ALSO FEATURED IN

ಸೆ.̄23 ಕ್ಕೆ ವಿದ್ಯುತ್ ನಿಲುಗಡೆ

Spread the love

ಚಿಕ್ಕಮಗಳೂರು: ಚಿಕ್ಕಮಗಳೂರು ಗ್ರಾಮೀಣ ಉಪವಿಭಾಗದ ಘಟಕ-೪ರ ವ್ಯಾಪ್ತಿಯಲ್ಲಿ ಬರುವ ೬೬/೧೧ ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ೬೬/೧೧ ಕೆವಿ ಫೀಡರ್‌ಗಳ ಕೇಂದ್ರದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಸದರಿ ಫೀಡರ್‌ಗಳ ವ್ಯಾಪ್ತಿಗೆ ಬರುವ ಭಕ್ತರಹಳ್ಳಿ, ಮಲ್ಲೇನಹಳ್ಳಿ, ಕರ್ಕನಹಳ್ಳಿ, ಹೆಬ್ಬಳ್ಳಿ, ಮಾವಿನಹಳ್ಳ, ಅರಿಶಿನಗುಪ್ಪೆ, ದಾಸರಹಳ್ಳಿ, ಗಾಳಿಪೂಜೆ, ದೇವರಹಳ್ಳಿ, ಹೊಸಪೇಟೆ, ತೊಗರಿಹಂಕಲ್, ಅತ್ತಿಗಿರಿ ಮತ್ತು ಹಲಸುಬಾಳು ಸುತ್ತ ಮುತ್ತಲಿನ ಪ್ರದೇಶಗಳಿಗೆ ಸೆಪ್ಟೆಂಬರ್ ೨೩ ರಂದು ಬೆಳಿಗ್ಗೆ ೧೦.೦೦ ಗಂಟೆಯಿಂದ ೦೫.೦೦ ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಗ್ರಾಮೀಣ ವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರೇಮಗಳೂರು ವಿದ್ಯುತ್ ವಿತರಣಾ ಕೇಂದ್ರ: ಚಿಕ್ಕಮಗಳೂರು ಮತ್ತು ಹಿರೇಮಗಳೂರು ೬೬/೧೧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ೨ನೇ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ೬೬/೧೧ ಕೆವಿ ಫೀಡರ್‌ಗಳ ಕೇಂದ್ರದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಸದರಿ ಫೀಡರ್‌ಗಳ ವ್ಯಾಪ್ತಿಗೆ ಬರುವ ಹೌಸಿಂಗ್ ಬೋರ್ಡ್, ಮಾರ್ಕೇಟ್ ರಸ್ತೆ, ಐ.ಜಿ. ರಸ್ತೆ, ಅಜಾದ್ ಪಾರ್ಕ್, ವಿಜಯಪುರ, ಗೌರಿಕಾಲುವೆ, ಕೆಂಪನಹಳ್ಳಿ ಟೌನ್, ಸಿ.ಡಿ.ಎ. ಲೇ ಜೌಟ್, ಬೈಪಾಸ್ ರಸ್ತೆ, ಬೇಲೂರು ರಸ್ತೆ, ಹಿರೇಮಗಳೂರು ಟೌನ್ ಮತ್ತು ಗ್ರಾಮೀಣ ಪ್ರದೇಶಗಳಾದ ಲಕ್ಷ್ಮೀಪುರ ಇಂಡಸ್ಟ್ರೀಯಲ್, ಲಕ್ಯಾ, ಉದ್ದೇಬೋರನಹಳ್ಳಿ, ದತ್ತ ಪೀಠ, ಮಲ್ಲೇನಹಳ್ಳಿ, ಹಿರೇಕೊಳಲೆ, ಮೂಗ್ತಿಹಳ್ಳಿ, ಜೋಳದಾಳ್, ಶಿರವಾಸೆ, ಕುರುವಂಗಿ, ಚಿಕ್ಕನಹಳ್ಳಿ, ಮಾಗಡಿ, ಕೆ.ಆರ್. ಪೇಟೆ, ಅಂಬಳೆ ಇಂಡಸ್ಟ್ರೀಯಲ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ಸೆಪ್ಟೆಂಬರ್ ೨೧ ರಂದು ಬೆಳಿಗ್ಗೆ ೧೦.೦೦ ಗಂಟೆಯಿಂದ ೦೫.೦೦ ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Power outage on September 23

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version