ALSO FEATURED IN

ಸಿ.ಟಿ. ರವಿ ಬೇನಾಮಿ ಆಸ್ತಿಯ ಬಗ್ಗೆ ನ್ಯಾಯಾಧಿಶರಿಂದ ತನಿಖೆ ನಡೆಸಬೇಕು

Spread the love

ಚಿಕ್ಕಮಗಳೂರು: ಸಿ.ಟಿ. ರವಿ ಬೇನಾಮಿ ಆಸ್ತಿಯ ಬಗ್ಗೆ ನ್ಯಾಯಾಽಶರಿಂದ ಅಥವಾ ಸಿಐಡಿ ಮೂಲಕ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಮಾತ್ರ ಎಲ್ಲಾ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬಹುದು, ಆದರೆ, ಅವರ ಬಗ್ಗೆ ನಿಜ ಹೇಳಿದ್ರೆ ಅವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

ಎಲ್ಲೆಲ್ಲಿ ಬೇನಾಮಿ ಹೆಸರಲ್ಲಿ ಸಿ.ಟಿ. ರವಿ ಆಸ್ತಿ ಮಾಡಿದ್ದಾರೆಂದು ೨೦೨೦ ರಲ್ಲಿ ಪ್ರಶ್ನಿಸಿದ್ದೆ. ನೀವು ಸತ್ಯಹರಿಶ್ಚಂದ್ರನಂತೆ ಮಾತನಾಡ್ತೀರಾ, ನಿಮ್ಮ ಹಿನ್ನೆಲೆ ಏನೆಂದು ಪ್ರಶ್ನಿಸಿದ್ದೆ, ನೀವು ಬ್ಯುಸಿನಿಸ್ ಮ್ಯಾನ್, ಎಜುಕೇಶನಲಿಸ್ಟ್, ಇಂಡಸ್ಟ್ರಿಯಲಿಸ್ಟ್, ರಿಯಲ್ ಎಸ್ಟೇಟ್ ಏನೆಂದು ಜನರಿಗೆ ತಿಳಿಸಿ ಎಂದಿದ್ದೆ, ಜನ ಹೇಳ್ತಿದ್ದಾರೆ, ನೀವು ಲೂಟಿ ರವಿ ಎಂದು ಪ್ರಶ್ನೆ ಮಾಡಿದ್ದೆ ಎಂದು ಹೇಳಿದ್ದರು.

ಈ ಕಾರಣಕ್ಕಾಗಿ ಸಿ.ಟಿ. ರವಿ ನನ್ನ ಮೇಲೆ ಮಾನನಷ್ಟ ಮೊಕ್ಕದ್ದಮೆ ಕೇಸ್ ಹಾಕಿದ್ರು, ಇಂದು ಬೇಲ್ ಆಗಿದೆ. ಇತರೆ ಬಿಜೆಪಿ ಮುಖಂಡರು ಕೂಡ ನನ್ನ ಮೇಲೆ ಬೆಂಗಳೂರು, ಮೈಸೂರಿನಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ, ಮೋದಿ, ಸಿ.ಟಿ.ರವಿ ವಿರುದ್ಧ ಮಾತನಾಡಿದ್ರೆ ಕೇಸ್ ಹಾಕಿ, ಇ.ಡಿ., ಸಿಬಿಐ, ಪೊಲೀಸ್ ಮೂಲಕ ಹೆದರಿಸಲು ಪ್ರಯತ್ನಿಸುತ್ತಾರೆ. ಬಿಜೆಪಿಯವರ ಈ ಬೆದರಿಕೆಗೆ ನಾವು ಬೆದರುವ ವಂಶಸ್ಥರಲ್ಲ, ಕಾಂಗ್ರೆಸ್ ವಂಶಸ್ಥರು ಎಂದರು.
ನಾನು ಮಾಡಿರುವ ಆರೋಪದ ಬಗ್ಗೆ ನ್ಯಾಯಾಽಶರ ಮೂಲಕ, ಸಿಐಡಿ ಮೂಲಕ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

CT Ravi’s benami property should be investigated by a judge

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version