಯಕರ್ತರು ಸಿ.ಟಿ. ರವಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಖುಷಿ ಆಗದಿರುವುದು ಯಾವುದು? ಕೇಸರಿ ಪೇಟ-ಕುಂಕುಮ ಅದರ ಬಗ್ಗೆ ಹೇಳಿದ್ರೆ ಬೇಜಾರು ಆಗ್ತಿತ್ತೋ ಏನೋ. ಆದ್ರೆ, ಅವರಿಗೆ ಟೋಪಿ ಇಷ್ಟ. ನಾನು ಅದನ್ನೇ ಹೇಳಿದ್ದೇನೆ. ನಾನು ಹೇಗಿದ್ದೀನಿ ಹಾಗೇ ಹೇಳಿದ್ದಾರೆ ಅಂತ ಅವರು ಖುಷಿ ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕೊಟ್ಟಿರುವ ಬಿರುದುಗಳನ್ನು ಒಮ್ಮೆ ನೋಡಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ. ನಾನು ಸಿದ್ದರಾಮಯ್ಯರಿಗೆ ಹೇಳಿದ್ದು, ಅಸಂಸದೀಯ ಪದವೂ ಅಲ್ಲ. ಬೈಗುಳವೂ ಅಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸದ್ಭಾವನೆಯಿಂದ ಬಂದರೆ ಅತಿಥಿಗಳೆಂದು…

Read More

ಚಿಕ್ಕಮಗಳೂರು:  ಕಾಂಗ್ರೆಸ್ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರದಾನಿ ಮೋದಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದುದು. ಯಾರದ್ದೋ ದುಡ್ಡು… ಸಿದ್ದರಾಮಯ್ಯನ ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಅವರು ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ  ಬಿಜೆಪಿಯಿಂದ ಏರ್ಪಡಿಸಿದ್ದ  ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ನಾಡು ಶೃಂಗೇರಿ. ನಾನು ದೇವರ ನಾಡಿಗೆ ಬಂದಿದ್ದೇವೆ. ಜನಸಂಕಲ್ಪ ಯಾತ್ರೆಗೆ ಜನ ಬೆಂಬಲ ಸಿಗುತ್ತಿದೆ. ಮೋದಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸ್ತಿದೆ. ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲದಿಂದ ವಿಜಯ ಸಂಕಲ್ಪ ಯಾತ್ರೆಯಾಗಿ ಯಶಸ್ವಿಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಸರ್ಕಾರ ನಮ್ಮದು. ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನಾರಾಯಣ ಗುರು ಅವರ ಹೆಸರಿನಲ್ಲಿವಸತಿ ಶಾಲೆ, ಎಸ್ ಸಿ ಎಸ್ ಟಿ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ,50 ಕನಕದಾಸ ಹಾಸ್ಟೆಲ್ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.…

Read More

ಚಿಕ್ಕಮಗಳೂರು:  ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಸ್ಥಳವನ್ನು ನಿರ್ಧರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ  ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಮಸ್ಯೆ ಇದೆ‌. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ನಿವಾರಿಸಲು ಕಂದಾಯ ಇಲಾಖೆಯವರು ಶೀಘ್ರ ಪರಿಹಾರ ಕಂಡುಕೊಳ್ಳಲಿದ್ದಾರೆ‌.ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಬಂದಿದೆ. ಔಷಧಿ ಸಿಂಪಡನೆ ಹಾಗೂ ರೋಗ ಹರಡದಂತೆ  ಪರಿಹಾರ ಕಂಡುಕೊಳ್ಳಲು 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದೆ.  ಈ ಭಾಗದ ಪ್ರವಾಹ ಬಂದು ಹಾಳಾಗಿರುವ ರಸ್ತೆಗಳ ದುರಸ್ತಿಗೆ 5.80 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 5 ಕೋಟಿ ರೂ. ಹೆಚ್ಚಿನ ಅನುದಾನವನ್ನು ಬಿಡುಗಡೆ ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ  ಎಂದರು. ದತ್ತಪೀಠ ಈ ಭಾಗದ ಭಾವನೆಗಳ ದೇವಸ್ಥಾನ. ಈ ದೇವಸ್ಥಾನದಲ್ಲಿ ಮೂಲ…

Read More

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಪ್ರಜಾಪಿತಾ ಬ್ರಹ್ಮಕುಮಾರಿ ಮಹಾ ವಿದ್ಯಾಲಯಕ್ಕೆ ಕೋಟೆ ಬಡಾವಣೆಯ ದೇವಸ್ಥಾನದಲ್ಲಿ ಇರುವ ಆವರಣವನ್ನು ಮಂಜೂರು ಮಾಡಿದ್ದಾರೆ, ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಕೋಟೆ ಬಡಾವಣೆಯ ಗ್ರಾಮಸ್ಥರು ಮಂಗಳವಾರ ಅಪಾರ ಜಿಲ್ಲಾಧಿಕಾರಿಗಳಾದ ರೂಪ ಅವರಿಗೆ ಮನವಿ ನೀಡಿದರು. ನಗರಸಭೆ ಸದಸ್ಯ ಸಿ.ಎಂ.ಕುಮಾರ್ ಮನವಿ ನೀಡಿ ಮಾತನಾಡಿ, ನಗರದ ಕೋಟೆ ಬಡಾವಣೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಟ್ಟಡವಿದ್ದು, ಈ ಹಿಂದೆ ಸದರಿ ಕಟ್ಟಡವನ್ನು ಒಳಚರಂಡಿ ಇಲಾಖೆಗೆ ನೀಡಿದ್ದು, ಈಗ ಕಟ್ಟಡವು ಖಾಲಿ ಇದೆ, ಕಟ್ಟಡವನ್ನು ದೇವಸ್ಥಾನದ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿದ್ದೆವು, ಆದರೆ ಈ ಕಟ್ಟಡವನ್ನು ಮುಜರಾಯಿ ಇಲಾಖೆಯಿಂದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ಮಹಾ ವಿದ್ಯಾಲಯಕ್ಕೆ ನೀಡಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ, ಈ ಕಟ್ಟಡವು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವಶ್ಯಕವಾಗಿರುತ್ತದೆ, ಆದ್ದರಿಂದ ತಾವುಗಳು ತಕ್ಷಣವೇ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ಮಹಾ ವಿದ್ಯಾಲಯಕ್ಕೆ ಮಂಜೂರು ಮಾಡಿರುವುದನ್ನು ರದ್ದುಗೊಳಿಸಿ, ದೇವಸ್ಥಾನದ ಕೆಲಸಗಳಿಗೆ ಉಪಯೋಗಿಸುವಂತೆ ಆದೇಶವನ್ನು ಕೊಡಬೇಕಾಗಿ ಮನವಿ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಕೋಟೆ ಕೃಷ್ಣಮೂರ್ತಿ, ಶಿವಕುಮಾರ್, ಪ್ರಶಾಂತ್, ರಾಘವೇಂದ್ರ…

Read More

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಹಿರೇಮಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಪಕ್ಷಾತೀತವಾಗಿ ಜನರ ಪ್ರೀತಿ ವಿಶ್ವಾಸವನ್ನು ಶಾಸಕ ಸಿ.ಟಿ.ರವಿ ಪಡೆದಿದ್ದಾರೆಂದು ಬಿಜೆಪಿ ಮುಖಂಡ ರೇವುನಾಥ್ ತಿಳಿಸಿದರು. ಹಿರೇಮಗಳೂರಿನ ಸ್ಮಶಾಣದ ಜಾಗವನ್ನು ಪರಿಶೀಲಿಸಿ ಮಾತನಾಡಿ, ಹಿರೇಮಗಳೂರು ಸ್ಮಶಾಣವನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಸಿ.ಟಿ.ರವಿ ಅವರಿಗೆ ೨ ವರ್ಷದ ಹಿಂದೆ ಮನವಿ ಸಲ್ಲಿಸಲಾಗಿತ್ತು, ಆ ಮನವಿಗೆ ಸ್ಪಂದಿಸಿ ಹಿರೇಮಗಳೂರು ಸ್ಮಶಾಣದಲ್ಲಿ ಬೋರ್‌ವೆಲ್, ಶೆಡ್, ರಸ್ತೆ, ಕಾಂಪೌಂಡ್ ಮತ್ತು ವಿದ್ಯುತ್ ಕಂಬಗಳನ್ನು ನಿರ್ಮಿಸಲು ೨೩ ಲಕ್ಷ ರೂ ಬಿಡುಗಡೆ ಮಾಡಿದ್ದಾರೆ, ಜತೆಗೆ ಗ್ರಾಮಕ್ಕೆ ಅಂಬೇಡ್ಕರ್ ವೃತ್ತ, ಚಥುಸ್ಪದ ರಸ್ತೆ, ದೇವಾಲಯದ ಅಭಿವೃದ್ಧಿ, ಯಾತ್ರಿನಿವಾಸ್ ನಿರ್ಮಿಸಿ, ಹಿರೇಮಗಳೂರಿನ ಜನರ ಪ್ರೀತಿ, ವಿಶ್ವಾಸ ಪಡೆದಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಕೇಶವಮೂರ್ತಿ, ನಂದನ್‌ಕುಮಾರ್, ಉಮೇಶ್, ಅರುಣ್‌ಕುಮಾರ್, ರವಿಕುಮಾರ್, ಕಾಂತರಾಜ್ ಉಪಸ್ಥಿತರಿದ್ದರು. Hiremagaluru Cemetery

Read More

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮುದ್ರಣ ಮಾಧ್ಯಮವನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಬಸವ ಮಂದಿರದ ಡಾ|ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಿಸಿದರು. ಮಂಗಳವಾರ ನಗರದ ಡಾ|ಬಿ.ಆರ್.ಅಂಬೇಡ್ಕರ್‌ದಲ್ಲಿ ಅಕ್ಷರ ತೋರಣ ದಿನಪತ್ರಿಕೆ ದಶಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಪತ್ರಿಕೆ ಕಟ್ಟಿ ಬೆಳೆಸಬೇಕಾದರೇ ಅಲ್ಲಿ ಒಬ್ಬ ವ್ಯಕ್ತಿ ಶ್ರಮದಿಂದ ಸಾಧ್ಯವಿಲ್ಲ. ಸಮೂಹ ಶ್ರಮವನ್ನು ಬಯಸು ತ್ತದೆ. ಅಕ್ಷರ ತೋರಣ ದಿನಪತ್ರಿಕೆ ಯಶಸ್ವಿ ೧೦ ವರ್ಷಗಳನ್ನು ಪೂರೈಸಿದ್ದು, ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ, ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಶುಭಾ ಹಾರೈಸಿದರು. ಇಂದಿನ ಆಧುನಿಕ ಯುಗದಲ್ಲಿ ಮುದ್ರಣ ಮಾಧ್ಯಮದಲ್ಲಿ ಪತ್ರಿಕೆಗಳನ್ನು ತರುವುದು ಸುಲಭದ ಮಾತಲ್ಲ, ಸವಾಲಿನ ಕೆಲಸ. ಮುದ್ರಣ ಮಾಧ್ಯಮ ಹಿನ್ನಡೆ ಸಾಧಿಸುತ್ತಿದೆಯೋ ಎಂಬ ಬಗ್ಗೆ ಗಂಭೀರವಾಗಿ ಯೋ ಜನೆ ಮಾಡಬೇಕಿದೆ. ಸಾಪ್ತಾಹಿಕ ಪುರಾವಣೆ ಪುಟಗಳನ್ನು ಕಡಿಮೆ ಮಾಡಿ ಕ್ಯೂಆರ್ ಕೋಡ್ ಇಟ್ಟು ಆಸ ಕ್ತರು ಓದುವಂತೆ ಮಾಡುತ್ತಿದೆ. ಒಂದು ರೀತಿ ಅಂತರ್ಜಾಲದಲ್ಲಿ ಒಗ್ಗುವಂತೆ ಮಾಡಲಾಗುತ್ತಿದೆ ಎಂದರು. ಮುದ್ರಣ ಮಾಧ್ಯಮ ಮುನ್ನಡೆಸಲು ಓದುಗರು ಮತ್ತು ಜಾಹೀರಾತು…

Read More

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಭಾರತಕ್ಕೆ ಪ್ರಪಂಚದಲ್ಲೇ ಅತ್ಯಂತ ಉದ್ದವಾದ ಲಿಖಿತ ಸಂವಿಧಾನವಿದೆ. ಅದು ದೇಶದ ಜನರ ಮೂಲಭೂತ ಜವಾಬ್ದಾರಿಗಳನ್ನೊಳಗೊಂಡ ಲಿಖಿತ ದಾಖಲೆಯಾಗಿದೆ. ಇದರ ಪ್ರಕಾರ ಎಲ್ಲಾ ದೇಶವಾಸಿಗಳ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ ಸಂಸತ್ತನ್ನು ರಚಿಸಲಾಗಿದೆ ಎಂದು ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಹೇಳಿದರು. ಅವರು ಮಂಗಳವಾರ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆ ಮತ್ತು ಇತರೆ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಅಣಕು ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು. ಕಟುಂಬ ಸದೃಢವಾಗಿ ನಡೆಯಬೇಕು ಎಂದರೆ ಅದರಲ್ಲಿರುವ ಎಲ್ಲರಿಗೂ ಜವಾಬ್ದಾರಿ ಮತ್ತು ಪಾತ್ರಗಳಿರುತ್ತವೆ. ಹಾಗೆಯೇ ಇಡೀ ಪ್ರಪಂಚದ ಆಡಳಿತವನ್ನು ನೋಡಿದಾಗ ಅದನ್ನು ಕ್ರಮಬದ್ಧವಾಗಿ ನಡೆಸಲು ಒಂದು ಚೌಕಟ್ಟು ಬೇಕಾಗುತ್ತದೆ. ಇದು ಅಲಿಖಿತವಾದ ಪದ್ಧತಿಯಾಗಿ ಅಳವಡಿಸಿಕೊಂಡಿರುತ್ತೇವೆ. ಅದೇ ರೀತಿ ಅನುಸರಿಸಬೇಕಾದ ಎಲ್ಲಾ ಜವಾಬ್ದಾರಿಗಳನ್ನು ಕುರಿತ ಲಿಖಿತ ಸಂವಿಧಾನಗಳನ್ನೂ ಅಳವಡಿಸಿಕೊಂಡಿವೆ ಎಂದರು. ನಮ್ಮ ಸಂಸತ್ತು ಕಾಯ್ದೆಗಳನ್ನು ಮಾಡುವುದಷ್ಟೇ ಅಲ್ಲದೆ ಅಗತ್ಯವಿಲ್ಲ ಎಂದರೆ ಅದನ್ನು ಹಿಂದಕ್ಕೂ ಪಡೆಯುತ್ತದೆ. ಸಂಸತ್ತು ನೀತಿ ರೂಪಕ ಆಗಿರುತ್ತದೆ. ಸಾಧಕ ಬಾಧಕಗಳನ್ನು ಸಮಾಲೋಚನೆ ಮಾಡಿ ನಮ್ಮ ಜನರಿಗೆ…

Read More

ಎನ್.ಆರ್.ಪುರ:  ಶಾಸಕ ಟಿ.ಡಿ.ರಾಜೇಗೌಡ ಮೇಲೆ ಸಾರ್ವಜನಿಕರು ವಿಶ್ವಾಸ ಕಳೆದುಕೊಂಡು ಬಹಳ ದಿನಗಳಾಗಿದ್ದು ಅನುದಾನ ತಂದರೆ ತಾವು ಎಂದು, ಇಲ್ಲದಿದ್ದರೆ ಮಾಜಿ ಶಾಸಕರು ಕೈತಪ್ಪಿಸಿ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ವ್ಯಂಗ್ಯವಾಡಿದ್ದಾರೆ. ತಾಲ್ಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್‌ಗೋಡು ಗ್ರಾಮದಲ್ಲಿ ಸೋಮವಾರ ಸಂಜೆ ೨೦೦ಕ್ಕೂ ಹೆಚ್ಚು ಮಂದಿ ಬಿಜೆಪಿಯ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಮೆಚ್ಚಿ ಸಾರ್ವಜನಿಕರು ಬಿಜೆಪಿ ಸೇರಿದ್ದು ದೇಶಕ್ಕೆ ಬಿಜೆಪಿ ಅನಿವಾರ್ಯ ಎಂಬುದು ಜನ ತೀರ್ಮಾನಿಸಿದ್ದಾರೆ ಎಂದರು. ಹೆಚ್ಚಿನ ಮಟ್ಟದಲ್ಲಿ ದಲಿತರೇ ಇರುವ ಮಹಲ್‌ಗೋಡು ಇಷ್ಟೊಂದು ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ದಲಿತರಿಗೆ ಮೀಸಲಾತಿ ಹೆಚ್ಚಿಸಿದ ರಾಜ್ಯಸರ್ಕಾರದ ನಿಲುವನ್ನು ಅವರು ಮೆಚ್ಚಿದ್ದಾರೆ. ದೇಶದ ಭದ್ರತೆಯನ್ನೂ ಗಮನಿಸಿ ಬಿಜೆಪಿ ಸೇರ್ಪಡೆಗೊಂಡಿರುವರುವುದು ಖುಷಿಯ ವಿಚಾರ ಎಂದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಕಲ್ಲುಮಕ್ಕಿ ಉಮೇಶ್, ನಾಗೇಶ್, ವನಿಲಾ ಭಾಸ್ಕರ್,…

Read More