May 20, 2024

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ೧೦ನೇ ಸ್ಥಾನ

0
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಆಧಿಕ ಅಂಕಗಳಿಸಿದ ವಿದ್ಯಾರ್ಥಿಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಆಧಿಕ ಅಂಕಗಳಿಸಿದ ವಿದ್ಯಾರ್ಥಿಗಳು

ಚಿಕ್ಕಮಗಳೂರು:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿ ೧೮ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ ಶೇ.೮೬.೧೫ ಫಲಿತಾಂಶದೊಂದಿಗೆ ೧೦ನೇ ಸ್ಥಾನ ಗಳಿಸಿದೆ.

ಈ ಬಾರಿ ಪರೀಕ್ಷೆ ಬರೆದಿದ್ದ ೧೨೧೮೦ ವಿದ್ಯಾರ್ಥಿಗಳ ಪೈಕಿ ೧೦೫೭೭ ಮಂದಿ ತೇರ್ಗಡೆ ಹೊಂದಿದ್ದಾರೆ. ಒಟ್ಟು ೬೦೧೬ ಬಾಲಕರು ಪರೀಕ್ಷೆ ಬರೆದಿದ್ದು, ೪೯೯೬ ಮಂದಿ ಉತ್ತೀರ್ಣರಾಗುವ ಮೂಲಕ ಶೇ. ೮೩.೦೫ ಫಲಿತಾಂಶ ತಂದುಕೊಟ್ಟಿದ್ದಾರೆ. ೬೧೬೪ ಬಾಲಕಿಯರು ಪರೀಕ್ಷೆ ಬರೆದಿದ್ದು, ೫೫೯೧ ಮಂದಿ ತೇರ್ಗಡೆ ಹೊಂದುವ ಮೂಲಕ ಶೇ.೯೦.೭೦ ಫಲಿತಾಂಶ ತಂದುಕೊಟ್ಟಿದ್ದಾರೆ.

೭೩೬೨ ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. ೩೨೧೫ ನಗರ ಪ್ರದೇಶದ ವಿದ್ಯಾರ್ತಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು ೬೧೧೬ ಸರ್ಕಾರಿ ಶಾಲೆಯ ಮಕ್ಕಳು ಪರೀಕ್ಷೆ ಬರೆದಿದ್ದು, ೫೩೧೬ ಮಕ್ಕಳು ತೇರ್ಗಡೆ ಹೊಂದಿ ಶೇ.೮೬.೯೨ ಫಲಿತಾಂಶ ದೊರಕಿಸಿದ್ದಾರೆ.

೩೩೯೩ ಅನುದಾನಿತ ಶಾಲಾ ಮಕ್ಕಳು ಪರೀಕ್ಷೆ ಬರೆದಿದ್ದು, ೨೬೬೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೭೮.೬೬ ಫಲಿತಾಂಶ ಗಳಿಸಿದ್ದರೆ, ಅನುದಾನ ರಹಿತ ಖಾಸಗಿ ಶಾಲೆಗಳಿಂದ ೨೬೭೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೨೫೯೨ ಮಂದಿ ತೇರ್ಗಡೆ ಹೊಂದಿ ೯೭.೦೪ ರಷ್ಟು ಫಲಿತಾಂಶ ಗಳಿಸಿಕೊಂಡಿವೆ.

ಹೆಚ್ಚು ಅಂಕಗಳಿಸಿದವರು: ಚಿಕ್ಕಮಗಳೂರು ಸೇಂಟ್ ಮೇರಿಸ್ ಪ್ರೌಢಶಾಲೆಯ ನಮ್ರತಾ, ಉಪ್ಪಳ್ಳಿ ಮಾಡೆಲ್ ಇಂಗ್ಲೀಷ್ ಶಾಲೆಯ ಎಸ್.ಲಾವಣ್ಯ, ತರೀಕೆರೆಯ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಡಿ.ಮೋನಿಷಾ ಅವರು ೬೧೯ ಅಂಕಗಳನ್ನು ಗಳಿಸಿದ್ದಾರೆ.

ಚಿಕ್ಕಮಗಳೂರು ದಂಟರಮಕ್ಕಿ ಸಂತ ಜೋಸೆಫರ ಬಾಲಕರ ಶಾಲೆಯ ನಿಯೋಲೋ ಕ್ರಿಸ್ಟಲ್ ಲೋಬೋ ೬೧೮ ಮತ್ತು ಕೊಪ್ಪದ ಬಸರೀಕಟೆ ಸದ್ಗುರು ಪ್ರೌಢಶಾಲೆಯ ಹೆಚ್.ಸಿ.ಅಜಿತ್ ೬೧೭ ಅಂಕಗಳನ್ನು ಗಳಿಸಿದ್ದಾರೆ.

ಶೇ.೧೦೦ ಫಲಿತಾಂಶ: ಜಿಲ್ಲೆಯ ಒಟ್ಟು ೧೦೦ ಪ್ರೌಢಶಾಲೆಗಳು ಈ ಬಾರಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಗಳಿಸಿಕೊಂಡಿವೆ. ಈ ಪ್ಯಕಿ ೪೮ ಸರ್ಕಾರಿ ಶಾಲೆಗಳು, ೯ ಅನುದಾನಿತ ಶಾಲೆಗಳು ಹಾಗು ೪೩ ಅನುದಾನ ರಹಿತ ಶಾಲೆಗಳು ಸೇರಿವೆ.

District 10th position in SSLC examination

About Author

Leave a Reply

Your email address will not be published. Required fields are marked *