Author: chikkamagalur express

ಚಿಕ್ಕಮಗಳೂರು: : ಡಿಸೆಂಬರ್ ೧೨ ರಿಂದ ೧೪ ರವರೆಗೆ ನಡೆಯುವ ದತ್ತ ಜಯಂತಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಿನ್ನೆ ನಡೆದ ದತ್ತ ಜಯಂತಿ ಕಾರ್ಯಕ್ರಮದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ಕಾರ ಮತ್ತು ನ್ಯಾಯಾಲಯದ ನಿರ್ದೇಶನದಂತೆ ವ್ಯವಸ್ಥಾಪನ ಸಮಿತಿ ಮೂಲಕ ಮೂರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು. ದತ್ತ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದ್ದು, ರಸ್ತೆ, ಕುಡಿಯುವ ನೀರು, ಪಾರ್ಕಿಂಗ್, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಆಳವಡಿಸುವಂತೆ, ಆರೋಗ್ಯ ಸೇವೆ ಮತ್ತು ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ ಅವರು ಕಾರ್ಯಕ್ರಮ ಶಾಂತಿ ಮತ್ತು ವ್ಯವಸ್ಥಿತವಾಗಿ ನಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ವ್ಯವಸ್ಥಾಪನ…

Read More

ಚಿಕ್ಕಮಗಳೂರು- ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸರ್ಕಾರ ೨೫ ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತೀ ಕ್ಷೇತ್ರಕ್ಕೆ ಗ್ರಾಮಾಂತರ ಭಾಗದ ರಸ್ತೆಗಳ ಅಭಿವೃದ್ಧಿಗೆ ೧೫ ಕೋಟಿ ರೂ ಅನುದಾನವನ್ನು ಮೀಸಲಿಡಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ಹಿರೇಕೊಳಲೆ ಗ್ರಾಮದಲ್ಲಿ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕ್ಷೇತ್ರದ ಪ್ರತೀ ಪಂಚಾಯಿತಿಗೆ ೨೫ ರಿಂದ ೩೦ ಲಕ್ಷ ರೂ ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮೀಸಲಿಡಲಾಗಿದೆ ಎಂದರು, ಸರ್ಕಾರ ಬಂದ ಒಂದೂವರೆ ವರ್ಷಗಳ ನಂತರ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ಇದಕ್ಕೂ ಮೊದಲು ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು. ಹೊಸಪುರ ರಸ್ತೆಗೆ ೫೦ ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಸಧ್ಯದಲ್ಲೇ ಉದ್ಘಾಟನೆಗೆ ಸಿದ್ದಗೊಂಡಿದೆ. ಜಾತಿ ಆಧಾರಿತ ಮಾಡದೆ ಪಕ್ಷಾತೀತವಾಗಿ…

Read More

ಚಿಕ್ಕಮಗಳೂರು: ವಿವಿಧ ಮಟ್ಟದಲ್ಲಿ ನಡೆಯುವ ಜನಸಂಪರ್ಕ ಸಭೆಗಳು ಜನರ ಮೂಲಭೂತ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಭೆಗಳಾಗಬೇಕು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ಅವರು ಇಂದು ಕ್ಷೇತ್ರದ ಹಿರೇಕೊಳಲೆ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದಿಂದ ತಾಲ್ಲೂಕು, ಜಿಲ್ಲಾ ಕೇಂದ್ರಕ್ಕೆ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಬರದಂತೆ ತಡೆಯುವ ಉದ್ದೇಶದಿಂದ ತಾಲ್ಲೂಕು ಅಧಿಕಾರಿಗಳ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆಯ ಬಾಗಿಲಿಗೆ ತರುವ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ನಡೆಸಿ ಇತ್ಯರ್ಥಪಡಿಸಲು ತೀರ್ಮಾನಿಸಲಾಗಿದೆ ಎಂದರು. ನಾಗರೀಕರ ಮೂಲಭೂತ ಸಮಸ್ಯೆಗಳಾದ ಮನೆ, ನಿವೇಶನ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗದಿರುವವರು, ವೃದ್ಧಾಪ್ಯ ವೇತನ ಸೇರಿದಂತೆ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತನ್ನಿ ಎಂದು ಹೇಳಿದ ಅವರು, ನಿಜವಾದ ಬಡವರು ಹೊಂದಿರುವ ಬಿಪಿಎಲ್ ಕಾರ್ಡನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿರೇಕೊಳಲೆ ಗ್ರಾ.ಪಂ ವ್ಯಾಪ್ತಿಯ ಹಿರೇಕೊಳಲೆಗೆ ೨೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ…

Read More

ಚಿಕ್ಕಮಗಳೂರು: ಮುಸ್ಲಿಂ ಸಮುದಾಯದವರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ಹಾಗೆಯೇ ಉಳಿಸಲಾಗಿದೆ ಆದರೆ ಹಿಂದುಗಳ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಒಂದು ಕೋಮಿನವರ ಕಾರ್ಡುಗಳನ್ನು ಹಾಗೆಯೇ ಉಳಿಸುವುದು ಹಾಗೂ ಇನ್ನೊಂದು ಕೋಮಿನವರ ಕಾರ್ಡ್‌ಗಳನ್ನು ರದ್ದು ಪಡಿಸುವುದು ಯಾವ ನ್ಯಾಯ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರದ್ದುಪಡಿಸಿರುವ ಬಿಪಿಎಲ್ ಕಾರ್ಡ್ ಗಳಲ್ಲಿ ಬಡವರಿರಲಿಲ್ಲವೆ? ಒಂದು ವೇಳೆ ಬಡವರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದ್ದೇ ಆಗಿದ್ದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಅನರ್ಹರು, ನೌಕರರು ಹಾಗೂ ಟ್ಯಾಕ್ಸ್ ಕಟ್ಟುವವರ ಕಾರ್ಡುಗಳನ್ನು ರದ್ದುಪಡಿಸಲಿ. ಅದರ ಬದಲು ಅರ್ಹರ ಕಾರ್ಡುಗಳನ್ನು ರದ್ದು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ಕಾನೂನು ಪ್ರಕಾರ ಹೋದರೆ ಎಷ್ಟು ಕಾರ್ಡ್ ಗಳು ರದ್ದಾಗುತ್ತವೆ ಎಂಬ ಲೆಕ್ಕ ಸರ್ಕಾರದ ಬಳಿ ಇದೆಯೇ ಎಂದು ಪ್ರಶ್ನಿಸಿದ ಅವರು ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರು…

Read More

ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ವೃದ್ಧ ದಂಪತಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಳಗಾಮೆ ಗ್ರಾಮದಲ್ಲಿ ನಡೆದಿದೆ. ಹತ್ಯೆ ಮಾಡಿದ ಮೊಮ್ಮಗ ಪರಾರಿಯಾಗಿದ್ದಾನೆ. ಮೂಲತಃ ಗುಬ್ಬಿಯವರಾದ ಬಸಪ್ಪ (೬೫) ಅವರ ಪತ್ನಿ ಲಲಿತಮ್ಮ (೫೮) ಮೊಮ್ಮಗನಿಂದ ಹತ್ಯೆಯಾಗಿದ್ದು, ಹತ್ಯೆ ಮಾಡಿದ ನಿಶಾಂತ್ ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ವಿವರ: ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಕೊಳಗಾಮೆ ಗ್ರಾಮದ ಮೊಗಣ್ಣಗೌಡ ಎಂಬವರ ಕಾಫಿತೋಟದಲ್ಲಿ ಕಳೆದ ೨೫ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಈ ವೃದ್ಧ ದಂಪತಿ ಕೊಳಗಾಮೆ ಗ್ರಾಮದಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಬಸಪ್ಪನ ಅಣ್ಣನ ಮಗಳ ಮಗನಾದ ನಿಶಾಂತ್ ಬಸಪ್ಪನ ಮನೆಗೆ ಬಂದಿದ್ದು, ಮೊಮ್ಮಗನಾದ ನಿಶಾಂತ್ ಹಣಕಾಸಿನ ವಿಚಾರಕ್ಕೆ ಬಸಪ್ಪ ಹಾಗೂ ಲೀಲಪ್ಪ ದಂಪತಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ದಂಪತಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಮೊಮ್ಮಗ ನಿಶಾಂತ್ ಬೆಂಗಳೂರಿನಲ್ಲಿದ್ದು, ಆಗಾಗ್ಗೆ ಬಸಪ್ಪ, ಲೀಲಮ್ಮ ಅವರ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನ ಲಾಗುತ್ತಿದ್ದು,…

Read More

ಚಿಕ್ಕಮಗಳೂರು:  ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಮಹಾಸಭೆ ನ.೨೩ ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ ೧೧ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ರಾಜ್ಯ ಸಮಿತಿಯ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಮಲ್ಲೇಶ್ ಅಂಬುಗ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ೩ ವರ್ಷಕ್ಕೊಮ್ಮೆ ಸಾಮಾನ್ಯ ಸಭೆ ನಡೆಸಲಾಗುತ್ತದೆ. ಅದರಂತೆ ಈಗಾಲೇ ತುಮಕೂರಿನಲ್ಲಿ ನ.೫, ೬ರಂದು ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅದೇ ರೀತಿ ಎಲ್ಲ ಜಿಲ್ಲೆಯಲ್ಲಿ ಸರ್ವಸದಸ್ಯರ ಸಭೆ ನಡೆಸಿ ನೂತನ ಪದಾಧಿಕಾರಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು. ನ.೨೩ ರಂದು ಆರಂಭವಾಗುವ ಕಾರ್ಯಕ್ರಮವನ್ನು ಡಿಎಸ್‌ಎಸ್ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿಶಂಕರ್ ಉದ್ಘಾಟಿಸುವರು. ನಿವೃತ್ತ ಡಿಡಿಪಿಯು ಎಚ್.ಎಂ.ರುದ್ರಸ್ವಾಮಿ ಅವರು ಬಿ.ಬಸವಲಿಂಗಪ್ಪನವರ ಬೂಸಾ ಚಳವಳಿ ಹಾಗೂ ದಸಂಸ ಹುಟ್ಟು ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ.ನಿಂಗಯ್ಯ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ…

Read More

ಚಿಕ್ಕಮಗಳೂರು: ತಾಲೂಕಿನ ಮಾರಿಕಟ್ಟೆ ಕಿರು ಅರಣ್ಯದಲ್ಲಿ ವಾಸ್ತವ್ಯ ಹೂಡಿರುವ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ರೈತ, ಬೆಳೆಗಾರರ ಬೆಳೆನಷ್ಟ ಉಂಟುಮಾಡಿದ್ದು, ಅರಣ್ಯ ಇಲಾಖೆ ಶೀಘ್ರದಲ್ಲಿ ಸ್ಥಳಪರಿಶೀಲನೆ ನಡೆಸಿ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆಗ್ರಹಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗ ಕಾಫಿ ಹಣ್ಣು ಕೊಯ್ಲಿಗೆ ಬಂದಿದೆ. ಆದರೆ, ಕಾರ್ಮಿಕರು ಕಾಫಿತೋಟದೊಳಗೆ ಹೋಗಲು ಭಯಪಡುತ್ತಿದ್ದಾರೆ. ಈ ಮಧ್ಯೆ ಆನೆಗಳು ಕಾಫಿ ಗಿಡಗಳನ್ನು ಬುಡಸಮೇತ ಕಿತ್ತುಹಾಕಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿವೆ. ಕೆಸವಿನ ಮನೆ ಬೈರೇಗೌಡ ಎಂಬುವರ ತೋಟದಲ್ಲಿ ಒಂದೂವರೆ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಕಾಫಿ ಗಿಡಗಳು ನಾಶವಾಗಿವೆ ಎಂದು ಹೇಳಿದರು. ಭತ್ತ, ಶುಂಠಿ, ಜೋಳ ಬೆಳೆ ನಾಶಮಾಡಿವೆ. ಇದೇ ರೀತಿ ದಿನೇಶ್, ಈರಯ್ಯ, ದ್ಯಾವಯ್ಯ, ಗುರುಮೂರ್ತಿ, ತಮ್ಮಣ್ಣಗೌಡ, ಮಂಜೇಗೌಡ, ಪುಟ್ಟೇಗೌಡ, ಅಶೋಕ, ನಾರಾಯಣಗೌಡ ಮತ್ತಿತರರ ತೋಟಗಳಲ್ಲೂ ಬೆಳೆ ನಾಶಮಾಡಿವೆ. ಅಲ್ಲಿ ಆಗಿರುವ ನಷ್ಟ ಅಂದಾಜಿಸಿದರೆ ಅರಣ್ಯ ಇಲಾಖೆ ಕೊಡುವ ಪರಿಹಾರ ಏನೇನೂ ಅಲ್ಲ. ಹೀಗಾಗಿ ಅಧಿಕಾರಿಗಳು ಸ್ಥಳ…

Read More

ಚಿಕ್ಕಮಗಳೂರು: ಬಕಾಸುರ ಮತ್ತು ಭಸ್ಮಾಸುರ ಸೇರಿದಾಗ ಏನಾಗುತ್ತದೋ ಅದು ಈಗ ವಕ್ಫ್ ಬೋರ್ಡ್ ಆಗಿ ಕುಳಿತುಕೊಂಡು ಎಲ್ಲವನ್ನೂ ಕಬಳಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು. ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದ ಆಜಾದ್ ಪಾರ್ಕ್ ಸರ್ಕಲ್‌ನಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿ ಹಮ್ಮಿಕೊಂಡಿರುವ ಆಹೋ ರಾತ್ರಿ ಧರಣಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ೧೯೯೫ ರಲ್ಲಿ ವಕ್ಫ್ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ರಾಕ್ಷಸ ರೂಪವನ್ನು ಕೊಟ್ಟಿತು. ಯಾವ ಭೂಮಿಯನ್ನ ನಮ್ಮದು ಎಂದರೂ ಅದು ವಕ್ಫ್‌ಗೆ ಸೇರಿದ್ದು ಎಂದು ಕಾಯ್ದೆ ಹೇಳಿತು. ಲೋಕಸಭೆ ಅಧಿವೇಶನ ಆರ್ಡರ್‌ನಲ್ಲಿ ಇಲ್ಲದಿರುವಾಗ ಚರ್ಚೆಯೇ ಇಲ್ಲದೇ ಈ ಬಿಲ್ ಪಾಸ್ ಆಗಿತ್ತು. ಯಾರಿಗೂ ಇದರ ಗಂಭೀರತೆ ಅರ್ಥವಾಗಲಿಲ್ಲ. ನಿಧಾನವಾಗಿ ಒಂದೊಂದೇ ಅಸ್ತಿಯನ್ನು ನಮ್ಮದು ಎಂದು ದಾಖಲೆ ಮಾಡಿಸಿಕೊಂಡರು ಎಂದು ದೂರಿದರು. ಅದು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್, ಚಿಕ್ಕಮಗಳೂರಿನ ರತ್ನಗಿರಿ ಬೋರೆ, ನೆಲ್ಲೂರು ಮಠ ಹೀಗೆ ದೇಶಾದ್ಯಂತ ಎಲ್ಲವೂ ವಕ್ಫ್‌ಗೆ ಸೇರಲಾರಂಭಿಸಿತು.…

Read More