July 27, 2024

ಚಿಕ್ಕಮಗಳೂರು ಕ್ಷೇತ್ರಕ್ಕೆ 150 ಕೋಟಿಗೂ ಹೆಚ್ಚು ಅನುದಾನ

0
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಸುದ್ದಿಗೋಷ್ಟಿ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಸುದ್ದಿಗೋಷ್ಟಿ

ಚಿಕ್ಕಮಗಳೂರು:  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚಿಕ್ಕಮಗಳೂರು ಕ್ಷೇತ್ರಕ್ಕೆ ೧೫೦ ಕೋಟಿಗೂ ಹೆಚ್ಚು ಅನುದಾನವನ್ನು ಶಾಸಕ ಎಚ್.ಡಿ.ತಮ್ಮಯ್ಯ ತಂದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಾಸಕ ಎಚ್.ಡಿ. ತಮ್ಮಯ್ಯ ಎಂಟು ತಿಂಗಳಲ್ಲಿ ಎಷ್ಟು ಅನುಧಾನ ತಂದಿದ್ದಾರೆ. ಏನೇನು ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು. ಖುಷಿಯ ವಿಚಾರ ಎಂದರೇ ತಮ್ಮ ಪಕ್ಷದ ಸಿ.ಟಿ.ರವಿ ಶಾಸಕರಾಗಿದ್ದಾಗ, ಸಚಿವರಾಗಿದ್ದಾಗ ಪ್ರಶ್ನಿಸಲು ಧೈರ್ಯ ಮಾಡದ ಬಿಜೆಪಿ ಯವರು ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಅವರನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದಾರೆ ಎಂದರು.

ಕ್ಷೇತ್ರದ ಶಾಸಕರನ್ನು ಪ್ರಶ್ನಿಸುವ ಮುಂಚೆ ಕೇಂದ್ರ ಸರ್ಕಾರವನ್ನು ಮತ್ತು ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರಂದು ಪ್ರಶ್ನಿಸಬೇಕಿತ್ತು ಎಂದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ೬೦ ಕೋಟಿ ಹಣವನ್ನು ವಾಪಾಸ್ ಪಡೆಯಲಾಗಿತ್ತು. ಶಾಸಕ ಎಚ್.ಡಿ.ತಮ್ಮಯ್ಯ ಆ ಹಣವನ್ನು ವಾಪಾಸ್ ತಂದಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ೨೫ ಕೋಟಿ ರೂ. ಅನುಧಾನವನ್ನು ತಂದಿದ್ದಾರೆ. ಲೋಕೋಪಯೋಗಿ ಇಲಾಖೆಗೆ ೧೦ಕೋಟಿ ರೂ. ಹಣವನ್ನು ತಂದಿದ್ದಾರೆ ಅಂದಾಜು ಇದುವರೆಗೂ ೧೫೦ ಕೋಟಿ ರೂ. ಹೆಚ್ಚು ಹಣವನ್ನು ಕ್ಷೇತ್ರಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಕಳೆದ ೨೦ ವರ್ಷಗಳಿಂದ ದುರಾಡಳಿತ ನಡೆಯುತ್ತಿತ್ತು. ಅವರೇ ಸರ್ಕಾರದಿಂದ ಅನುಧಾನ ತರುವುದು. ಅವರೇ ಗುತ್ತಿಗೆ ಮಾಡುವುದು. ಇದರಿಂದ ಬೇಸತ್ತ ಜನರು ಬದಲಾವಣೆ ಬಯಸಿದರು. ಅದರಿಂದ ಎಚ್.ಡಿ.ತಮ್ಮಯ್ಯ ಶಾಸಕರಾದರೂ. ಕಳೆದ ೨೦ ವರ್ಷಗಳಲ್ಲಿ ಶಾಸಕರನ್ನು ಕ್ಷೇತ್ರದ ಜನರು ಮಾತನಾಡಿಸುವುದೇ ಕಷ್ಟವಾಗಿತ್ತು. ಆದರೆ, ಇಂದಿನ ಶಾಸಕ ಎಚ್.ಡಿ.ತಮ್ಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಜನಪರವಾದ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾ ವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಪಂಚ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮೀ ಯೋಜನೆಯಡಿ ಯಲ್ಲಿ ೬೪,೮೪೭ ಜನ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ೬೯೮೧೩ ಜನ ಸದುಪಯೋಗ ಪಡೆದುಕೊಂಡಿದ್ದಾರೆ. ಶಕ್ತಿ ಯೋಜನೆಯಡಿ ೬೮,೮೨,೪೭೮ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ಯಭಾಗ್ಯ ಯೋಜನೆಯಡಿ ೬೪,೧೩೦ಕ್ಕೂ ಹೆಚ್ಚು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಯುವನಿಧಿಯಲ್ಲಿ ೭೩೭ ಪದವೀಧರರು ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಇಷ್ಟು ಮಾತ್ರವಲ್ಲದೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ೧೫ ಕೋಟಿ ರೂ. ಮಂಜೂರಾತಿ ದೊರೆತಿದೆ. ರಾಜ್ಯ ಹಣಕಾಸು ಆಯೋಗ ದಡಿಯಲ್ಲಿ ೭೯.೧೭ಲಕ್ಷ ರೂ. ವೆಚ್ಚದ ಕಾಮಗಾರ ಪ್ರಗತಿಯಲ್ಲಿದೆ. ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ೧೨೩ ಲಕ್ಷ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ೯೩ ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ದಿಪಡಿಸಲಾಗುತ್ತಿದೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ೭೫ಲಕ್ಷ ರೂ. ಮಂಜೂರಾಗಿದೆ. ಪ್ರವಾಹ ಪರಿಸ್ಥಿತಿಯಲ್ಲಿ ಉಂಟಾದ ಹಾನಿ ದುರಸ್ಥಿ ಕಾರ್ಯಕ್ಕೆ ೫೩೩ ಲಕ್ಷ ರೂ. ಹಣ ಮಂಜೂರಾಗಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಟಾಸ್ಕ್ ಪೋರ್ಸ್ ಯೋಜನೆಯಡಿಯಲ್ಲಿ ೫೮ಲಕ್ಷ ರೂ.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಲೋಕೋಪಯೋಗಿ ಇಲಾಖೆಯಡಿ ಯಲ್ಲಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯುವ ಸಬಲೀಕರಣ ಕ್ರೀಡಾ ಇಲಾಖೆ, ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಸಣ್ಣ ನೀರಾವರಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮುಜರಾಯಿ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಅನುದಾನವನ್ನು ಶಾಸಕ ಎಚ್.ಡಿ.ತಮ್ಮಯ್ಯ ತಂದು ಕ್ಷೇತ್ರದ ಅಭಿವೃದ್ದಿ ಕಾರ್ಯ ನಡೆಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಟಿಯಲ್ಲಿ ಎಚ್.ಇ. ಪ್ರಕಾಶ್, ಜಾವಿದ್, ನಾಗೇಶ್, ರಾಘವೇಂದ್ರ, ಸುರೇಶ್ ಸೇರಿದಂತೆ ಅನೇಕರು ಇದ್ದರು.

More than 150 crores grant for Chikmagalur constituency

About Author

Leave a Reply

Your email address will not be published. Required fields are marked *