ALSO FEATURED IN

ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ

Spread the love

ಚಿಕ್ಕಮಗಳೂರುಎಕ್ಸ್‌ಪ್ರೆಸ್– ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಗೌರವ ತರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೯ ವರ್ಷಗಳಿಂದ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದ್ದಾರೆ. ಅವರು ಎಂದಿಗೂ ಸಚಿವರು, ಅಧಿಕಾರಿಗಳ ಮುಂದೆ ಚುನಾವಣೆ ವಿಚಾರಗಳನ್ನು ಮಾತನಾಡುವುದಿಲ್ಲ. ಮುಂದಿನ ೨೫ ವರ್ಷದಲ್ಲಿ ಭಾರತ ದೇಶ ಆರ್ಥಿಕವಾಗಿ ಜಗತ್ತಿನ ಮುಂಚೂಣಿ ದೇಶಗಳ ಸಾಲಿಗೆ ತರೇಕು ಎಂದು ಶ್ರಮಿಸುತ್ತಿದ್ದಾರೆ. ದೇಶದ ಕೃಷಿ ಕ್ಷೇತ್ರವನ್ನು ಸಬಲೀಕರಣಗೊಳಿಸು ನಿಟ್ಟಿನಲ್ಲಿ, ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಮುಂದಿನ ಆರೇಳು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದೇ ವೇಳೆ ಕೇವಲ ೯ ವರ್ಷದಲ್ಲಿ ೭೪ ನೂತನ ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನಿರ್ಮಿಸಿದೆ. ಆದರೆ ಅದಕ್ಕೂ ಮುನ್ನ ೬೯ ವರ್ಷದಲ್ಲಿ ನಿರ್ಮಾಣವಾಗಿದ್ದು ಕೇವಲ ೭೪ ವಿಮಾನ ನಿಲ್ದಾಣಗಳಷ್ಟೇ ಎಂದರು.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರ್ಕಾರ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಂಕಲ್ಪ ಹಾಗೂ ಯೋಜನೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡುತ್ತೇವೆ. ಚುನವಣೆ ಸಂದರ್ಭದಲ್ಲಿ ಮಾತ್ರ ರಾಜಕಾಣ ಉಳಿದಂತೆ ಆಬಿವೃದ್ಧಿ ವಿಚಾರದಲ್ಲಿ ಸಹಕಾರ ಇರಲಿ ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗಿದೆ. ಒತ್ತುವರಿ ಸಮಸ್ಯೆಯನ್ನು ಬಹುತೇಕ ಬಗೆಹರಿಸಲಾಗಿದೆ. ಬೇಲೂರು-ಚಿಕ್ಕಮಗಳೂರು ರೈಲ್ವೇ ಯೋಜನೆ ಕಾಮಗಾರಿ ಆರಂಭಿಸುವ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.

ಕಾಂಗ್ರೆಸ್ ದುರಹಂಕಾರ: ಶೋಭಾ ಕರಂದ್ಲಾಜೆ ಅವರಿಗೂ ಬಸ್ ಪ್ರಯಾಣ ಉಚಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ದುರಹಂಕಾರವನ್ನು ತೋರ್ಪಡಿಸಿದೆ. ಇದಕ್ಕೆ ಜನರೇ ಉತ್ತರ ನೀಡಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ಪಠ್ಯಪುಸ್ತಕ ಜಾತಿ, ಧರ್ಮ ಅಥವಾ ಪಕ್ಷದ ಅಧಾರದಲ್ಲಿ ರಚನೆ ಆಗುವುದಲ್ಲ. ಅದು ಸಂವಿಧಾನಾತ್ಮಕವಾಗಿ ಒಪ್ಪಿದ ವಿಚಾರವನ್ನು ಕಲಿಸುವಂತಾಗಬೇಕು. ಕಾಂಗ್ರೆಸ್ ಪರ, ಬಿಜೆಪಿ ಪರ ಎನ್ನುವುದಕ್ಕಿಂತ ನಮ್ಮ ಮಕ್ಕಳು ಏನನ್ನು ಕಲಿಯಬೇಕು ಎನ್ನುವುದು ಮುಖ್ಯ ಎಂದು ಹೇಳಿದರು.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ೧,೪೨,೩೫೬ ಫಲಾನುಭವಿಗಳಿಗೆ ೧೩ ಕಂತುಗಳಲ್ಲಿ ೨೬೭.೦೭ ಕೋಟಿ ರೂ. ನೀಡಲಾಗಿದೆ ತಿಳಿಸಿದರು.

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ೧೯೫ ಕೋಟಿ ರೂ., ಅಮೃತ್ ಕುಡಿಯುವ ನೀರು ಯೋಜನೆಗೆ ೫೨.೨೭ ಕೋಟಿ ರೂ., ಉದ್ಯಾನಗಳ ಅಭಿವೃದ್ಧಿ ಇನ್ನಿತರೆ ಅಭಿವೃದ್ಧಿಗೆ ೧೩.೭೫ ಕೋಟಿ ರೂ., ೧೫ ನೇ ಹಣಕಾಸು ಯೋಜನೆಯಡಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ೭.೮೫ ಕೋಟಿ ರೂ. ಅನುದಾನ ಬಂದಿದೆ ಎಂದರು.

ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ೨೮ ಕೋಟಿ ರೂ., ಜಲ್ ಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ೨೨೯೮ ಕೋಟಿ ರೂ., ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ ೨೦೦ ಕೋಟಿ ರೂ., ಚಿಕ್ಕಮಗಳೂರು ಪಶು ಆಸ್ಪತ್ರೆಗೆ ೧.೭೯ ಕೋಟಿ ರೂ., ಪಿಎಂಜಿಎಸ್‌ವೈ ೨೦೦ ಕೋಟಿ ರೂ., ಖೇಲೋ ಇಂಡಿಯಾ ಯೋಜನೆಯಡಿ ೧೧.೫೦ ಕೋಟಿ ರೂ., ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೯.೯೭ ಕೋಟಿ ರೂ., ಜನ್‌ಧನ್ ಯೋಜನೆಯಡಿ ೧೫.೬೯ ಕೋಟಿ ರೂ., ರಾಷ್ಟ್ರೀಯ ಉಚ್ಛಶಿಕ್ಷಣ ಯೋಜನೆಯತಡಿ ೨ ಕೋಟಿ ರಊ., ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆಯಡಿ ೧೮೫ ಕೋಟಿ ರೂ. ಹಾಗೂ ಪ್ರಧಾನಮಂತ್ರಿ ಉಸ್ಯೋಗ ಸೃಜನೆ ಯೋಜನೆಯಡಿ ೧೦.೧೪ ಕೋಟಿ ರೂ. ಅನುದಾನ ಬಂದಿದೆ ಎಂದು ತಿಳಿಸಿದರು.

ಪಿಎಂಕೆಎಸ್‌ವೈ ಯೋಜನೆಯಡಿ ೬೧ ಕೋಟಿ ರೂ., ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ೨೪.೪೭ ಕೋಟಿ ರೂ., ಕೃಷಿ ಯಾಂತ್ರೀಕರಣ ಯೋಜನೆಯಡಿ ೬.೯೦ ಕೋಟಿ ರೂ., ತಂಗು ಅಭಿವೃದ್ಧಿ ಮಂಡಳಿಗೆ ೨೫.೩೦ ಕೋಟಿ ರೂ., ತಾಳೆ ಬೆಳೆ ವ್ಯವಸಾಯಕ್ಕೆ ೨೮ ಲಕ್ಷ ರೂ., ಫಸಲ್ ಭೀಮಾ ಯೋಜನೆಯಡಿ ೭ ಲಕ್ಷ ರೂ. ನೆರವನ್ನು ನೀಡಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ೫೫.೮೭ ಕೋಟಿ ರೂ. ಅನುದಾನ ಬಂದಿದೆ ಎಂದು ತಿಳಿಸಿದರು.ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ೧೧.೫೨ ಕೋಟಿ ರೂ., ಕೋವಿಡ್‌ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ೨.೦೩ ಕೋಟಿ ರೂ. ಪರಿಹಾರವನ್ನು ಒದಗಿಸಲಾಗಿದೆ ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ೩.೫೧ ಕೋಟಿ ರೂ., ಅಮೃತ್ ಸರೋವರ ಯೋಜನೆಯಡಿ ೧೦೦ ಸಣ್ಣ ಕೆರೆಗಳ ಅಭಿವೃದ್ಧಿ, ನೀರಾವರಿ ಯೋಜನೆಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ೮ ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗೆ ೪೦೦ ಕೋಟಿ ರೂ., ಅತಿವೃಷ್ಠಿ ಪರಿಹಾರಕ್ಕೆ ೨೦ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮಾಜಿ ಶಾಸಕರುಗಳಾದ ಡಿ.ಎನ್.ಜೀವರಾಜ್, ಡಿ.ಎಸ್.ಸುರೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ಟಿ.ರಾಜಶೇಖರ್, ದೇವರಾಜ ಶೆಟ್ಟಿ ಇತರರು ಇದ್ದರು.

The onus is on everyone to make Narendra Modi the Prime Minister again

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version