ALSO FEATURED IN

ನಗರಸಭೆ ಆಡಳಿತದ ಅಧಿಕಾರ ತೃಪ್ತಿ ತಂದಿದೆ

Spread the love

ಚಿಕ್ಕಮಗಳೂರು: ಅಗ್ನಿಪರೀಕ್ಷೆ, ಒತ್ತಡ ಹಾಗೂ ಅನೇಕ ಸಂಕಷ್ಟಗಳ ನಡುವೆಯೂ ಕಳೆದ ಎರಡು ವ?ಗಳ ಅವಧಿಯ ಅಧಿಕಾರದಲ್ಲಿ ನಗರಸಭೆ ಇತಿಹಾಸದಲ್ಲಿ ಭ್ರಷ್ಟರಹಿತ ಸ್ವಚ್ಛ ಹಾಗೂ ದಕ್ಷ ಆಡಳಿತ ನೀಡಿರುವುದು ತೃಪ್ತಿ ತಂದಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಆಡಳಿತ ಅವಧಿಯಲ್ಲಿ ಎಲ್ಲಾ ವಾರ್ಡ್‌ಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದು ರಾಜ್ಯದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಪತ್ರವಾಗಿದ್ದು, ಇದು ನಾಗರಿಕರ ಪ್ರಶಂಸೆಗೆ ಒಳಗಾಗಿದ್ದು ಇದರಿಂದ ಪ್ರಭಾವಿತರಾಗಿ ಪೌರಾಯುಕ್ತರು, ನಗರಸಭೆ ಸಿಬ್ಬಂದಿಯೊಂದಿಗೆ ವಾರಕ್ಕೊಮ್ಮೆ ಎಲ್ಲ ವಾರ್ಡ್‌ಗಳ ಸ್ವಚ್ಛತೆ ಮಾಡಿರುತ್ತಾರೆ. ಇದಕ್ಕೆ ವಾರ್ಡ್ ಸದಸ್ಯರು ನಾಗರಿಕರು ಕೈಜೋಡಿಸಿದ್ದಾರೆ ಎಂದು ಹೇಳಿದರು.

ನನ್ನ ಅವಧಿಯಲ್ಲಿ ಕಂದಾಯ ವಸೂಲಿಗೆ ಡಿಜಿಟಲ್ ವ್ಯವಸ್ಥೆ, ಆನ್ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ವೈರ್‌ಲೆಸ್ ಪ್ರಿಂಟರ್ ಮೂಲಕ ಮನೆಮನೆಗೆ ತೆರಳಿ ಯುಪಿಐ ಪೇಮೆಂಟ್ ಮಾಡಲಾಗುತ್ತಿದೆ, ಇದರಿಂದ ಕಂದಾಯ ಕಟ್ಟಿದವರಿಗೆ ಮೋಸ ಆಗುವ ಪ್ರಶ್ನೆಯೇ ಇಲ್ಲವಾಗಿದ್ದು, ಕಂದಾಯ ವಸೂಲಿಯಲ್ಲಿ ನಗರಸಭೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದ್ದು, ಕೇಂದ್ರ ಸರ್ಕಾರ ಅಭಿನಂದಿಸುವ ಜೊತೆಗೆ ೬ ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು.

ನಗರದಲ್ಲಿ ಬೃಹತ್ ಕಟ್ಟಡಗಳು ಸೇರಿದಂತೆ ಹಲವಾರು ಶಾಶ್ವತ ಕಾಮಗಾರಿ ಮಾಡಲಾಗಿದ್ದು, ಮೊದಲ ಬಾರಿಗೆ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆಯ ಆವರಣದಲ್ಲಿ ೩.೫೦ ಕೋಟಿ ರೂ ವೆಚ್ಚದ ಪುಡ್‌ಕೋರ್ಟ್ ಕಾಮಗಾರಿ ನಡೆಯುತ್ತಿದ್ದು, ಕೆಲಸ ಅಂತಿಮ ಹಂತದಲ್ಲಿದ್ದು ಸಾರ್ವಜನಿಕ ಸೇವೆಗೆ ಸಧ್ಯವೇ ಮುಕ್ತಗೊಳ್ಳಲಿದೆ ಎಂದು ತಿಳಿಸಿದರು.

ಕಚೇರಿಯಲ್ಲಿ ಇದ್ದ ಒಂದು ಕಂಪ್ಯೂಟರ್ ಬದಲಿಗೆ ಇಂದು ೨೦ ಕಂಪ್ಯೂಟರ್ ಅಳವಡಿಸಿ ಜನರ ಕ?ಕ್ಕೆ ಕೂಡಲೇ ಸ್ಪಂದಿಸಲಾಗುತ್ತಿದೆ. ಅಲ್ಲದೆ ವಾಕ್‌ಪಾತ್ ವಿದ್ಯುತೀಕರಣ ಮ್ಯೂಸಿಕ್ ಪೌಟೇನ್, ಮಹಾದ್ವಾರ ಹಾಗೂ ರಾಜ್ಯದಲ್ಲೇ ಮೊದಲ ಬಾರಿಗೆ ಆವರಣದಲ್ಲಿ ವ್ಯಾಯಾಮ ಶಾಲೆ ನಿರ್ಮಾಣ ಮಾಡಲಾಗಿದೆ ಎಂದರು.

ನಗರದ ಹಲವೆಡೆ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಜನತೆಯ ಸೇವೆಗೆ ನೀಡಲಾಗಿದೆ. ಆಜಾದ್ ವೃತದಲ್ಲಿ ಮೇಕ್ ಇನ್ ಇಂಡಿಯಾ ಲಾಂಛನ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸೆಳೆಯುತ್ತಿದೆ ಎಂದು ಹೇಳಿದರು.

ಸಾರ್ವಜನಿಕ ದೂರಿನ ಮೇರೆಗೆ ಭೂ ಮಾಫಿಯಾದವರಿಂದ ಒತ್ತುವರಿಯಾಗಿದ್ದ ೩೦ ಕೋಟಿ ರೂಗಳ ೬೦ ಅಡಿ ರಸ್ತೆಯಲ್ಲಿ ಇರುವ ಸರ್ಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಿ, ನಗರದ ಪ್ರತಿ ಮನೆಯ ಕಸವನ್ನು ಅಲ್ಲಲ್ಲೇ ನಿಂತು ಸುರಿದು ತುಂಬಿಸುವ ವ್ಯವಸ್ಥೆ ಬದಲಿಸಿ ನಗರ ಸಭೆಯ ಶಾಶ್ವತ ಡಂಪಿಂಗ್ ಯಾರ್ಡ್ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕಾಮಗಾರಿ ಕೂಡ ಮುಗಿದಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ೪೦ ವ? ಅವಧಿಯಲ್ಲಿ ೪೪ ಗೋಹತ್ಯಾ ಕೇಂದ್ರಗಳು ತಲೆ ಎತ್ತಿದ್ದು, ಅವುಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಮುಚ್ಚಿಸಿ ಸಾವಿರಾರು ಗೋಹತ್ಯೆ ತಡೆಯಲಾಗಿದೆ. ತರೀಕೆರೆ ರಸ್ತೆ, ಎಐಟಿ ವೃತ, ನಗರಸಭೆ ಆವರಣ, ಎಂ.ಜಿ ರಸ್ತೆ, ಅಟಲ್ ವಾಣಿಜ್ಯ ಸಂಕೀರ್ಣ ಸೇರಿದಂತೆ ನಗರದ ಹಲವೆಡೆ ಸುಸರ್ಜಿತ ಶೌಚಾಲಯ ನಿರ್ಮಾಣ, ನಗರೋತ್ಥಾನ ಯೋಜನೆ ಅಡಿಯಲ್ಲಿ ೩೪ ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಡೆಕ್‌ಸ್ಲಾಬ್, ಹಳೆಯ ವಾರ್ಡ್‌ಗಳಲ್ಲಿ ಹಾಳಾಗಿದ್ದ ಒಳಚರಂಡಿ ಬದಲು ಹೊಸ ಪೈಪ್‌ಲೈನ್ ಮ್ಯಾನ್‌ಹೋಲ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ವ? ನಡೆದ ಯಶಸ್ವಿ ಚಿಕ್ಕಮಗಳೂರು ಹಬ್ಬ ಉತ್ಸವದಲ್ಲಿ ಉತ್ಪತ್ತಿಯಾದ ಕಸವನ್ನು ಪೌರ ಕಾರ್ಮಿಕರು ರಾತ್ರೋರಾತ್ರಿ ಸ್ವಚ್ಛಗೊಳಿಸಿದ ಬಗ್ಗೆ ಮಹಾರಾ?ದ ಮಾಜಿ ಮುಖ್ಯಮಂತ್ರಿ, ಹಾಲಿ ಉಪ ಮುಖ್ಯಮಂತ್ರಿ, ದೇವೇಂದ್ರ ಪಡ್ನವಿಸ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದು, ನನ್ನ ಆಡಳಿತ ಅವಧಿಯಲ್ಲಿ ನಾಗರಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಅಧ್ಯಕ್ಷ ಎನಿಸಿಕೊಂಡು ಹಾಗೂ ಇ-ಖಾತೆ ಮಾಡಿಸಿ ಕೊಟ್ಟವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಖುಷಿ ತಂದಿದ್ದು, ನಾಗರಿಕರು ಮತ್ತು ಎಂಪಿ, ಎಂಎಲ್‌ಎ, ಎಂಎಲ್‌ಸಿ, ಪೌರಾಯುಕ್ತರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸಹ ಸದಸ್ಯರಿಗೆ ಸದಾ ಕೃತಜ್ಞ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತ ಬಿ.ಸಿ ಬಸವರಾಜ್ ಇದ್ದರು.

The authority of municipal administration is satisfactory

Facebook
X
WhatsApp
Telegram
Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

[t4b-ticker]
Exit mobile version