ALSO FEATURED IN

ಜ.17ಕ್ಕೆ ಖಾಸಗಿ ಹಣಕಾಸು ಸಂಸ್ಥೆ ವಿರುದ್ಧ ರೈತ ಸಂಘ ಪ್ರತಿಭಟನೆ

Spread the love

ಚಿಕ್ಕಮಗಳೂರು: ಖಾಸಗಿ ಫೈನಾನ್ಸ್ ಒಂದು ರೈತರ ಕೃಷಿ ಅಭಿವೃದ್ಧಿಗೆ ನೀಡಿದ ಸಾಲಕ್ಕೆ ಅಗತ್ಯ ವಸ್ತುಗಳ ಸಹಿತ ವಶಪಡಿಸಿಕೊಂಡಿದ್ದು, ಇದೇ ತಿಂಗಳ ೧೭ರೊಳಗೆ ನ್ಯಾಯ ಸಮ್ಮತವಾಗಿ ಬಗೆಹರಿಸದಿದ್ದರೆ ಹಣಕಾಸು ಸಂಸ್ಥೆ ಎದುರು ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಖಾಸಗಿ ಫೈನಾನ್ಸ್ ಸಂಸ್ಥೆ ಸಾಲ ನೀಡಿರುವುದಕ್ಕಿಂತ ದಂಡ ಹಾಗೂ ಬಡ್ಡಿಯನ್ನು ಅಧಿಕವಾಗಿ ವಿಧಿಸಿ ರೈತ ಕುಟುಂಬದ ವಾಸದ ಮನೆಯನ್ನು ವ?ಕ್ಕೆ ಪಡೆದುಕೊಂಡಿದೆ ಎಂದು ತಿಳಿಸಿದರು.

ವಡೇರಹಳ್ಳಿಯ ರೈತ ರಂಗಸ್ವಾಮಿ ಎಂಬುವವರು ೨೦೧೯ ರಲ್ಲಿ ಜಮೀನು ನಿರ್ವಹಣೆಗಾಗಿ ೬.೫೦ ಲಕ್ಷ ರೂ ಪಡೆದಿದ್ದು, ಸಾಲ ನೀಡಿದ ಖಾಸಗಿ ಹಣಕಾಸು ಸಂಸ್ಥೆ ಸಾಲಕ್ಕಾಗಿ ರಂಗಸ್ವಾಮಿ ಅವರ ತಾಯಿ ಹೆಸರಿನಲ್ಲಿರುವ ವಾಸದ ಮನೆಯನ್ನು ಭದ್ರತೆಯಾಗಿ ಪಡೆದು ದಾಖಲೆ ಪತ್ರಗಳಿಗೆ ಸಹಿ ಪಡೆದಿದ್ದರೆಂದು ಹೇಳಿದರು.

ಸಾಲ ನೀಡುವಾಗ ಶೇಕಡ ೧೮ರ ಬಡ್ಡಿದರದಲ್ಲಿ ಸುಲಭ ಕಂತುಗಳಾಗಿ ಕೊಡುವುದಾಗಿ ತಿಳಿಸಿದ್ದು, ಕಳೆದ ಎರಡು ವ?ದ ಹಿಂದೆ ಬಂದಿದ್ದ ಕರೋನ ಸಂದರ್ಭದಲ್ಲಿ ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದು, ಈ ಕಾರಣದ ನೆಪದಲ್ಲಿ ಚೆಕ್ ಬೌನ್ಸ್ ಹಾಗೂ ಕಂತುಗಳ ವಿಳಂಭ ಪಾವತಿಗಾಗಿ ಸುಮಾರು ೨ ಲಕ್ಷ ರೂ ದಂಡ ವಿಧಿಸಿದ್ದಾರೆ ಎಂದು ತಿಳಿಸಿದರು.

ರೈತ ಮರು ಪಾವತಿಸಿದ ಎಲ್ಲಾ ಹಣವನ್ನು ದಂಡದ ಹಣಕ್ಕೆ ಜಮಾ ಮಾಡಿಕೊಂಡಿದ್ದು ಈಗ ೧೨.೫೦ ಲಕ್ಷ ರೂ ಬಾಕಿ ತೋರಿಸಿ ಅದರ ವಸೂಲಿಗಾಗಿ ವಾಸದ ಮನೆಯನ್ನು ಸೀಜ್ ಮಾಡಿದ್ದು, ಇದರಿಂದ ರೈತ ಕುಟುಂಬ ಮನೆ ಕಳೆದುಕೊಂಡು ಮರದ ಕೆಳಗೆ ಆಶ್ರಯ ಪಡೆದಿದೆ ಎಂದು ತಿಳಿಸಿದರು.

ನಗರ ಪ್ರದೇಶದಿಂದ ದೂರ ಇರುವ ಹಳ್ಳಿಗಳನ್ನು ಗುರಿಯಾಗಿಟ್ಟುಕೊಂಡು ಬಣ್ಣಬಣ್ಣದ ಮಾತುಗಳನ್ನಾಗಿ ಕಡಿಮೆ ದಾಖಲೆಗಳೊಂದಿಗೆ ಸಾಲ ಕೊಡುವುದಾಗಿ ನಂಬಿಸಿ ಅನೇಕ ರೈತರಿಗೆ ಸಾಲ ನೀಡುವ ಮೂಲಕ ಈ ರೀತಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೂಪಿಸಿದರು.

ವಡೇರಹಳ್ಳಿ ರೈತ ರಂಗಸ್ವಾಮಿ ಅವರು ಜಮೀನು ಅಭಿವೃದ್ಧಿಗಾಗಿ ಪಡೆದ ಸಾಲಕ್ಕೆ ಮನೆ ಸೀಜ್ ಮಾಡಿರುವುದನ್ನು ರೈತ ಸಂಘ ಖಂಡಿಸುತ್ತದೆ. ಈ ಬಗ್ಗೆ ಮಾತುಕತೆ ನಡೆಸಿ ಸುಲಭವಾಗಿ ಸಾಲ ತೀರುವಳಿಗೆ ಅವಕಾಶ ಕಲ್ಪಿಸಿಕೊಡಲು ರೈತಸಂಘ ಒತ್ತಾಯಿಸಿದ್ದು, ಈ ಹಣಕಾಸು ಸಂಸ್ಥೆ ಈ ಬಗ್ಗೆ ಗಮನ ಹರಿಸದೆ ಮೊಂಡುತನ ಪ್ರದರ್ಶಿಸಿದರೆ ಇದೇ ತಿಂಗಳ ೧೭ರಂದು ಹಣಕಾಸು ಸಂಸ್ಥೆ ಎದುರು ಪ್ರತಿಭಟನೆ ನಡೆಸಲಾಗುವುದು ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಎಸ್ಪಿಗೂ ದೂರು ನೀಡಿರುವುದಾಗಿ ತಿಳಿಸಿದರು.

ಸಂಘದ ಜಿಲ್ಲಾ ಖಜಾಂಚಿ ಹೆಚ್.ಎಸ್ ಲೋಕೇಶ್, ಸಾಲಗಾರ ರಂಗಸ್ವಾಮಿ ಹಾಗೂ ಹರೀಶ್ ಉಪಸ್ಥಿತರಿದ್ದರು.

Farmers union protest against private financial institution on January 17

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version