July 27, 2024

ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸು ಹಿಂಪಡೆಯಬೇಕು

0
ಜಿಲ್ಲಾ ಬಂಜಾರ ಸಂಘ, ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ಮುಖಂಡರ ಜಂಟಿಸುದ್ದಿಗೋಷ್ಟಿ

ಜಿಲ್ಲಾ ಬಂಜಾರ ಸಂಘ, ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ಮುಖಂಡರ ಜಂಟಿಸುದ್ದಿಗೋಷ್ಟಿ

ಚಿಕ್ಕಮಗಳೂರು: ಒಳಮೀಸಲಾತಿ ವರ್ಗಿಕರಣಕ್ಕೆ ಸಂವಿಧಾನದ ಆರ್ಟಿಕಲ್ ೩೪೧ಕ್ಕೆ ತಿದ್ದುಪಡಿಮಾಡಲು ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸ್ ಹಿಂಪಡೆಯಬೇಕೆಂದು ಜಿಲ್ಲಾ ಬಂಜಾರ ಸಂಘ, ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸೋಮವಾರ ಜಂಟಿಸುದ್ದಿಗೋಷ್ಟಿಯಲ್ಲಿ ಸಂಘದ ಮುಖಂಡರಾದ ಗಂಗಾಧರನಾಯ್ಕ,ಬಿ.ಎಸ್.ಕುಮಾರನಾಯ್ಕ ಮಾತನಾಡಿ,ಒಳಮೀಸಲಾತಿ ಕಲ್ಪಿಸಲು ವಿರೋಧವಿಲ್ಲ ಆದರೆ, ಎಲ್ಲಾ ಸಮಾಜದ ಮುಖಂಡರನ್ನು ಕರೆದು ಸಾಧಕ,ಬಾಧಕಗಳ ಕುರಿತು ಚರ್ಚೆ ನಡೆಸಬೇಕೆಂದು ಆಗ್ರಹಿಸಿದರು.

ಚುನಾವಣೆಗೆ ಮುನ್ನ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ವಿವಿಧ ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದರು. ಅದರಂತೆ ಆ ಪಕ್ಷವನ್ನು ಸಮಾಜ ಬೆಂಬಲಿಸಿತ್ತು. ಈಗ ಏಕಾಏಕಿಯಾಗಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲವೆಂದು ಹೇಳಿದರು.

ರಾಜ್ಯ ಸರ್ಕಾರ ಜನವರಿ ೧೮ ರಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಒಳಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್‌ಮಾಡಿದ್ದು, ಈ ತೀರ್ಮಾನ ಬಂಜಾರ, ಬೋವಿ, ಕೊರಚ, ಕೊರಮ, ಅಲೆಮಾರಿ ಶೋಷಿತ ಸಮಾಜಕ್ಕೆ ಮಾಡಿರುವ ದ್ರೋಹವಾಗಿದೆ.ಬಿಜೆಪಿ ಸರ್ಕಾರ ಒಳಮೀಸಲಾತಿ ಬೆಂಬಲಿಸಿದ್ದಕ್ಕೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗಿದೆ. ಇದರ ಲಾಭಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅದನ್ನು ಮರೆತು ನಮ್ಮ ಸಮುದಾಯಗಳಿಗೆ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಲಕ್ಷ್ಮಣನಾಯ್ಕ, ಬಂಜಾರಸೇವಾ ಸಂಘದ ಮುಖಂಡರಾದ ರಾಜನಾಯ್ಕ, ಶ್ರೀನಿವಾಸ, ಮಂಜುನಾಥನಾಯ್ಕ ಇದ್ದರು.

The recommendation made to the Central Government should be withdrawn

About Author

Leave a Reply

Your email address will not be published. Required fields are marked *