ಇಂದು ರಾಷ್ಟ್ರೀಯ ಟಿ.ಎಸ್.ಡಿ. ರ್‍ಯಾಲಿಯ ಚಾಂಪಿಯನ್‌ಶಿಪ್ ರ್‍ಯಾಲಿ
ಚಿಕ್ಕಮಗಳೂರು: ದಿ ಮೋಟಾರ್ ಸ್ಪೋಟ್ಸ್‌ಕ್ಲಬ್ ವತಿಯಿಂದ ರಾಷ್ಟ್ರೀಯ ಟಿ.ಎಸ್.ಡಿ. ರ್‍ಯಾಲಿಯ ಚಾಂಪಿಯನ್‌ಶಿಪ್ ೪ನೇ ಸುತ್ತಿನ ದಕ್ಷಿಣ ವಲಯದ ರ್‍ಯಾಲಿ ಆಫ್ ಚಿಕ್ಕಮಗಳೂರು ಹೆಸರಿನಲ್ಲಿ ಡಿಸೆಂಬರ್ ೨ ಮತ್ತು ೩ರಂದು ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಜಯಂತ್‌ಪೈ, ಕಾರ್ಯದರ್ಶಿ ಅಭಿಜಿತ್ ಪೈ ತಿಳಿಸಿದರು.
ಜಂಟಿ ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ, ಈ ರ್‍ಯಾಲಿಯು ವಂಸಿಮೆರ್‍ಲ ಸ್ಪೋರ್ಟ್ಸ್ ಫೌಂಡೇಷನ್, ಬೈನರಿ ಎಕ್ಸೋಟಿಕಾ ಮತ್ತು ಆರೆಂಜ್ ಅಡ್ವೆಂಚರ್ ಸಹ ಪ್ರಾಯೋಜಿಕತ್ವದಲ್ಲಿ ನಡೆಯುತ್ತಿದ್ದು, ಬೆಂಗಳೂರಿನ ಪ್ರೊಸ್ಪೋರ್ಟ್ಸ್ ಪ್ರಾಯೋಜನೆ ಮಾಡಿದೆ. ರ್‍ಯಾಲಿಯು ಚಿಕ್ಕಮಗಳೂರು ನಗರದ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯಲಿದೆ ಎಂದು ಹೇಳಿದರು.
ಈ ರ್‍ಯಾಲಿ ಮುಖ್ಯವಾಗಿ ನ್ಯಾವಿಗೇಷನಲ್‌ಸ್ಕಿಲ್, ಸಯಮ ಮತ್ತು ಲೆಕ್ಕಚಾರಗಳ ಬಗ್ಗೆ ಆಗಿರುತ್ತದೆ. ಈವೆಂಟ್‌ನಲ್ಲಿ ಬಹಿರಂಗಪಡಿಸದ ಚೆಕ್‌ಪಾಯಿಂಟ್‌ಗಳು ಇರುವುದರಿಂದ ಮಾರ್ಗವನ್ನು ಬಹಿರಂಗಪಡಿಸಲಾಗದು.ರ್‍ಯಾಲಿ ಒಟ್ಟು ೧೨೫ ಕಿ.ಮೀ. ಕ್ರಮಿಸಬೇಕಾಗಿದೆ. ಡಿ. ೨ ರಂದು ಬೈನರಿ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಸಂಜೆ ೫ ಗಂಟೆಗೆ ಸಮಾರಂಭಕ್ಕೆ ಚಾಲನೆ ದೊರೆಯಲಿದೆ. ಡಿಸೆಂಬರ್ ೩ರಂದು ಬೆಳಿಗ್ಗೆ ೭ ಗಂಟೆಗೆ ಪ್ರಾರಂಭವಾಗುತ್ತದೆ ಮಧ್ಯಾಹ್ನ ಆರಂಭವಾದ ಸ್ಥಳದಲ್ಲೇ ಅಂತ್ಯಗೊಳ್ಳಲಿದೆ ಎಂದರು.
ವಿಜೇತರಿಗೆ ೧.೫ ಲಕ್ಷ ಕ್ಕೂ ಹೆಚ್ಚು ಮೌಲ್ಯದ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಚಿಕ್ಕಮಗಳೂರು ರ್‍ಯಾಲಿ ಐಎನ್‌ಟಿಎಸ್.ಡಿ.ಆರ್‌ಸಿ, ಐಎನ್‌ಟಿ.ಎಸ್‌ಆರ್‌ಸಿ-೨ ಮತ್ತು ಐಎನ್‌ಟಿಎಸ್‌ಡಿಆರ್‌ಸಿ ಮಹಿಳಾ ವಿಭಾಗಗಳನ್ನು ಹೊಂದಿರುತ್ತದೆ. ಈ ವಿಭಾಗಗಳು ಭಾರತೀಯ ರಾಷ್ಟ್ರೀಯ ಟಿ.ಎಸ್.ಡಿ. ರ್‍ಯಾಲಿ ಚಾಂಪಿಯನ್‌ಶಿಪ್ ಬರುತ್ತದೆ. ಈ ಜಿಲ್ಲೆಯ ಜನರಿಗೆ ಮೋಟಾರ್‌ಸ್ಪೋರ್ಟ್ಸ್‌ನ್ನು ಉತ್ತೇಜಿಸಲು ಸ್ಥಳೀಯ ಸ್ಪರ್ಧಿಗಳಿಗೋಸ್ಕರ ಓಪನ್ ವಿಭಾಗದಲ್ಲಿ ರ್‍ಯಾಲಿ ಆಫ್ ಚಿಕ್ಕಮಗಳೂರು, ನೋಈವಿಎಸ್, ಕಾರ್ಪೋರೆಟ್ ಮತ್ತು ಮಹಿಳಾ ವರ್ಗವನ್ನು ಮುಕ್ತ ವಿಭಾಗಗಳಲ್ಲಿ ಹೊಂದಿದ್ದೇವೆಂದರು.
ಐಎನ್‌ಟಿಎಸ್‌ಡಿಆರ್‌ಸಿ ಕ್ಲಾಸ್‌ನಲ್ಲಿ ಭಾರತದಾದ್ಯಂತ ಕೊಲ್ಕತ್ತಾ, ಈರೋಡ್‌ನಿಂದ ಜೋಗಿಂದರ್, ಜೈಸ್ವಾಲ್, ಪ್ರಕಾಶ್, ಕೊಲ್ಕತ್ತಾದಿಂದ ಅಜ್ಗರ್‌ಅಲಿ, ಮಹ್ಮದ್ ಮುಸ್ತಾಫ, ಕೊಲ್ಕತ್ತಾದಿಂದ ಸುಬೀರ್‌ರಾಯ್, ನೀರವ್‌ಮೇಹ್ತಾ, ಐಎನ್‌ಟಿಎಸ್‌ಡಿಆರ್ ಸಿ.-೨ ವಿಭಾಗದಲ್ಲಿ ಬೆಂಗಳೂರಿನಿಂದ ಅರ್ಪಣಾಪಾಟಕ್ ಮತ್ತು ಲಲಿತಾಗೌಡ, ಬೆಂಗಳೂರಿನಿಂದ ಡೇವಿಡ್‌ಶರೋನ್ ಮತ್ತು ಸತೀಶ್‌ಗೋಪಾಲಕೃಷ್ಣ, ಜೆಮ್‌ಶೆಡ್‌ಪುರದ ಮೋನಿಶ್‌ಚಕ್ರವರ್ತಿ ಮತ್ತು ಸೋಹಂಪಾಲ್, ಚಿಕ್ಕಮಗಳೂರಿನಿಂದ ಲೋಕಲೈಟ್‌ದಿಲ್ನಿಉತ್ ಮತ್ತು ಜೆ.ಎಂ.ರೋಹಿತ್, ಗಿತಿಕಾಪಂಥ್ ಮತ್ತು ನೀನಾಜೈನ್, ಮುಂಬೈನಿಂದ ಶೀನಾ ಸಬರ್‌ವಾಲ್, ಪುಣೆಯಿಂದ ತೃಪ್ತಿಗಹುಪ್ತಾ, ಕೋಲ್ಕತ್ತಾದ ನೀಸಾನ್‌ಚೌಧರಿ ಮತ್ತು ಚಂದ್ರಶಿಸ್‌ರಾಯ್ ಭಾಗವಹಿಸಲಿದ್ದಾರೆಂದು ಸ್ಪರ್ಧಿಗಳ ಮಾಹಿತಿ ನೀಡಿದರು.
ಐಎನ್.ಟಿ.ಎಸ್‌ಡಿಆರ್‌ಸಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಗಳು ದೇಶದ್ಯಾದ್ಯಂತ ಜಸ್ಮೀತ್‌ಕೌರ್ ಮತ್ತು ಜೋಯ್ತಿಅಯ್ಯಂಗಾರ್, ಗುರ್ಗಾಂಗ್,ಮುಂಬೈನಿಂದ ಸೊನಿಯಾಒರ್ಟಿಜ್ ಮತ್ತು ಶಿಲ್ಪಾವಿಲಾಸ್, ಬೆಂಗಳೂರು-ಮುಂಬೈನಿಂದ ಅಪರ್ಣಪಾಟಕ್ ಮತ್ತು ಲಲಿತಾಗೌಡ, ಬೆಂಗಳೂರಿನಿಂದ ಗಿತಿಕಾಫಥ್‌ಮ,ತ್ತು ನೀನಾಜೈನ್, ಮುಂಬೈನಿಂದ ಶೀನಾಸಬರ್ವಾಲ್ ಮತ್ತು ತೃಪ್ತಿಗುಪ್ತಾ, ಪುಣೆಯಿಂದ ಪಂಜಾಬ್ ಮತ್ತು ಉತ್ತರಾಖಂಡದ ಲೆಫ್ಟಿನೆಂಟ್ ಕರ್ನಲ್ ರಿನಾಝಾ ತ್ತು ಕಾಶಿಶ್ ಮಲ್ಹೋತ್ತಾ ಸ್ಪರ್ಧಿಗಳಾಗಿದ್ದಾರೆ.
ಈ ಜಿಲ್ಲೆಯ ಸ್ಪರ್ಧಿಗಳಾದ ಅಭ್ಯದಯ್‌ಪೈ ಮತ್ತು ಸಮೃದ್‌ಪೈ, ಕಡೂರಿನ ಮಂಜುಜೈನ್, ಅನುಭವಿಕಾಶಿಪ್ರಸಾದ್,ಮಹಿಳಾ ವರ್ಗದಿಂದ ಕಳಸದ ಶ್ರೀಲಕ್ಷ್ಮೀಜೋಷಿ ಮತ್ತು ಶ್ರೀದೇವಿಜೋಷಿ, ಪಾಲ್ಗೊಳ್ಳಲಿದ್ದಾರೆ. ಒಟ್ಟು ೫೫ ಸ್ಪರ್ಧಿಗಳು ಭಾಗವಹಿಸಲಿದ್ದಾರೆಂದರು. ಕ್ಲಬ್ ಪದಾಧಿಕಾರಿಗಳಾದ ಅಮೃತ್‌ಪೈ, ದಿಲೀಪ್‌ಕುಮಾರ್, ದೀಪಕ್‌ಕುಮಾರ್ ಇದ್ದರು.
Today the National T.S.D. Rally’s Championship Rally