Subscribe to Updates
Get the latest creative news from FooBar about art, design and business.
- e-paper (21-10-2025) Chikkamagalur Express
- ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ
- ದೇವೀರಮ್ಮನ ದರ್ಶನಕ್ಕೆ ದೇವೀರಮ್ಮನ ಬೆಟ್ಟಕ್ಕೆ ಸಾಗಿ ಬಂದ ಭಕ್ತರು
- ಅಪರಾಧವನ್ನು ದ್ವೇಷಿಸಬೇಕು ಹೊರತು-ಅಪರಾಧಿಯಲ್ಲ
- ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವೀರಮ್ಮ ಉತ್ಸವ ಆರಂಭ
- e-paper (19-10-2025) Chikkamagalur Express
- ಶಿಕ್ಷಣ ಕೇವಲ ಸರ್ಕಾರಿ ಉದ್ಯೋಗಕ್ಕಷ್ಟೇ ಅಲ್ಲ, ಸಂಸ್ಕಾರಕ್ಕೆಂದು ಭಾವಿಸಿ
- ಮೇದ ಜನಾಂಗವು ಸದಾ ಸಮಾಜದೊಂದಿಗೆ ಗಟ್ಟಿಯಾಗಿ ಉಳಿದಿದೆ
Author: chikkamagalur express
ಚಿಕ್ಕಮಗಳೂರು: ನಗರಸಭೆ ವತಿಯಿಂದ ಶೀಘ್ರದಲ್ಲಿಯೇ ಜನರ ಕುಂದು ಕೊರತೆಯನ್ನು ಆಲಿಸಲು ಜನಸಂಪರ್ಕ ಸಭೆ ನಡೆಸಿ, ಜನಸ್ನೇಹಿ ನಗರಸಭೆ ಆಡಳಿತವನ್ನು ಮಾಡಲಾಗುವುದೆಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು. ನಗರದ ೨೩ನೇ ವಾರ್ಡ್‌ನಲ್ಲಿ ಡಾಂಬರೀಕರಣ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ನಗರಸಭೆ ವತಿಯಿಂದ ಶೀಘ್ರದಲ್ಲಿಯೇ ಎಲ್ಲಾ ವಾರ್ಡ್‌ಗಳಲ್ಲಿಯೂ ಜನ ಸಂಪರ್ಕ ಸಭೆ ಮಾಡುವುದರ ಜತೆಗೆ, ಜನರ ಕುಂದು ಕೊರತೆಗಳನ್ನು ಆಲಿಸಿ ತಕ್ಷಣವೇ ಪರಿಹರಿಸುವುದರ ಜತೆಗೆ, ಜನಸ್ನೇಹಿ ನಗರಸಭೆ ಆಡಳಿತವನ್ನು ಮಾಡುತ್ತೇವೆ ಎಂದು ತಿಳಿಸಿದರು. ನಗರಸಭೆ ಎಸ್.ಎಫ್.ಸಿ ನಿಧಿಯಿಂದ ಡಾಂಬರೀಕರಣ ರಸ್ತೆಗೆ ೧೬.೫ ಲಕ್ಷ ರೂಗಳ ಕಾಮಗಾರಿ ನಡೆಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು, ನಗರದ ಎಲ್ಲಾ ವಾರ್ಡ್‌ಗಳ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿ ಹಂತಹಂತವಾಗಿ ಕೆಲಸ ಮಾಡಲಾಗುವುದು ಎಂದರು. ನಗರಸಭೆ ಸದಸ್ಯೆ ಮಂಜುಳಾಶ್ರೀನಿವಾಸ್ ಮಾತನಾಡಿ. ನನ್ನ ವಾರ್ಡ್‌ನಲ್ಲಿ ಅಂಬೇಡ್ಕರ್ ಸಮುದಾಯ ಭವನ ಅರ್ಧಕ್ಕೆ ನಿಂತಿದೆ, ಬಾಕ್ಸ್ ಚರಂಡಿ, ರಸ್ತೆ ಕಾಮಗಾರಿ, ಶುದ್ಧಗಂಗಾ ಘಟಕ ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆ, ನಮ್ಮ…
ಚಿಕ್ಕಮಗಳೂರು: ಶಿಕ್ಷಕರ ಆರ್ಹತಾ ಪರೀಕ್ಷೆಗೆ ೧೫೦೭ ಅಭ್ಯರ್ಥಿಗಳು ಹಾಜರಾದರೇ ೨೧೨ ಅಭ್ಯರ್ಥಿಗಳು ಗೈರು ಹಾಜರಾದರು. ಬಸ ವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲೆನಾಡು ವಿದ್ಯಾಸಂಸ್ಥೆ, ವಿಜಯಪುರ ಜೆವಿಎಸ್ ಶಾಲೆ, ಸಂತ ಜೋಸೆಫ್ ಶಾಲೆ, ಬೇಲೂರು ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು, ಟಿಎಂಎಸ್ ಶಾಲೆ ಪರೀಕ್ಷ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷೆ ಹಿನ್ನಲೆಯಲ್ಲಿ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯನ್ನು ವಿಧಿಸಲಾಗಿತ್ತು. ಅಭ್ಯರ್ಥಿಗಳನ್ನು ತಪಾಸಣೆಗೊಳಪಡಿಸಿ ಪರೀಕ್ಷ ಕೇಂದ್ರದೊಳಗೆ ಬಿಡಲಾಯಿತು. ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ೨೬೦ ಅಭ್ಯರ್ಥಿಗಳು ಹಾಜ ರಾಗಿದ್ದು, ೨೭ ಅಭ್ಯರ್ಥಿಗಳು ಗೈರು ಹಾಜರಾದರು. ಎಂ.ಇಎಸ್ ಕಾಲೇಜು ಪರೀಕ್ಷ ಕೇಂದ್ರದಲ್ಲಿ ೨೫೪ ಅಭ್ಯರ್ಥಿಗಳು ಹಾಜರಾಗಿದ್ದು, ೩೪ ಅರ್ಭರ್ಥಿಗಳು ಗೈರು ಹಾಜರಾದರು. ವಿಜಯಪುರ ಜೆವಿಎಸ್ ಶಾಲೆ ಪರೀಕ್ಷ ಕೇಂದ್ರದಲ್ಲಿ ೨೫೭ ಅಭ್ಯರ್ಥಿಗಳು ಹಾಜರಾಗಿದ್ದು, ೩೦ ಅಭ್ಯರ್ಥಿಗಳು ಗೈರು ಹಾಜರಾದರು. ಸಂತಜೋಸೆಫ್ ಬಾಲಕಿರ ಪ್ರೌಢಶಾಲೆ ಪರೀಕ್ಷ ಕೇಂದ್ರದಲ್ಲಿ ೨೬೦ ಅಭ್ಯರ್ಥಿ ಗಳು ಪರೀಕ್ಷೆ ಬರೆದರೇ, ೨೭ ಅಭ್ಯರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು.…
ಪ್ರತಿ ವರ್ಷ ದತ್ತಪೀಠಕ್ಕೆ ಬರುವುದು ಅಲ್ಲಿ ಹೆಣ ಇಲ್ಲದ ಗೋರಿಗಳನ್ನು ನೋಡಿಕೊಂಡು ಹೋಗುವುದು, ನಮಗೆ ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬಂದಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ನಮಗೆ ಎಚ್ಚರಿಕೆ ನೀಡಿ…ನೀಡಿ… ಬೇಜಾರಾಗಿದೆ. ಆಕ್ರೋಶವಾಗಿದೆ. ಧರ್ಮದ ವಿಚಾರದಲ್ಲಿ ಈ ಡ್ರಾಮಾ ಒಳ್ಳೆದಲ್ಲ. ಏನಾದರೂ ಆಗಲಿ ಎಂದು ದತ್ತಪೀಠದ ವಿಚಾರದಲ್ಲಿ ಸರ್ಕಾರ ತಕ್ಷಣ ಗಟ್ಟಿ ನಿರ್ಧಾರ ಮಾಡಲಿ.ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಅಲ್ಲಿ ಹಿಂದೂ ಅರ್ಚಕರ ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಇಂದಿನಿಂದ 7 ದಿನಗಳ ಕಾಲ ನಡೆಯುವ ದತ್ತಮಾಲಾ ಅಭಿಯಾನದ 13ನೇ ತಾರೀಖು ಕೊನೆಯಾಗಲಿದೆ. ಅಷ್ಟರೊಳಗೆ ಹಿಂದೂ ಅರ್ಚಕರ ನೇಮಿಸಬೇಕು. ಇಲ್ಲವಾದರೆ, ಪರಿಸ್ಥಿತಿ ಕಠಿಣವಾಗಲಿದೆ. ಅಲ್ಲಿ ಹಿಂದೂಗಳು ಹಾಗೂ ದತ್ತಭಕ್ತರಿಂದ ಅಲ್ಲಿ ಏನಾದರೂ ಅನಾಹುತವಾದರೆ ಸರ್ಕಾರವೇ ನೇರ ಹೊಣೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ…
ಹಲವು ವರ್ಷಗಳಿಂದ ಅನಧೀಕೃತ ಮಸೀದಿ ನಿರ್ಮಾಣದ ಹಿನ್ನೆಲೆ ನಗರಸಭೆ ಅಧ್ಯಕ್ಷ ಹಾಗೂ ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ ಬೈಪಾಸ್ ರಸ್ತೆಯ ಆಶ್ರಯ ಯೋಜನೆ ಬಡಾವಣೆಯಲ್ಲಿ ಅಕ್ರಮ ಮಸೀದಿ ನಿರ್ಮಾಣದ ಆರೋಪ ಕೇಳಿ ಬರುತ್ತಿದ್ದಂತೆ ಕೂಡಲೇ ದಾಳಿ ನಡೆಸಿದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮಸೀದಿ ಕುರಿತದಂತೆ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಮಸೀದಿ ಕುರಿತಂತೆ ಸೂಕ್ತ ದಾಖಲೆಗಳನ್ನ ಒದಗಿಸುವಂತೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಯಾವುದೇ ದಾಖಲೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಸೀದಿಯ ಸುತ್ತಲು ವೀಕ್ಷಣೆ ನಡೆಸಿದ್ದಾರೆ. ಯಾರ ಜಾಗ, ಯಾವಾಗಿಂದ ಮಸೀದಿ ಇದೆ. ಅನುಮತಿ ಇದೆಯಾ ಎಂಬೆಲ್ಲಾ ಪ್ರಶ್ನೆ ಕೇಳಿ ಸೂಕ್ತ ದಾಖಲೆ ಒದಿಗಿಸುವಂತೆ ಸೂಚಿಸಿದ್ದಾರೆ.
ಚಿಕ್ಕಮಗಳೂರು ಎಕ್ಸ್ ಪ್ರೆಸ್: ಕಾಂಗ್ರೆಸ್ ಪಕ್ಷದ ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಜಿಲ್ಲಾವಾರು ಸಮಸ್ಯೆಗಳ ಬಗ್ಗೆಯೂ ಕೂಡ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಪ್ರಣಾಳಿಕೆಯನ್ನು ತಯಾರಿಸಲಾಗುವುದು ಎಂದು ಕೆ.ಪಿ.ಸಿ.ಸಿ ಚುನಾವಣಾ ಪ್ರಣಾಳಿಕಾ ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅವರು ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಕುರಿತು ಪ್ರಣಾಳಿಕಾ ಸಮಿತಿ ಅಧ್ಯಕ್ಷರಾದ ಪರಮೇಶ್ ರವರು ಜಿಲ್ಲಾವಾರು ಭೇಟಿ ನಡೆಸಿ ಆಯಾ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದು ಜಿಲ್ಲಾವಾರು ಪ್ರನಾಳಿಕೆಯನ್ನು ತಯಾರಿಸಲಿದ್ದಾರೆ ಎಂದರು. ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗದ ವಿಭಾಗದ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಂಡ ಮೇಲೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗದ ವಿಭಾಗದವರು ಮತ್ತು ಕಾಂಗ್ರೆಸ್ ಪಕ್ಷದ ಇತರೆ ಎಲ್ಲಾ ವಿಭಾಗದವರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಅತ್ಯಂತ ಚಿಕ್ಕಪುಟ್ಟ ಸಮುದಾಯಗಳನ್ನೂ ಗುರುತಿಸಿ ಆ ಸಮುದಾಯಗಳಿಗೂ ಪಕ್ಷದಲ್ಲಿ ಪ್ರಾತಿನಿತ್ಯವನ್ನು…
ಚಿಕ್ಕಮಗಳೂರುಎಕ್ಸ್ಪ್ರೆಸ್: ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಂಡಿದೆ. ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿಯವರು ಏನು ಸಾಭೀತು ಮಾಡಲು ಹೊರಟಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು. ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ದಲ್ಲಿ ಚುನಾವಣೆ ಘೋಷಣೆಯಾಗಿದೆ. ಸ್ವಾತಂತ್ರö್ಯ ಭಾರತದ ನಂತರ ಅನೇಕ ವರ್ಷ ಕಾಂಗ್ರೆಸ್ ಆಡಳಿತ ನಡೆಸಿತ್ತು. ಆದರೆ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು. ರಾಜಕೀಯ ಪಕ್ಷ ಇರುವುದು ಚುನಾವಣೆಯನ್ನು ಎದುರಿಸಲು ಆದರೆ, ಚುನಾವಣೆ ಘೋಷಣೆಯಾದ ಬಳಿಕವು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಯಾಕೆ ಮಾಡುತ್ತಿದ್ದಾರೆಂದು ಅ ರ್ಥವಾಗುತ್ತಿಲ್ಲ, ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಹೇಳಿದರು. ಅಂದಿ ನಿಂದ ಹಿಂದಿನ ಕಾಂಗ್ರೆಸ್ ಸತ್ತು ಹೋಗಿದೆ. ಹೊಸ ಕಾಂಗ್ರೆಸ್ ದೇಶವನ್ನು ಮುನ್ನಡೆಸಲು ಬಂದಿದ್ದಾರೆ ಆದರೆ, ಅವರ ಅಸ್ತಿತ್ವವೇ ಇಲ್ಲ ಎಂದು…
ಚಿಕ್ಕಮಗಳೂರುಎಕ್ಸ್ಪ್ರೆಸ್: ರಾಜ್ಯದಗ್ರಾಮೀಣ ಭಾಗಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವಆಶಯದಿಂದ ಸರ್ಕಾರದ ವತಿಯಿಂದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಗಳ ಸಹಯೋಗದಲ್ಲಿಗ್ರಾಮ ಪಂಚಾಯತ್ ಹಂತದಿ0ದರಾಜ್ಯ ಹಂದವರೆಗೆಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆಎಂದುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಜಿ.ಪ್ರಭು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು. ತಂಡ ಸ್ಪರ್ಧೆಗಳಾದ ಕಬಡ್ಡಿ, ಖೋ-ಖೋ, ವಾಲಿಬಾಲ್ ಹಾಗೂ ವೈಯಕ್ತಿಕ ಸ್ಪರ್ಧೆಗಳಾದ ಎತ್ತಿನಗಾಡಿ, ಮಟ್ಟಕುಸ್ತಿ, ಯೋಗ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಕೆಸರುಗದ್ದೆಓಟ, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಗ್ರಾ.ಪಂ.ಗಳು ಸ್ವ-ಆಸಕ್ತಿಯಿಂದ ನಡೆಸಬಹುದು. ಕೆಸರುಗದ್ದೆಓಟ, ಹಗ್ಗಜಗ್ಗಾಟ ಮತ್ತುವಾಲಿಬಾಲ್‌ಸ್ಪರ್ಧೆಗಳು ಜಿಲ್ಲಾಮಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಕ್ರೀಡಾಕೂಟವುಎಲ್ಲಾ ವಯೋಮಾನದವರಿಗೂ ಮುಕ್ತವಾಗಿದ್ದು, ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ. ಆಸಕ್ತರು ನವೆಂಬರ್ ೮ರೊಳಗೆ ಆಯಾಗ್ರಾ.ಪಂ.ನಲ್ಲಿ ಪಿಡಿಓಗಳಿಗೆ ಅರ್ಜಿ ಸಲ್ಲಿಸುವ ಮೂಲಕ ನೋಂದಾಯಿಸಿಕೊಳ್ಳಬಹುದುಎ0ದುಅವರು ತಿಳಿಸಿದರು. ಇದುರಾಜ್ಯಮಟ್ಟದಕಾರ್ಯಕ್ರಮವಾಗಿದ್ದು, ಗ್ರಾಮ ಪಂಚಾಯತ್‌ನಿAದ ಹಿಡಿದುಹಂತಹAತವಾಗಿರಾಜ್ಯಮಟ್ಟದವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಪ್ರತಿಗ್ರಾ.ಪಂ ಅಥವಾ ಹೋಬಳಿ ಮಟ್ಟದಲ್ಲಿಕ್ರೀಡಾಕೂಟಆಯೋಜಿಸಲಾಗುತ್ತದೆ. ಹೆಚ್ಚು ಗ್ರಾ.ಪಂ.ಗಳಿರುವ ತಾಲ್ಲೂಕುಗಳಲ್ಲಿ ಹೋಬಳಿ ಮಟ್ಟದಕ್ರೀಡಾಕೂಟವನ್ನುಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಆಯ್ಕೆಯಾದವರುರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಪ್ರತಿ ಹಂತದ ವಿಜೇತರಿಗೆ ಬಹುಮಾನ, ಪ್ರಮಾಣಪತ್ರ…