ALSO FEATURED IN

24 ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ಶಿಕ್ಷಕರ ಆಯ್ಕೆ

Spread the love

ಚಿಕ್ಕಮಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ೨೦೨೪-೨೫ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ೨೪ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಸೆ.೫ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿ ಪತ್ರದೊಂದಿಗೆ ಐದು ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಗುತ್ತಿದೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಚಿಕ್ಕಮಗಳೂರು ತಾಲೂಕಿನ ಗುಡ್ಡೆಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಕೆ.ಎಸ್. ಗಣೇಶಪ್ಪ, ಕಡೂರು ತಾಲೂಕು ಪರ್ವತನಹಳ್ಳಿ ಸಿ.ಟಿ.ರೇಣುಕಮ್ಮ, ಬೀರೂರು ವಲಯದ ಚನ್ನೇನಹಳ್ಳಿಯ ಜಿ.ಮಂಜುನಾಥ, ತರೀಕೆರೆ ತಾಲೂಕು ಶಂಭೈನೂರು ಎಸ್.ಆರ್. ತಿಪ್ಪೇಶಪ್ಪ, ನರಸಿಂಹರಾಜಪುರ ತಾಲೂಕಿನ ಕುಶಾಲಪುರ ಎನ್.ಗೀತಾ, ಮೂಡಿಗೆರೆ ತಾಲೂಕು ಹೊಸಕೆರೆ ಕಾಲೋನಿ ಎಚ್.ಜಿ. ಅಶ್ವಿನಿ, ಕೊಪ್ಪ ತಾಲೂಕು ಹೊಲಗೋಡು ಕೆ.ಎನ್.ರಾಘವೇಂದ್ರ, ಶೃಂಗೇರಿ ತಾಲೂಕು ಹನುಮಂತನಗರ ಎಸ್.ಎಚ್.ಕವಿತಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿಕ್ಕಮಗಳೂರು ತಾಲೂಕು ಕಳಸಾಪುರ ಬಿ.ಆರ್.ತಿಮ್ಮಪ್ಪ, ಮೂಡಿಗೆರೆ ತಾಲೂಕು ಯಾಸ್ಮಿನ್ ಸುಲ್ತಾನ್, ಕಡೂರು ತಾಲೂಕು ತಿಮ್ಮಲಾಪುರ ಜಿ.ಕೆ.ರಂಗನಾಥ, ಬೀರೂರು ವಲಯದ ದೊಡ್ಡಪಟ್ಟಣಗೆರೆ ಕೆ.ಜಯಪ್ಪ, ತರೀಕೆರೆ ತಾಲೂಕು ಭಾವಿಕೆರೆ ಬಿ.ಎಚ್.ವಸಂತಕುಮಾರಿ, ನರಸಿಂಹರಾಜಪುರ ತಾಲೂಕು ಶೆಟ್ಟಿಕೊಪ್ಪ ಪಿ.ವಿ.ಶುಭಾ, ಕೊಪ್ಪ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಾಂತಕುಮಾರ್, ಶೃಂಗೇರಿ ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ವೀಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪ್ರೌಢಶಾಲೆಯ ಸಿ.ಪಿ.ಕೃಷ್ಣಗೌಡ, ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಪಿ.ಶಿವರಾಮೇಗೌಡ, ಕಡೂರು ತಾಲೂಕು ಸೋಮನಹಳ್ಳಿ ಶಫಿತಾ ಬೇಗಂ, ಬೀರೂರು ವಲಯದ ಎಮ್ಮೆದೊಡ್ಡಿ ಎಂ.ಸಿ.ಸುರೇಶ್, ತರೀಕೆರೆ ಪಟ್ಟಣದ ಬಾಲಕಿಯರ ಶಾಲೆಯ ಎ.ಎಚ್.ಪ್ರಭಾಕರ, ನರಸಿಂಹರಾಜಪುರ ತಾಲೂಕಿನ ಮೇಲ್ಪಾಲ್ ಎಚ್.ಎನ್.ವಿಶ್ವನಾಥ, ಕೊಪ್ಪ ತಾಲೂಕು ಭಂಡಿಗಡಿ ರಮೇಶ್ ಉಪಾಧ್ಯಾಯ, ಶೃಂಗೇರಿ ತಾಲೂಕಿನ ಹೊಳೆಕೊಪ್ಪ ಎಚ್.ವಿ. ಶರಾವತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

24 Selection of teachers for district level best award

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version