ALSO FEATURED IN

ಜೆವಿಎಸ್ ಶಾಲೆಯಲ್ಲಿ ಸ್ಮಾರ್ಟ್‌ಬೋರ್ಡ್ ಅಳವಡಿಕೆ ಉತ್ತಮ ಶಿಕ್ಷಣಕ್ಕೆ ಸಹಕಾರಿ

Spread the love

ಚಿಕ್ಕಮಗಳೂರು: ನಗರದ ವಿಜಯಪುರದಲ್ಲಿರುವ ಜೆವಿಎಸ್ ಶಾಲೆಗೆ ೮ ಸ್ಮಾರ್ಟ್‌ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು ಇದರ ಸದುಪಯೋಗವನ್ನು ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಲು ಪೂರಕವಾಗಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಅವರು ಇಂದು ಜೆವಿಎಸ್ ಶಾಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್‌ಬೋರ್ಡ್‌ಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಸುಮಾರು ೧೩.೫ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿರುವ ಈ ಸ್ಮಾರ್ಟ್‌ಬೋರ್ಡ್‌ಗಳ ಸದ್ಭಳಕೆಯನ್ನು ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೊಡ್ಡ ದೊಡ್ಡ ಶಾಲೆಗಳಿಗೆ ಸ್ಪರ್ಧೆ ನೀಡುವಂತಾಗಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ಈ ಒಂದು ಪ್ರಯೋಗ ನಮ್ಮ ಶಾಲೆಗೆ ಲಭ್ಯವಾಗಿದ್ದು, ಇದರಿಂದ ಶಾಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಜಿಲ್ಲೆಯಲ್ಲಿಯೇ ನಂ.೧ ಶಾಲೆಯಾಗಬೇಕೆಂಬ ದೃಷ್ಠಿಯಿಂದ ಬೋರ್ಡ್‌ನವರು ಮತ್ತು ಜೆವಿಎಸ್ ಶಾಲೆಯ ನಿರ್ದೇಶಕರೊಂದಿಗೆ ಈ ಕಾರ್ಯ ಅನುಷ್ಠಾನಕ್ಕೆ ಬಂದಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ಎಲ್ಲಾ ಶಿಕ್ಷಕರೂ, ವಿದ್ಯಾರ್ಥಿಗಳು ಸ್ಮಾರ್ಟ್‌ಬೋರ್ಡ್‌ನ ಸದುಪಯೋಗವನ್ನು ಪಡೆದುಕೊಂಡು ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಪಡೆದು ಸುಖ ಜೀವನ ನಡೆಸುವಂತೆ ಕರೆ ನೀಡಿದರು.

ಸಹ ಕಾರ್ಯದರ್ಶಿ ಕೆ.ಕೆ ಮನುಕುಮಾರ್ ಮಾತನಾಡಿ ಜೆವಿಎಸ್ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಿರುವುದು ಶ್ಲಾಘನೀಯ ಎಂದ ಅವರು ಹಿಂದೆ ಶಾಲೆ ವತಿಯಿಂದ ಪ್ರಕೃತಿ ಉಳಿಸಲು ಸುಮಾರು ೫೦ ಸಾವಿರ ಸೀಡ್‌ಬಾಲ್‌ಗಳನ್ನು ಅರಣ್ಯ ಇಲಾಖೆ ಮೂಲಕ ಪರಿಸರಕ್ಕೆ ಬಿತ್ತನೆ ಮಾಡಿರುವುದಾಗಿ ಸ್ಮರಿಸಿದರು.

ಇದರಿಂದ ಕನಿಷ್ಠ ೩೫ ಸಾವಿರ ಗಿಡಗಳು ಬೆಳದರೆ ನಮ್ಮ ಹಾಗೂ ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗುತ್ತದೆ. ಈಗ ಸ್ಮಾರ್ಟ್‌ಬೋರ್ಡ್ ಅಳವಡಿಕೆಯಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಮಾಹಿತಿಗಳು ಶೀಘ್ರವೇ ಲಭ್ಯವಾಗಬೇಕು ಎಂಬ ದೃಷ್ಠಿಯಿಂದ ಈ ಉಪಕರಣವನ್ನು ಅಳವಡಿಸಿದ್ದೇವೆ. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಸ್ಪರ್ಧೆ ನೀಡಲು ಸಹಕಾರಿಯಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ಜೆವಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಸೌಲಭ್ಯಗಳು ಸಿಗಬೇಕು ಎಂಬ ದೃಷ್ಠಿಯಿಂದ ಸಂಸ್ಥೆ ನೆರವಾಗಿದೆ. ಈ ಎಲ್ಲಾ ಸೌಲಭ್ಯಗಳ ಸದುಪಯೋಗಪಡಿಸಿಕೊಂಡು ಎಸ್‌ಎಸ್‌ಎಲ್‌ಸಿ ಯಲ್ಲಿ ಒಳ್ಳೆಯ ಫಲಿತಾಂಶ ಬರುವಂತೆ ಶಿಕ್ಷಕ ವೃಂದ ಶ್ರಮಿಸಬೇಕೆಂದು ಹೇಳಿದರು.

ಜಿಲ್ಲಾ ಒಕ್ಕಲಿಗg ಸಂಘದ ಕಾರ್ಯದರ್ಶಿ ಎಂ.ಸಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಜೆವಿಎಸ್ ಶಾಲೆಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸ್ಮಾರ್ಟ್‌ಬೋರ್ಡ್‌ಗಳನ್ನು ನೀಡಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಶಾಲೆಯಲ್ಲಿ ನುರಿತ ಅನುಭವಿ ಶಿಕ್ಷಕರಿದ್ದು ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಜವಾಬ್ದಾರಿ ಇದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ನಿರ್ದೇಶಕರಾದ ದಿನೇಶ್, ಶಾಲಾ ಮುಖ್ಯ ಶಿಕ್ಷಕರಾದ ವಿಜಿತ್ ಉಪಸ್ಥಿತರಿದ್ದರು.

Inauguration of state-of-the-art Smartboards at JVS School

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version