ALSO FEATURED IN

Library is a temple of knowledge without distinction of caste, caste, creed: ಗ್ರಂಥಾಲಯ ಜಾತಿ, ಮತ, ಬೇಧವಿಲ್ಲದ ಜ್ಞಾನ ದೇವಾಲಯ

Spread the love

ಚಿಕ್ಕಮಗಳೂರು:  ನಾಡಿನ ಇತಿಹಾಸ ಹಾಗೂ ದಾರ್ಶನಿಕರ ಜೀವನಚರಿತ್ರೆ ಕುರಿತ ಜ್ಞಾನಭಂಡಾರಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯಗಳಲ್ಲಿ ನಿರಂತರವಾಗಿ ಅಭ್ಯಾಸಿದರೆ ಶಾರದಾಂಬೆ ದೇವಿಯ ಅನುಗ್ರಹವಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗ ದೊಂದಿಗೆ ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-೨೦೨೨ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದಿನಲ್ಲಿ ಆಸಕ್ತಿಯಿರುವವರಿಗೆ ನಿಜವಾದ ಆಸ್ತಿ ಎಂದರೆ ಜ್ಞಾನಭಂಡಾರ ಹಾಗೂ ಶಿಕ್ಷಣ. ಅವುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಓದಿನ ಆಸಕ್ತಿ ಹೊಂದಿರುವವರು ತನ್ನೊಳಗೆಯೇ ಗ್ರಂಥಾಲಯವನ್ನು ಅಡಗಿಸಿಕೊಂಡಿರುತ್ತಾನೆ ಎಂದು ಹೇಳಿದರು.

ನಾಡಿನ ಹೆಸರಾಂತ ಕವಿಗಳು, ಸಾಹಿತಿಗಳು ವಿಶಿಷ್ಟವಾಗಿ ಪುಸ್ತಕಗಳನ್ನು ರಚನೆ ಮಾಡಿದ್ದಾರೆ. ಅವು ಗಳ ಅಧ್ಯಯನವನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳಬೇಕು ಎಂದ ಅವರು ಓದಿನ ಹವ್ಯಾಸ ಬೆಳೆಸಿ ಕೊಂಡಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನೂರಾರು ಜಾತಿಗಳನ್ನು ಹೊಂದಿರುವ ಭಾರತ ಭಾವೈಕ್ಯತಾ ದೇಶ. ಇಲ್ಲಿ ಸರ್ವರಿಗೂ ಸಮಾನವಾದ ಹಕ್ಕಿದೆ. ಸಂವಿಧಾನ ಆಶಯದೊಂದಿಗೆ ಇಂದು ದೇಶ ನಡೆಯುತ್ತಿದೆ. ಅದೇ ರೀತಿಯಲ್ಲೂ ಗ್ರಂಥಾಲಯವು ಸಹ ಜಾತಿ, ಬೇಧ, ಮತಯಿಲ್ಲದೇ ಆಗಮಿಸುವ ದೊಡ್ಡ ಜ್ಞಾನ ದೇವಾಲಯ ಎಂದರು.

ಪ್ರಸ್ತುತ ದಿನಗಳಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರು ಹಳ್ಳಿಯಿಂದಲೇ ಅಭ್ಯಾಸಿಸಿ ಬಂದವರಾಗಿದ್ದಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದಿನ ವಿಷಯದಲ್ಲಿ ಎಂದಿಗೂ ಪ್ರಯತ್ನ ವನ್ನು ಬಿಡದೇ ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿದರೆ ಮುಂದೊಂದು ದಿನ ಸಾರ್ವಜನಿಕರಿಗೆ ಸ್ಪಂದಿಸುವ ಹುದ್ದೆಯನ್ನು ಅಲಂಕರಿಸಬಹುದು ಎಂದು ತಿಳಿಸಿದರು.

ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ವಿದ್ಯಾಭ್ಯಾಸದ ಜೊತೆಗೆ ಗ್ರಂಥಾಲಯಗಳಲ್ಲಿ ಮಕ್ಕಳು ಆಗಮಿಸಿ ನಾಡು ಹಾಗೂ ದೇಶದ ಇತಿಹಾಸವನ್ನು ಹೊಂದಿರುವ ಪುಸ್ತಕ ಗಳನ್ನು ಅಭ್ಯಾಸಿಸಬೇಕು. ಓದಿನಲ್ಲಿ ಎಂದಿಗೂ ಪರಿಪೂರ್ಣರಾದವರಿಲ್ಲ. ಆ ನಿಟ್ಟಿನಲ್ಲಿ ಪ್ರತಿಯೊಂದು ಪುಸ್ತಕದಲ್ಲಿ ಅದರದೇ ಆದ ವಿಶಿಷ್ಟತೆ ಹೊಂದಿರುತ್ತದೆ ಎಂದು ಹೇಳಿದರು.

ನಗರ ಕೇಂದ್ರ ಗ್ರಂಥಾಲಯ ಕಟ್ಟಡವು ಕೆಲವು ಕಾರಣಗಳಿಂದ ಅರ್ಧದಲ್ಲೇ ಸ್ಥಗಿತಗೊಳಿಲಾಗಿದೆ. ಮುಂದಿನ ನಗರಸಭಾ ಸಭೆಯಲ್ಲಿ ಚರ್ಚಿಸಿ ಗ್ರಂಥಾಲಯ ಕಟ್ಟಡ ಪೂರ್ಣಗೊಳಿಸಲು ಅನುದಾನವನ್ನು ನಗರಸಭೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರವೀಶ್ ಕ್ಯಾತನಬೀಡು ಮಾತನಾಡಿ ನಿತ್ಯದ ಜೀವನದ ಬದುಕು ಕಾಡಿನಂತಿರುತ್ತದೆ. ಅದರಲ್ಲಿ ದುಃಖ, ನೋವು, ಸಂಕಟ ಎಲ್ಲವು ಅಡಗಿರುತ್ತದೆ. ಅವುಗಳನ್ನು ವಿಮುಕ್ತಿಗೊಳಿಸಲು ಮುಖ್ಯ ಸಾಧನವೇ ಶಿಕ್ಷಣ. ಹೆಚ್ಚು ಹೆಚ್ಚು ಓದಿನ ಹವ್ಯಾಸ ಬೆಳೆಸಿಕೊಂಡಲ್ಲಿ ಎಲ್ಲವನ್ನು ನಿಭಾಯಿಸುವ ಶಕ್ತಿ ಬರಲಿದೆ ಎಂದರು.

ಡಾ|| ಬಿ.ಆರ್.ಅಂಬೇಡ್ಕರ್ ಅವರು ಸಹ ಅಂದಿನ ಸಮಯದಲ್ಲಿ ರೇಷನ್ ಅಂಗಡಿ ಮುಂದೆ ನಿಲ್ಲುವ ಬದಲು ಗ್ರಂಥಾಲಯಗಳಲ್ಲಿ ನಿಲ್ಲಬೇಕು ಎಂದು ಹೇಳಿದ ಮಹಾನ್ ವ್ಯಕ್ತಿ. ಇಡೀ ದೇಶದಲ್ಲಿ ಅತ್ಯಧಿಕ ಪುಸ್ತಕಗಳನ್ನು ಅಭ್ಯಾಸಿರುವುದು ಅಂಬೇಡ್ಕರ್ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್, ನಗರ ಗ್ರಂಥಾಲಯ ಸಹವರ್ತಿ ಸಿದ್ದಪ್ಪ, ಸಹಾಯಕ ಹೆಚ್.ಬಿ. ಮಹೇಶಪ್ಪ, ಬಸವನಹಳ್ಳಿ ಗ್ರಂಥಾಲಯಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ರಾಘವೇಂದ್ರ, ರೂಪ, ವೀಣಾ, ಶಂಕರೇಗೌಡ, ಲೋಕೇಶ್, ಅನುಸೂಯ ಮತ್ತಿತರರು ಉಪಸ್ಥಿತರಿದ್ದರು.

Library is a temple of knowledge without distinction of caste caste creed

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version