July 27, 2024

ಜಿಲ್ಲೆಯಲ್ಲಿ ಸಮಾಜ ಪರಿವರ್ತನ ಸಂಘ ಅಸ್ಥಿತ್ವಕ್ಕೆ

0
ಜಿಲ್ಲೆಯಲ್ಲಿ ಸಮಾಜ ಪರಿವರ್ತನ ಸಂಘ ಅಸ್ಥಿತ್ವಕ್ಕೆ

????????????????????????????????????

ಚಿಕ್ಕಮಗಳೂರು: ಭ್ರಷ್ಟಚಾರದ ವಿರುದ್ಧ ಹೋರಾಟ ರೂಪಿಸುವ ಸಲುವಾಗಿ ಸಮಾಜ ಪರಿವರ್ತನ ಸಂಘ (ರಿ.) ಜಿಲ್ಲೆಯಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ನೂತನ ಅಧ್ಯಕ್ಷರಾಗಿ ಆರ್.ಶ್ರೀನಿವಾಸ್ ಹಾಗೂ ಗೌರವ ಅಧ್ಯಕ್ಷರಾಗಿ ಎಸ್.ವಿಶ್ವನಾಥ್ ಪ್ರಸಾದ್ ಸೇರಿದಂತೆ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಭೆ ನಡೆಸಿ ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ, ಸಿ.ಟಿ.ಶಿವರಾಂ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ, ಸಂಘಟನಾ ಕಾರ್ಯದರ್ಶಿ ಜಗದೀಶ್ ಕೋಟೆ, ಸಹ ಕಾರ್ಯ ದರ್ಶಿ ಲಲಿತ, ನಿರ್ದೇಶಕರುಗಳಾದ ರೇಖ ಹಾಗೂ ರಮೇಶ್ ಅವರನ್ನು ಆಯ್ಕೆಗೊಳಿಸಲಾಗಿದೆ.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಪ್ರಸ್ತುತ ಸಮಾಜದ ವಿವಿಧ ಹಂತದಲ್ಲಿ ನಡೆಯುವ ಅಕ್ರಮ, ಅವ್ಯವಹಾರ ಮತ್ತು ಭ್ರಷ್ಟಾ ಚಾರಗಳ ವಿರುದ್ಧ ಹೋರಾಟ ರೂಪಿಸುವುದು. ಸಂಪನ್ಮೂಲಗಳ ದುರುಪ ಯೋಗವಾದಲ್ಲಿ ಅವುಗಳ ಪರವಾಗಿ ಜನರಿಗೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.

ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್‌ಅರ್ಜಿ ಸಲ್ಲಿಸುವುದು, ಸಂಬಂಧಪಟ್ಟ ಸ್ಥಳೀಯ ನ್ಯಾಯಾಲಯಗಳಲ್ಲಿ ದಾವಾ ಹೂಡುವುದು, ಇಲಾಖೆಯ ಮುಖ್ಯಸ್ಥರಿಗೆ ದೂರು ಸಲ್ಲಿಸುವುದು ಮತ್ತು ಸರ್ಕಾರದ ಗಮನ ಸೆಳೆಯಲಾಗುವುದು ಎಂದ ಅವರು ಪರಿಸರ ಮಾಲಿನ್ಯ ಮಾಡುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಾರ್ವ ಜನಿಕ ಹಿತಾಸಕ್ತಿಯಡಿ ರಿಟ್ ಅರ್ಜಿ ಸಲ್ಲಿಸುವ ಕೆಲಸ ಮಾಡಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಸಂಘವನ್ನು ಜಿಲ್ಲೆಯಲ್ಲಿ ಸಂಘವನ್ನು ಸ್ಥಾಪಿಸಿ ರಿಜಿಸ್ಟರ್ ಮಾಡಿಸಲಾಗಿದ್ದು ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿಗಳ ಅಕ್ರಮವಾಗಿ ಮಂಜೂರಾತಿಗಳ ಭೂ ಹಗರಣ, ಕಲ್ಲು ಗಣಿಗಾರಿಕೆ, ಕಾನೂನು ಬಾಹಿರ ಹಾಗೂ ಗಣಿಗಾರಿಕೆಯ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಡಿ ರಿಟ್ ಅರ್ಜಿ ಸಲ್ಲಿಸುವುದು ಸಂಘದ ಮೂಲ ಉದ್ದೇಶವಾಗಿದೆ ಎಂದರು.

ಭ್ರಷ್ಟ ಅಧಿಕಾರಿ ಮತ್ತು ರಾಜಕಾರಣಿಗಳ ಅಕ್ರಮಗಳು, ಸರ್ಕಾರಿ, ಅರೆಸರ್ಕಾರಿ ಇಲಾಖೆಗಳ ಅವ್ಯವಹಾರಗಳ ಬಗ್ಗೆ ಸಾರ್ವಜನಿಕರಿಂದಲೇ ಬಂದ ದೂರುಗಳನ್ನು ಸಾರ್ವಜನಿಕ ಹಿತಾಸಕ್ತಿಯಡಿ ಪರಿಶೀಲಿಸಿ ನೈಜತೆಯಿದ್ದಲ್ಲಿ ತನಿಖೆಗೆ ಸರ್ಕಾರ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಕಾನೂನು ಬದ್ಧವಾದ ಹೋರಾಟ ಹಮ್ಮಿಕೊಳ್ಳಲಾ ಗುವುದು ಎಂದು ಹೇಳಿದರು.

For the existence of Social Change Association in the district

About Author

Leave a Reply

Your email address will not be published. Required fields are marked *