ALSO FEATURED IN

ಶ್ರೀ ದೇವೀರಮ್ಮನವರ ದೇವಸ್ಥಾನದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ

Spread the love

ಚಿಕ್ಕಮಗಳೂರು: ಭಾರತೀಯರ ಪರಂಪರೆ ಮತ್ತು ಕನ್ನಡಿಗರ ಪರಂಪರೆ ಎರಡೂ ಒಂದೇ. ಅದನ್ನು ಮುಂದುವರಿಸುತ್ತಾ ಹೋಗಬೇಕು. ಭಾರತದ ಸಂಸ್ಕೃತಿ ಉಳಿದಿದ್ದರೆ ಅದಕ್ಕೆ ಕಾರಣ ದಕ್ಷಿಣ ಭಾರತ. ಅದರಲ್ಲೂ ಕನ್ನಡಿಗರೇ ಎಂದು ಮೈಸೂರು ರಾಜ ವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಅವರು ಭಾನುವಾರ ಮಲ್ಲೇನಹಳ್ಳಿ ಬಿಂಡಿಗದ ಇತಿಹಾಸ ಪ್ರಸಿದ್ಧ ಶ್ರೀ ದೇವೀರಮ್ಮನವರ ದೇವಸ್ಥಾನದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಭಕ್ತಾಧಿಗಳನ್ನುದ್ದೇಶಿಸಿ ಮಾತನಾಡಿದರು.

ಇದಕ್ಕೆ ನಿಜವಾದ ಸಾಕ್ಷಿ ಬೇಕಿದ್ದರೆ ವಿಜಯ ನಗರ ಸಾಮ್ರಾಜ್ಯ, ಕರ್ನಾಟಕ ಸಾಮ್ರಾಜ್ಯದ ಕಾಲದಲ್ಲಿ ಉತ್ತರ ಭಾರತದಿಂದ ಸಾಕಷ್ಟು ದಾಳಿಗಳು ನಡೆಯುತ್ತಿದ್ದವು. ಆಗ ದಕ್ಷಿಣದವರು ದೊಡ್ಡ ಕೋಟೆಯ ರೀತಿ ನಿಂತಿದ್ದರು. ಈಗ ಉತ್ತರ ಭಾರತದಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳು ನಿರ್ಮಾಣವಾಗುತ್ತಿವೆ. ಆದರೆ ಅಂದಿನ ಕಾಲದಲ್ಲೇ ವಿಜಯ ನಗರ ಸಾಮ್ರಾಜ್ಯ ದೊಡ್ಡ ದೊಡ್ಡ ದೇವಸ್ಥಾನಗಳನ್ನು ಪನರ್ ನಿರ್ಮಾಣ ಮಾಡಿ ಭಾರತೀಯ ಸಂಸ್ಕೃತಿ ಸಂರಕ್ಷಿಸಿ ಮುನ್ನಡೆದಿದ್ದರು. ಅವರ ಪ್ರೋತ್ಸಾಹ ರಕ್ಷಣೆಯಿಂದಾಗಿ ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯಿಂದ ವೈಷ್ಣವ ಪಾರಂಪರೆಯನ್ನು ಮುಂದುವರಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

ಮುಂದೆ ನಮ್ಮ ವಂಶದವರು ಕೂಡ ಪರಂಪರೆಯನ್ನು ಸಂರಕ್ಷಿಸಿ ಮುಂದುವರಿಯುತ್ತಿದೆ. ನಾವೆಲ್ಲರೂ ಅದನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಬೇಕಿರುವುದು ಬಹಳ ಮುಖ್ಯ ಎಂದರು.

ನಮ್ಮ ಪೂರ್ವಜರು, ವಂಶಜರು, ಹಿರಿಯರ ಕಾಲದಿಂದಲೂ ಬಿಂಡಿಗಾ ಶ್ರೀ ದೇವೀರಮ್ಮ ಕ್ಷೇತ್ರದ ಜೊತೆಗೆ ಹಾಗೂ ಇಲ್ಲಿನ ದತ್ತಪೀಠದೊಂದಿಗೆ ಆಧ್ಯಾತ್ಮಕ ಸಂಬಂಧವಿದೆ ಎಂದರು.

ಮಲೆನಾಡಿನ ಜೊತೆಗೂ ನಮ್ಮ ಹಿರಿಯರ ಕಾಲದಿಂದಲೂ ನಿಕಟವಾದ ಸಂಬಂಧವಿದೆ. ಮಹರಾಜರು ಪ್ರಕೃತಿ, ಪರಿಸರ ಪ್ರೇಮಿಗಳಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅರಣ್ಯ ಎಂದರೆ ತುಂಬಾ ಪ್ರೀತಿ ಇತ್ತು ಎಂದರು.

ಈಗ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಆಗಿದೆ. ಹಿಂದೆ ಅದು ಭದ್ರಾ ಟೈಗರ್ ಬ್ಲಾಕ್ ಎಂದಿತ್ತು. ಭದ್ರಾ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯಲು ಹೆಚ್ಚಾಗಿ ಬರುತ್ತಿದ್ದರು ಅದೇ ರೀತಿ ದತ್ತಪೀಠ, ಕೆಮ್ಮಣ್ಣುಗುಂಡಿಗಳಲ್ಲೂ ಅಂದಿನ ಕಾಲದಲ್ಲೇ ಅತಿಥಿ ಭವನಗಳನ್ನು ನಿರ್ಮಿಸಿದ್ದರು. ಪ್ರಕೃತಿ ತಾಣಗಳಲ್ಲಿ ವಿಶ್ರಮಿಸುವುದು ಅವರಿಗೆ ಅಚ್ಚುಮೆಚ್ಚಾಗಿತ್ತು ಎಂದರು.

ಇದರೊಂದಿಗೆ ಈ ಭಾಗದ ಧಾರ್ಮಿಕ ಸ್ಥಳಗಳ ಜೊತೆಗೂ ರಾಜ ಮನೆತನಕ್ಕೆ ದೊಡ್ಡ ಸಂಬಂಧವಿದೆ. ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅದ್ವೈತ ವೇಂದಾಂತ ಮುಂದುವರಿಯುತ್ತಿದೆ. ಅದಕ್ಕೆ ರಾಜಮನೆತನದ ಪ್ರೋತ್ಸಾಹವೂ ಮುಂದುವರಿಯುತ್ತಿದೆ ಎಂದು ತಿಳಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕ್ಷೇತ್ರದ ಜನರಿಗೆ, ರೈತರಿಗೆ ಉತ್ತಮ ಮಳೆ, ಬೆಳೆ, ಆರೋಗ್ಯ ನೀಡುವಂತೆ ಶ್ರೀ ದೇವೀರಮ್ಮನವರಲ್ಲಿ ಪ್ರಾರ್ಥಿಸಿದ್ದೇವೆ. ಪ್ರವಾಸೋದ್ಯಮದಲ್ಲಿ ನಮ್ಮ ಜಿಲ್ಲೆ ದೇಶಕ್ಕೆ ಹೆಸರುವಾಸಿಯಾಗಿದೆ. ಅದೇ ರೀತಿ ಧರ್ಮಕ್ಷೇತ್ರದಲ್ಲೂ ಬಿಂಡಿಗಾ ದೇವಾಲಯ ಮುಂಚೂಣಿಯಲ್ಲಿರುವುದು ಹೆಮ್ಮೆ ತಂದಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಮಹಾರಾಜರೆಂದರೆ ನಮ್ಮೆಲ್ಲರ ಆರಾಧ್ಯ ದೈವ. ಈ ವರೆಗೆ ಯಾವ ಸರ್ಕಾರಗಳೂ ಕೊಡದ ಕೊಡುಗೆಯನ್ನು ರಾಜರ ಆಡಳಿತದಲ್ಲಿ ನೀಡಲಾಗಿದೆ. ಮಹರಾಜರು ನಿರ್ಮಿಸಿದ ಕನ್ನಂಬಾಡಿ ಕಟ್ಟೆಯಿಂದ ರೈತರು ಸೇರಿದಂತೆ ಬೆಂಗಳೂರು, ಇನ್ನಿತೆರೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಿ ಜೀವನಾಡಿಯಾಗಲು ಕಾರಣವಾಗಿದೆ ಎಂದರು.

ಬ್ರಹ್ಮ ಕುಂಬಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಶ್ರೀ ದೇವೀರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ, ಪ್ರಮುಖರಾದ ಬಸವರಾಜೇಗೌಡ, ನಿಂಗಶೆಟ್ರು, ದಿನೇಶ್, ಯತೀಶ್, ಬಿಳಿಯಪ್ಪ, ಸುನೀಲ್ ಇತರರು ಇದ್ದರು.

Brahma Kumbhabhisheka Mahotsava of Sri Devi Ramman Temple

Facebook
X
WhatsApp
Telegram
Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

[t4b-ticker]
Exit mobile version