Author: chikkamagalur express

ಚಿಕ್ಕಮಗಳೂರು: ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನ.೨೨ ರಿಂದ ೨೪ ರವರೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಜನಪರ ಸಮಾಜಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ದೀಪ ನರ್ಸಿಂಗ್ ಹೋಂ ಎದುರು ರಸ್ತೆಯ ಪಟಾಕಿ ಮೈದಾನದಲ್ಲಿ ನ.೨೨ ರಂದು ಸಂಘದ ಆಟೋ ಚಾಲಕರು ಮತ್ತು ಮಾಲೀಕರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ವಿಜೇತ ಮೊದಲ ತಂಡಕ್ಕೆ ೮ ಸಾವಿರ ರೂ, ದ್ವಿತೀಯ ಬಹುಮಾನ ೫ ಸಾವಿರ ರೂ ಮತ್ತು ಆಕರ್ಷಕ ಟ್ರೋಫಿಯನ್ನು ಒಳಗೊಂಡಿದ್ದು, ಭಾಗವಹಿಸುವ ಪ್ರತೀ ತಂಡಕ್ಕೆ ೧೫೦೦ ರೂಗಳ ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ ಎಂದರು. ನ.೨೩ ರಂದು ಅಂಧ ಮಕ್ಕಳ ಶಾಲೆ, ಜೀವನಸಂಧ್ಯಾ ವೃದ್ಧಾಶ್ರಮ ಮತ್ತು ಅನ್ನಪೂರ್ಣ ವೃದ್ಧಾಶ್ರಮಕ್ಕೆ ಅನ್ನದಾನ ವ್ಯವಸ್ಥೆಯನ್ನು ಮಾಡಲಾಗಿದ್ದು, ೨೪ ರಂದು ಬೆಳಗ್ಗೆ ೮ ಗಂಟೆಗೆ ನಗರದ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಡೆಯಲಿದ್ದು,…

Read More

ಚಿಕ್ಕಮಗಳೂರು: ಇಲ್ಲಿನ ಜೈನ ಸಂಘದ ಆಸ್ತಿಯನ್ನು ನಗರದ ಖಾಸಗಿ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಇ-ಖಾತಾ ಮಾಡಿಸಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್‌ಜೈನ್ ಒತ್ತಾಯಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಎಂ.ಜಿ ರಸ್ತೆಯಲ್ಲಿ ಇರುವ ಒಂದು ಕಟ್ಟಡವನ್ನು ದಾನಿಗಳಾದ ಉಮ್ಮಾಜಿ ಎಂಬುವರು ಜೈನ್ ಸಂಘಕ್ಕೆ ಬಹಳ ಹಿಂದೆಯೇ ಹಸ್ತಾಂತರ ಮಾಡಿದ್ದಾರೆ. ಸಂಘದ ಅಭಿವೃದ್ಧಿಗೆ ಎಂದು ಈ ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ವಸತಿ ಸಹಿತ ಬಾಡಿಗೆಗೆ ನೀಡಲಾಗಿತ್ತು ಎಂದರು. ಅವರು ನಿಧನರಾದ ನಂತರ ಅವರ ಮಕ್ಕಳು ಇದೀಗ ಮೊಮ್ಮಕ್ಕಳು ಆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಒಂದು ವರ್ಷದ ತನಕ ನಿಯಮಿತವಾಗಿ ಅವರು ಸಂಘಕ್ಕೆ ಬಾಡಿಗೆ ಪಾವತಿಸಿಕೊಂಡು ಬಂದಿದ್ದರು. ಆದರೆ, ಕಳೆದ ವರ್ಷದಿಂದ ಬಾಡಿಗೆ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಲಾಗಿ ಈ ಸ್ವತ್ತು ನಮಗೆ ಸೇರಿದ್ದು ಬಾಡಿಗೆ ಪಾವತಿಸುವುದಿಲ್ಲ ಎಂದು ಹೇಳಿದರು ಎಂದು ಮಾಹಿತಿ ನೀಡಿದರು. ಈ ಸಂಬಂಧ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ನಕಲಿ…

Read More

ಚಿಕ್ಕಮಗಳೂರು: ‘ನಮ್ಮ ಭೂಮಿ ನಮ್ಮ ಹಕ್ಕು’ ಶೀರ್ಷಿಕೆಯಡಿ ವಕ್ಫ್‌ಭೂಮಿ ಸಮಸ್ಯೆ ಪರಿಹಾರಕ್ಕಾಗಿ ನ.೨೧ ರಿಂದ ಎರಡು ದಿನ ನಗರದ ಆಜಾದ್ ಪಾರ್ಕಿನಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ವಕ್ಫ್‌ನಿಂದ ಯಾರಿಗಾದರೂ ಸಮಸ್ಯೆ ಆಗಿದ್ದರೆ ರೈತರು ಧರಣಿ ಸಂದರ್ಭದಲ್ಲಿ ನಮಗೆ ಮನವಿ ಸಲ್ಲಿಸಬಹುದಾಗಿದ್ದು, ಇದೊಂದು ಪಕ್ಷಾತೀತ ಧರಣಿ ಹೋರಾಟ ಎಂದು ಹೇಳಿದರು. ವಕ್ಫ್ ಆಸ್ತಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ಹತ್ತಾರು ದಿನ ಪಕ್ಷದೊಳಗೆ ಆಂತರಿಕ ಚರ್ಚೆ ನಡೆದು ವ್ಯವಸ್ಥಿತವಾಗಿ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲೂ ವಕ್ಫ್ ಆಸ್ತಿ ಸಂಬಂಧ ಸಮಸ್ಯೆ ಉಂಟಾಗಿದ್ದರೆ ಸಾರ್ವಜನಿಕರು, ರೈತರು, ಮಠ-ಮಂದಿರಗಳು, ಶಾಲೆಗಳು ಹಾಗೂ ಸಾರ್ವಜನಿಕರು ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ೨ ಲಕ್ಷ ಸದಸ್ಯತ್ವ: ಬಿಲ್ಲೆಯಲ್ಲಿ ಇತ್ತೀಚೆಗೆ ಕೈಗೊಂಡ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಒಟ್ಟು ೨…

Read More

ಚಿಕ್ಕಮಗಳೂರು:  ನಗರದ ವಿಜಯಪುರದಲ್ಲಿರುವ ಒಕ್ಕಲಿಗರ ಭವನ ನಿರ್ಮಾಣವಾಗಿ ೨೫ ವರ್ಷಗಳು ತುಂಬಿರುವ ಪ್ರಯುಕ್ತ ಬೆಳ್ಳಿ ಮಹೋತ್ಸವದ ಸವಿ ನೆನಪಿಗಾಗಿ ಬಿಜಿಎಸ್ ವೃತ್ತದ ಬಳಿ ೧೦.೨೫ ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ನೂತನವಾಗಿ ನಿರ್ಮಿಸಿರುವ ಬೆಳ್ಳಿ ಭವನ ಕಟ್ಟಡದ ಉದ್ಘಾಟನೆ ನ.೨೫ ರಂದು ಸೋಮವಾರ ಬೆಳಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಬೆಳ್ಳಿ ಭವನ ಕಟ್ಟಡದ ಉದ್ಘಾಟನೆಯನ್ನು ಪರಮಪೂಜ್ಯ ಜಗದ್ಗುರು ಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಹಾಗೂ ಶ್ರೀ ಗುಣನಾಥ ಸ್ವಾಮೀಜಿ ನೆರವೇರಿಸಿ, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಬೆಳ್ಳಿ ಬಾಗಿನ ಸ್ಮರಣ ಸಂಚಿಕೆಯನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಎಂ.ಕೆ.ಪ್ರಾಣೇಶ್, ಸಿ.ಟಿ.ರವಿ, ಟಿ.ಡಿ. ರಾಜೇಗೌಡ, ಎಸ್.ಎಲ್. ಭೋಜೇಗೌಡ, ಹೆಚ್.ಡಿ. ತಮ್ಮಯ್ಯ, ಕೋಟಾ…

Read More

ಚಿಕ್ಕಮಗಳೂರು: ದುರಸ್ತಿಯಲ್ಲಿರುವ ರಸ್ತೆಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಚಿಕ್ಕಮಗಳೂರು ತಾಲ್ಲೂಕು ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ತಾಲ್ಲೂಕಿನ ಅನೇಕ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇವುಗಳ ದುರಸ್ತಿ ಕಾರ್ಯಗಳ ಜೊತೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಹೊಸ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ವ್ಯವಸ್ಥಿತವಾದ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣದೊಂದಿಗೆ ಕಾಮಗಾರಿಯು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದರು. ತಾಲ್ಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಕಾಫಿ, ಭತ್ತ, ಬಾಳೆ ಸೇರಿದಂತೆ ಬೆಳೆದು ನಿಂತಿರುವ ಅನೇಕ ರೈತರ ಬೆಳೆಗಳು ನಾಶವಾಗುತ್ತಿವೆ. ಜೊತೆಗೆ ಸಾರ್ವಜನಿಕರು ಭಯದ ವಾತಾವರಣದಲ್ಲಿ ಓಡಾಡುವ ವಿಪರ್ಯಾಸ ಉಂಟಾಗುತ್ತಿದೆ. ಅಧಿಕಾರಿಗಳು ಆನೆ ಬೀಡು…

Read More

ಚಿಕ್ಕಮಗಳೂರು: ಕಳೆದ ಒಂದುವರೆ ದಶಕದ ಬಳಿಕ ಹಸಿರ ಕಾಡಿನ ಮಧ್ಯೆ ಕೆಂಪು ಉಗ್ರರ ಕೆಂಪು ರಕ್ತ ಚೆಲ್ಲಿದೆ. 2005 ಫೆಬ್ರವರಿ 5 ರಂದು ನಕ್ಸಲ್ ನಾಯಕ ಸಾಕೇತ್ ರಾಜನ್ ಕಾಡಿನಲ್ಲಿ ಎ.ಎನ್.ಎಫ್. ಗುಂಡಿಗೆ ಬಲಿಯಾಗಿದ್ದರು. ಇದಾದ ಬಳಿಕ 2024ರ ನವೆಂಬರ್ 19ರಂದು ಮಾತ್ತದೇ ಕಾಡಿನಲ್ಲಿ ಅದೇ ನಕ್ಸಲ್‌ ನಾಯಕನ ರಕ್ತ ಚೆಲ್ಲಿದೆ. ಬರೋಬ್ಬರಿ 20 ವರ್ಷಗಳಿಂದ 30ಕ್ಕೂ ಹೆಚ್ಚು ಕೇಸ್ ಗಳಲ್ಲಿ 3 ರಾಜ್ಯಕ್ಕೆ ಬೇಕಾಗಿದ ಮೋಸ್ಟ್ ವಾಟೆಂಡ್ ಹಾರ್ಡ್ ನಕ್ಸಲ್ ವಿಕ್ರಂ ಗೌಡ ಎ.ಎನ್.ಎಫ್. ಜೊತೆಗಿನ ಗುಂಡಿನ ಕಾಳಗದಲ್ಲಿ ಹತನಾಗಿದ್ದಾನೆ.ರಾಜ್ಯದ ನಕ್ಸಲ್ ನಾಯಕನ ಹತ್ಯೆಯೊಂದಿಗೆ ನಕ್ಸಲ್ ಚಟುವಟಿಕೆಗೆ ಕೊನೆಯ ಮೊಳೆ ಎನ್ನುವ ಸ್ಥಿತಿ ಎದುರಾಗಿದ್ದು ಇನ್ನು ಉಳಿದ ನಕ್ಸಲರಾಗಿ ನಾಲ್ಕು ಜಿಲ್ಲೆಯಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೈಸೂರು ಯುನಿವರ್ಸಿಟಿಯಲ್ಲಿ ಎಂ.ಎ. ಗೋಲ್ಡ್ ಮೇಡಲಿಸ್ಟ್ ಸಾಕೇತ್ ರಾಜನ್ ದಕ್ಷಿಣ ಭಾರತದ ಕೆಂಪು ಉಗ್ರರ ಪಿತಾಮಹ. ಆತ ಎನ್ ಕೌಂಟರ್ ಆದ ಮೇಲೆ ಆತನ ಸ್ಥಾನ ತುಂಬಿದ್ದು ಮಲೆನಾಡಿನ ಬಿ.ಜೆ. ಕೃಷ್ಣಮೂರ್ತಿ…

Read More

ಚಿಕ್ಕಮಗಳೂರು: ತಾಲ್ಲೂಕಿನ ಕೆಸವಿನ ಮನೆಯಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟ ಸೇರಿದಂತೆ ಇತರೆ ಬೆಳೆಗಳನ್ನು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಸ್ಥಳಾಂತರಿಸಬೇಕು. ಅಧಿಕಾರಿಗಳು ಶೀಘ್ರ ಸ್ಥಳಮಹಜರು ನಡೆಸಿ, ಸೂಕ್ತ ವೈಜ್ಞಾನಿಕ ಪರಿಹಾರ ದೊರಕಿಸಿಕೊಡದಿದ್ದರೆ ಅರಣ್ಯ ಇಲಾಖೆ ಮುಂದೆ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಎಚ್ಚರಿಸಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಕೆಸವಿನ ಮನೆ ಬೈರೇಗೌಡ ಎಂಬುವರ ಕಾಫಿತೋಟದಲ್ಲಿ ಆನೆಗಳು ಸಹಸ್ರಾರು ಕಾಫಿ ಗಿಡಗಳನ್ನು ತುಳಿದು, ಬುಡ ಸಮೇತ ಕಿತ್ತುಹಾಕಿವೆ. ಕಾಫಿತೋಟಗಳಿಗೆ ಆನೆಗಳು ನುಗ್ಗಿವೆ ಎಂಬುದನ್ನು ಅರಿತ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ತೋಟದ ಸುತ್ತ ದಿಗ್ಭಂದನ ಹಾಕಿ, ಸೈರನ್ ಮೊಳಗಿಸಿ ಪಟಾಕಿ ಸಿಡಿಸಿದ ಪರಿಣಾಮ ಆನೆಗಳು ತೋಟದಿಂದ ಬೇರೆಕಡೆ ಹೋಗಲು ಸಾಧ್ಯವಾಗಿಲ್ಲ. ಗಾಬರಿಯಿಂದ ಕಾಫಿಗಿಡಗಳನ್ನು ತುಳಿದು, ಸೊಂಡಿಲಿನಿಂದ ಕಿತ್ತು ಹಾನಿ ಉಂಟುಮಾಡಿವೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯೇ ನೇರ ಹೊಣೆ ಎಂದು ದೂರಿದರು. ಇಲಾಖೆ ಸಿಬ್ಬಂದಿ ಅವೈಜ್ಞಾನಿಕವಾಗಿ ಆನೆಗಳನ್ನು…

Read More

ಚಿಕ್ಕಮಗಳೂರು:  ನವೆಂಬರ್ ೧೯ ರಿಂದ ಡಿಸೆಂಬರ್ ೦೫ ರವರೆಗೆ ಜಿಲ್ಲೆಯಾದ್ಯಂತ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನ ಹಮ್ಮಿಕೊಂಡಿದ್ದು ಎಲ್ಲಾ ಸರ್ಕಾರಿ ಕಚೇರಿಗಳ ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರುವಂತೆ ಸುಸ್ಥಿತಿಯಲ್ಲಿರಿಸಿಕೊಂಡು ಶುಚಿತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯ ಬಹು ಮುಖ್ಯ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮ ರೀತಿಯಲ್ಲಿರಿಸಿಕೊಳ್ಳಬೇಕು. ಬಯಲು ಬಹಿರ್ದಸೆಯಿಂದ ಪರಿಸರ ಮಲಿನಗೊಳ್ಳುವುದಲ್ಲದೆ. ನಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗ್ರಾಮೀಣ ಸಮುದಾಯದ ಜನರಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಬಗ್ಗೆ ಅರಿವು ಮೂಡಿಸಿ ಪ್ರತಿಯೊಬ್ಬರು ಶೌಚಾಲಯ ಬಳಸುವಂತೆ ಪ್ರೇರೆಪಿಸಲು ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ…

Read More