ALSO FEATURED IN

Adequate arrangement of pension facility for retired employees: ನಿವೃತ್ತಿ ನೌಕರರಿಗೆ ಪಿಂಚಣಿ ಸೌಲಭ್ಯದ ಸೂಕ್ತ ವ್ಯವಸ್ಥೆ – ಡಿ.ಎಸ್.ಸುರೇಶ್

Spread the love

ಚಿಕ್ಕಮಗಳೂರುಎಕ್ಸಪ್ರೆಸ್: ನಿವೃತ್ತಿ ನಂತರ ಬ್ಯಾಂಕ್ ನೌಕರರಿಗೆ ಆರೋಗ್ಯ ಹಾಗೂ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ನೌಕರರಿಗೆ ಪಿಂಚಣಿ ಸೌಲಭ್ಯ ದೊರೆಯುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಭರವಸೆ ನೀಡಿದರು.

ನಗರದ ಪಿ.ಸಿ.ಆರ್.ಡಿ. ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿವೃತ್ತ ನೌಕರರ ನೂತನ ಕ್ಷೇಮಾಭಿವೃದ್ದಿ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ನಿವೃತ್ತಿ ನೌಕರರ ಸಂಘವು ತಡವಾಗಿ ಆರಂಭವಾಗಿದ್ದು ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಸಂಘವು ಪ್ರಾರಂಭಗೊಂಡಿದೆ ಎಂದ ಅವರು ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಬ್ಯಾಂಕಿಗೆ ನಷ್ಟವಾಗದೇ ರೀತಿಯಲ್ಲಿ ಪಿಂಚಣಿಯನ್ನು ನೌಕರರಿಗೆ ಕಲ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಯತ್ನಿ ಸಲಾಗುವುದು ಎಂದು ತಿಳಿಸಿದರು.

ಸಂಘ ಸ್ಥಾಪನೆಯಿಂದ ನಿವೃತ್ತಿ ನೌಕರರಿಗೆ ಒಟ್ಟಾಗುವ ವೇದಿಕೆಯೊಂದು ದೊರೆತಂತಾಗಿದೆ. ಇದರಿಂದ ತಮ್ಮಗಳ ಸಮಸ್ಯೆಗಳ ಬಗ್ಗೆ ಸಂಘದಿಂದ ಮನವರಿಕೆ ಮಾಡಬಹುದು. ಹಾಗೂ ಬ್ಯಾಂಕ್‌ಗೆ ಸಂಬಂಧಪಟ್ಟ ತಮ್ಮ ಅನುಭವ ಹಾಗೂ ಸಲಹೆ, ಸೂಚನೆಯ ಕಾಯಕವನ್ನು ಮುಂದಿನ ದಿನಗಳಲ್ಲೂ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

ಹಾಸನ ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಕಾಳೇಗೌಡ ಮಾತನಾಡಿ ರಾಜ್ಯದಲ್ಲಿ ಈಗಾಗಲೇ ಏಳು ಜಿಲ್ಲೆಗಳಲ್ಲಿ ನಿವೃತ್ತಿ ನೌಕರರಿಗೆ ಪಿಂಚಣಿ ದೊರೆಯುವಂತೆ ಆಯಾ ಜಿಲ್ಲಾ ಬ್ಯಾಂಕ್‌ಗಳು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿಯಂತೆ ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪಿತವಾಗಿರುವ ನಿವೃತ್ತಿ ನೌಕರರ ಸಂಘದ ವರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಎಸ್.ಸೂರ್ಯನಾರಾಯಣ ರಾವ್ ಮಾತನಾಡಿ ಕಾನೂನು ರೀತ್ಯಾ ಪ್ರಕಾರ ಬ್ಯಾಂಕ್ ತೆರಿಗೆಯಿಂದ ಬರುವ ಶೇ.೩೩.೩೩ ರಷ್ಟು ಮೊತ್ತವನ್ನು ಎಫ್.ಡಿ. ಮಾಡಿಕೊಂಡು ಅದರಿಂದ ಬರುವಂತಹ ಬಡ್ಡಿಯಿಂದ ನಿವೃತ್ತಿ ನೌಕರರಿಗೆ ಪಿಂಚಣಿ ಕಲ್ಪಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಸಂಘದ ನೂತನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಎಸ್.ಸೂರ್ಯನಾರಾಯಣ ರಾವ್, ಉಪಾಧ್ಯಕ್ಷ ವಿ.ಮನೋಹರ್, ಕಾರ್ಯದರ್ಶಿ ಡಿ.ಪಿ.ಲೋಕೇಗೌಡ, ಖಜಾಂಚಿ ಎಂ.ವಿ.ಮಾಧು ರಾವ್, ನಿರ್ದೇಶಕರುಗಳಾದ ಎಲ್.ವಿ.ವೆಂಕಟಸುಬ್ಬಯ್ಯ ಎ.ಎನ್.ಧರ್ಮರಾಜು, ಎಸ್.ನಾಗರಾಜು, ಟಿ.ಬಿ.ಮಹಾದೇವಪ್ಪ, ಸಿ.ಎಂ.ಮಂಜೇಗೌಡ, ರಫೀ ಅಹಮ್ಮದ್, ಎಂ.ಎಂ.ಕೃಷ್ಣಯ್ಯ, ಎಸ್.ಹೆಚ್.ವೆಂಕ ಟೇಶ್, ಕೆ.ಎಂ.ದೇವೇಗೌಡ ನೇಮಕವಾಗಿದ್ದಾರೆ.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ನಿರ್ದೇಶಕರುಗಳಾದ ಕೆ.ಆರ್. ಆನಂದಪ್ಪ, ಹೆಚ್.ಬಿ.ಶಿವಣ್ಣ, ಎಸ್.ಜೆ.ರಾಮಪ್ಪ, ಎಸ್.ಎಸ್.ರಾಮಸ್ವಾಮಿ, ಡಿ.ಎಸ್.ಶಂಕರಪ್ಪ, ಹೆಚ್.ವಿ. ಸಂದೀಪ್‌ಕುಮಾರ್, ಎಂ.ಎಸ್.ನಿರಂಜನ್, ಹೆಚ್.ಬಿ.ಸತೀಶ್, ಎಂ.ಪರಮೇಶ್ವರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Adequate arrangement of pension facility for retired employees

Facebook
X
WhatsApp
Telegram
Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

[t4b-ticker]
Exit mobile version