ALSO FEATURED IN

ಕಾಫಿನಾಡು ಗಣೇಶ ಬರಮಾಡಿಕೊಳ್ಳಲು ಸಜ್ಜು

Spread the love

ಚಿಕ್ಕಮಗಳೂರು: ಗೌರಿ ಹಬ್ಬದ ಸಂಭ್ರಮದಲ್ಲಿ ಕಳೆದ ಜನ  ಗಣಪತಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಗೌರಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿತ್ತು. ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು. ಶನಿವಾರ ಗಣೇಶ ಹಬ್ಬವಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಗಲ್ಲಿ ಗಲ್ಲಿಗಳಲ್ಲಿ ಯುವಕರ ಪಡೆ ಸಜ್ಜಾಗಿದೆ. ಕೊನೆಯ ಹಂತದ ಸಿದ್ಧತೆಗಳು ಭರದಿಂದ ಸಾಗಿದವು.

ನಗರದ ಆಜಾದ್ ಪಾರ್ಕ್ ಸಾರ್ವಜನಿಕ ಗಣಪತಿ, ಹಿಂದೂಮಹಾ ಗಣಪತಿ, ವಿಜಯಪುರ ಗಣಪತಿ, ಕೋಟೆ, ರಾಮನಹಳ್ಳಿ, ದಂಟರಮಕ್ಕಿ, ಜಯನಗರ, ಹೊಸಮನೆ ಬಡಾವಣೆ, ಉಂಡೇದಾಸರಹಳ್ಳಿ, ಕೆಂಪನಹಳ್ಳಿ ಸೇರಿದಂತೆ ಹಲವೆಡೆ ಪೆಂಡಾಲ್‌ಗಳು ನಿರ್ಮಾಣವಾಗಿವೆ. ನಗರದ ಬಸವನಹಳ್ಳಿ ರಸ್ತೆಯಲ್ಲಿ ದೀಪಾಲಂಕಾರ ಜಗಮಗಿಸುತ್ತಿದ್ದು, ಎಲ್ಲಾ ಬೀದಿಗಳು ಸಿಂಗಾರಗೊಂಡಿವೆ.

ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರ ಓಂಕಾರೇಶ್ವರ ದೇವಸ್ಥಾನದ ಆವರಣ, ಹನುಮಂತಪ್ಪ ವೃತ್ತ, ಬಸವನಹಳ್ಳಿ ರಸ್ತೆ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ.  ಬೋಳರಾಮೇಶ್ವರ ದೇವಾಲಯವೂ ವಿವಿಧ ಬಗೆಯ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತು.

ಶುಕ್ರವಾರ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿತ್ತು. ಹೂವಿನ ದರ ಗುರುವಾರಕ್ಕಿಂತ ಶುಕ್ರವಾರ ಏರಿಕೆಯಾಗಿತ್ತು. ಸೇವಂತಿಗೆ ಹೂವು ₹100ರಿಂದ ₹150 ತನಕ ಮಾರಾಟವಾಯಿತು. ಆದರೂ, ಹಬ್ಬದ ಸಂಭ್ರಮದಲ್ಲಿರುವ ಜನ ಖರೀದಿಸಿದರು.

88ನೇ ವರ್ಷದ ಗಣೇಶೋತ್ಸವ : ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ(ಆಜಾದ್ ಮೈದಾನ) ಶ್ರೀ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ 88ನೇ ವರ್ಷದ ಗಣೇಶೋತ್ಸವ ಆಚರಿಸಲಾಗುವುದು. ಈ ಬಾರಿ 21 ದಿನ ಉತ್ಸವ ನಡೆಯಲಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಕೇಶವಮೂರ್ತಿ ತಿಳಿಸಿದರು.

ಸೆ.2ರಂದು ಮಧ್ಯಾಹ್ನ 3 ಗಂಟೆಗೆ ನಗರದ ಬಸವನಹಳ್ಳಿಯ ರಂಗನಾಥಸ್ವಾಮಿ ದೇವಸ್ಥಾನದಿಂದ ಬೋಳರಾಮೇಶ್ವರ ದೇವಸ್ಥಾನದ ತನಕ ಮೆರವಣಿಗೆ ನಡೆಸಲಾಗುವುದು.  ಆಸ್ಥಾನ ಮಂಟಪದಲ್ಲಿ ಸಂಜೆ 5 ಗಂಟೆಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗು ವುದು ಎಂದು ಸುದ್ದಿಗೋಷ್ಠಿಯಲ್ಲಿ ಗರುವಾರ ಹೇಳಿದರು.

ಗಣೇಶೋತ್ಸ ವದ ಅಂಗವಾಗಿ ಒಟ್ಟು 21 ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 10.30ರವರೆಗೆ ನಡೆಸಲಾಗುವುದು ಎಂದರು. ಸೆ.28ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಭವ್ಯ ಅಲಂಕೃತ ಪ್ರಭಾವಳಿಯಲ್ಲಿ ಮೂರ್ತಿಯನ್ನು ಕುಳ್ಳಿರಿಸಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಲಾಗುವುದು. ನಾದಸ್ವರ, ಗೊಂಬೆ, ಡೊಳ್ಳು ಕುಣಿತ, ಹಳ್ಳಿ ವಾದ್ಯ ಮತ್ತಿತರ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊ ಳ್ಳಲಿವೆ. ಸೆ29ರಂದು ಬೆಳಿಗ್ಗೆ 9.30ಕ್ಕೆ ನಗರದ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.

ನಾಗರಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎಸ್.ಕುಬೇರ, ಖಜಾಂಚಿ ಎಚ್.ಕೆ.ಮಂಜುನಾಥ್, ಕಾರ್ಯಾಧ್ಯಕ್ಷ ಈಶ್ವರಪ್ಪ ಎನ್. ಕೋಟೆ, ಗೌರವಾಧ್ಯಕ್ಷ ಎಂ.ದಿವಾಕರ, ಉಪಾಧ್ಯಕ್ಷ ಎಂ.ಎಸ್.ಉಮೇಶಕುಮಾರ್, ಕಾರ್ಯದರ್ಶಿ ಸಚಿನ್, ಸಿ.ಆರ್.ನಾಗೇಶ್ ಹಾಜರಿದ್ದರು.

Kaffinad is ready to welcome Ganesha
Facebook
X
WhatsApp
Telegram
Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

[t4b-ticker]
Exit mobile version