ALSO FEATURED IN

ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ

Spread the love

ಕಡೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಬೀರನಹಳ್ಳಿ ಗ್ರಾಮದಲ್ಲಿ ನಡೆದಲ್ಲಿ ನಡೆದಿದೆ.

ಸಂಬಂಧದಲ್ಲಿ ಮಗನಾಗಬೇಕಿದ್ದವನ ಜೊತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು ಗಂಡ ಪ್ರಶ್ನಿಸಿದಕ್ಕೆ ಗಂಡನಿಗೆ ವಿಷ ಹಾಕಿ ಕೊಂದು, ನಂತರ ಈ ಸಾವಿಗೆ ಸಹಜ ಸಾವಿನ ಕಥೆ ಕಟ್ಟಿದ್ದಾಳೆ.

ಹತಿ ಜಯಣ್ಣ(42) ಅನೈತಿಕ ಸಂಬಂಧಕ್ಕೆ ಬಲಿಯಾಗಿದ್ದು, ಈ ಮರ್ಡರ್ ಕಹಾನಿ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಈ ಮೊದಲು ಹೊಟ್ಟೆ ನೋವಿನಿಂದ ಪತಿ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಶೃತಿ (೩೫) ಕತೆ ಕಟ್ಟಿದ್ದಳು. ನಂತರ ಸಂಬಂಧಿಕರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಸಂಸ್ಕಾರದ ವೇಳೆ ಪೊಲೀಸ್ ಹಾಜರಾಗಿದ್ದು, ಅಲ್ಲಿಯೇ ಪತ್ನಿ ಶೃತಿ ಜೊತೆ ಪ್ರಿಯಕರ ಕಿರಣ್ (೨೭) ನನ್ನೂ ಬಂಧಿಸಿದ್ದಾರೆ.

ಎನಿದು ಘಟನೆ:  ಈ ಮೊದಲು ಮೃತ ಜಯಣ್ಣ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿ ಶೃತಿ ಮೃತ ಜಯಣ್ಣನ ಅಣ್ಣನ ಮಗ ಕಿರಣ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಪತಿಗೆ ತಿಳಿದಿರುವುದೇ ಸಾವಿಗೆ ಪ್ರಮುಖ ಕಾರಣವಾಗಿದೆ.

ಜೂನ್ 15ರಂದು ಪ್ರಿಯಕರನ ಜೊತೆ ಸೇರಿ ರಾತ್ರಿ ಊಟದಲ್ಲಿ ವಿಷ ಹಾಕಿ ಕೊಲ್ಲಲಾಗಿದೆ ನಂತರ ಹೊಟ್ಟೆ ನೋವಿರುವುದಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂಬ ನಾಟಕವಾಡಿದ್ದಾರೆ.ಆಸ್ಪತ್ರೆಗೆ ಕರೆದೊಯ್ಯುವುದಾಗಿ ನೆಪ ಹೇಳಿ ಕಾರಿನಲ್ಲಿ ಸುತ್ತಾಡಿ ಬಂದಿದ್ದಾರೆ. ಈ ಕುರಿತು ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಸಂಚಿನ ವಿಷಯ ಅವಳ ಸ್ವಂತ ಮಗಳಿಂದಲೇ ತಿಳಿದಿದ್ದು, ಅಸ್ಪತ್ರೆಗೆ ಅಪ್ಪನನ್ನ ಕರೆದುಕೊಂಡು ಹೋಗಿಲ್ಲ ಎಂದು ಮಗಳು ಸತ್ಯ ಹೇಳಿದ್ದಾಳೆ.

ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

Husband is a victim of his wife’s immoral relationship

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version