June 13, 2024
ಗೌರಿ ಕಾಲುವೆಯ ಮನೆಯಲ್ಲಿ ಕಳ್ಳತನ

ಗೌರಿ ಕಾಲುವೆಯ ಮನೆಯಲ್ಲಿ ಕಳ್ಳತನ

ಚಿಕ್ಮಮಗಳೂರು: ಮಗನ ಮದುವೆಗೆಂದು ಬೆಂಗಳೂರಿಗೆ ತೆರಳಿದ್ದ ನಗರದ ಗೌರಿ ಕಾಲುವೆ ವಿನಾಯಕ ರಸ್ತೆಯ ನಿವಾಸಿ ನಾಗಭೂಷಣ್‌ ಭಟ್ರರ ಮನೆಯ ಅಲಮಾರ ಹೊಡೆದು 2 ಲಕ್ಷ ಹಣ ಕಳ್ಳತನ ಮಾಡಲಾಗಿದೆ.

ಕಳೆದ ರಾತ್ರಿ ಘಟನೆ ನಡೆದಿದ್ದು, ಮನೆಗೆ ಬೀಗ ಹಾಕಿ ಎದುರು ಮನೆಯವರ ಕೈಗೆ ಕೊಟ್ಟು ಮಾಲೀಕರು ಹೋಗಿದ್ದರು.

ಬೆಂಗಳೂರಿನಲ್ಲಿ ಮಗನ ಮದುವೆಗೆ ಹೋಗಿದ್ದ ವೇಳೆ ಅಲಮಾರ ಬೀಗ ಮುರಿದು ಲಕ್ಷಾಂತರ ರೂ ಹಣ ದೋಚಿರುವ ಘಟನೆ ನಗರದ ಬಸವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗೌರಿಕಾಲುವೆ ವಿನಾಯಕ ರಸ್ತೆಯಲ್ಲಿ ನಡೆದಿದೆ. ಅಡುಗೆ ಭಟ್ಟರಾದ

ನಾಗಭೂಷಣ್ ತಮ್ಮ ಮಗನ ಮದುವೆಗೆ ಕುಟುಂಬ ಸಮೇತ ಬೆಂಗಳೂರಿಗೆ ಕಳೆದ ಮೂರು ದಿನಗಳ ಹಿಂದೆ ತೆರಳಿದ್ದರು

ಮನೆಯಲ್ಲಿ ಮದುವೆ ಖರ್ಚಿನ ಹಣ 2 ಲಕ್ಷ ರೂಗಳನ್ನು ಅಲಮಾರದಲ್ಲಿ ಇಟ್ಟು ಮನೆಗೆ ಬೀಗ ಹಾಕಿ ಅದನ್ನು ಎದುರು ಮನೆಯವರ ಬಳಿ ಕೊಟ್ಟು ಹೋಗಿದ್ದರು.

ಇಂದು ಬೆಳಿಗ್ಗೆ ಎದುರು ಮನೆಯವರು ಬಂದು ನೋಡಿದಾಗ ಮನೆ ಬೀಗ ಹೊಡೆದು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಮಗನ ಮದುವೆ ಸಂಭ್ರಮದಲ್ಲಿದ್ದ ನಾಗಭೂಷಣ್ ಭಟ್ರಿಗೆ ಕಳ್ಳತನ ಶಾಕ್ ಕೊಟ್ಟಿದ್ದು ಬಸವನಹಳ್ಳಿ ಪೊಲೀಸರು ಮನೆಗೆ ಭೇಟಿ ನೀಡಿ ಫಿಂಗರ್

ಪ್ರಿಂಟ್ ಪಡೆದಿದ್ದಾರೆ

Burglary at Gowri Canal house

About Author

Leave a Reply

Your email address will not be published. Required fields are marked *