ALSO FEATURED IN

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಲೋಕಸ ಧೃವತಾರೆ

Spread the love

ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಲೋಕಸ ಧೃವತಾರೆ,ದೇಶದ ಆರ್ಥಿಕ ಕ್ಷೇತ್ರದ ದಿಗ್ಗಜವೆಂದು ಮೈಸೂರು ಉರಿಲಿಂಗಪೆದ್ದಿಮಠದ ಶ್ರೀ ಜ್ಞಾನಪ್ರಕಾಶಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ೧೩೩ನೇ ಜನ್ಮದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ,ಅಂಬೇಡ್ಕರ್ ಜ್ಞಾನವಂತ, ಶೀಲವಂತರಾಗಿದ್ದರಿಂದ ಇಡೀ ವಿಶ್ವವೇ ಇವರತ್ತ ತಿರುಗಿ ನೋಡಲು ಕಾರಣವೆಂದರು.

ನಮಗೆಲ್ಲ ಓಟಿನ ಹಕ್ಕು ನೀಡಿದವರು.ಮತಚಲಾಯಿಸುವಾಗ ಬೆರಳಿನ ಮೇಲೆ ಶಾಹಿಹಾಕಿದಾ ಅಂಬೇಡ್ಕರ್ ಅವರನ್ನು ನೆನಸಿಕೊಳ್ಳಬೇಕು. ಅವರ ಬೆವರಿನ, ಋಣದ ಭಿಕ್ಷೆಯಲ್ಲಿ ನಾವಿದ್ದೇವೆ. ಶೋಷಿತ ಸಮುದಾಯ ಯಾವುದೇ ಕಾರಣಕ್ಕೂ ಮತವನ್ನು ಮಾರಿಕೊಳ್ಳಬಾರದೆಂದು ಕಿವಿಮಾತು ಹೇಳಿದರು.

ಭಾರತ ದೇಶದ ಚರಿತ್ರೆಯನ್ನು ೪೦ ವರ್ಷ ಅಂಬೇಡ್ಕರ್ ಪೆನ್ನಿನ ಮೂಲಕ ಬದಲಾವಣೆ ಮಾಡಿದವರು. ಅಂತಹ ವ್ಯಕ್ತಿಯ ಸಮಾದಿಯನ್ನು ನೋಡದವರು ದತ್ತಜಯಂತಿಯಲ್ಲಿ ಮಾಲೆಹಾಕಿಕೊಂಡು ಕುಣಿಯುವು ದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.

ಸರ್ಕಾರಿ ನೌಕರರು ಸಮುದಾಯದ ಯುವಜನರನ್ನು ಉನ್ನತ ಹುದ್ದೆಗೆ ಕೊಂಡೊಯ್ಯುವ ಸಂಕಲ್ಪ ಮಾಡ ಬೇಕು. ತಾವು ಹುಟ್ಟಿ ಬಂದ ಸಮುದಾಯವನ್ನು ಒಂದೊಮ್ಮೆ ಹಿಂದುರುಗಿ ನೋಡಬೇಕು. ಪ್ರತಿಮನೆಯಲ್ಲಿ ಅಂಬೇಡ್ಕರ್ ಭಾವಚಿತ್ರ, ಸಂವಿಧಾನ ಪ್ರತಿ ಇರಬೇಕು. ಶೋಷಿತ ವರ್ಗದ ಜನರು ತಮ್ಮ ಮಕ್ಕಳನ್ನು ಡಿಸಿ, ಎಸ್ಪಿ,ನ್ಯಾಯಾಧೀರನ್ನಾಗಿಮಾಡಬೇಕೆಂದು ಸಲಹೆ ನೀಡಿದರು.

ಅಂಬೇಡ್ಕರ್ ಭವನಗಳು ಅಧ್ಯಯನ ಕೇಂದ್ರಗಳಾಗಬೇಕು. ಜ್ಞಾನಿಗಳನ್ನು ತಯಾರಿಸುವ ಕಾರ್ಖಾನೆಗಳಾU ಬೇಕೆ ಹೊರತು ಪೂಜಿಸುವ ಸ್ಥಳಗಳಾಗಿ ಮಾರ್ಪಾಡಾಗಬಾರದು. ಮದ್ಯಸೇವನೆ, ಮೌಢ್ಯ ಆಚರಣೆ ಬಡತನ, ದಾರಿದ್ರ್ಯಕ್ಕೆ ಕಾರಣವಾಗಿದ್ದು, ಇದರಿಂದ ಹೊರಬರಬೇಕೆಂದರು.

ರಾಜಕೀಯ ಹಕ್ಕು, ಅಧಿಕಾರಹೀತನೆಯಿಂದ ಅಸ್ಪೃಶ್ಯರಾಗುತ್ತಿದ್ದೀರಿ.ಹಾಗಾಗಿ ಇಂದು ಸಮುದಾಯ ಅಂಬೇಡ್ಕರ್ ಕಾರ್ಮಿಕ ಲೋಕದ ದೃವತಾರೆ.ದೇಶದ ಆರ್ಥಿಕ ಕ್ಷೇತ್ರದ ದಿಗ್ಗಜ ಅದರಲ್ಲಿದ್ದ ಜ್ಞಾನ, ಶೀಲ ಕಾರಣಕ್ಕೆ ಇಡೀ ವಿಶ್ವವೇ ಅವರತ್ತ ತಿರುಗಿ ನೋಡಲು ಕಾರಣವೆಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಬೇಡ್ಕರ್ ಅಧ್ಯಯನ ಕೇಂದ್ರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಅಂಬೇಡ್ಕರ್ ಹೆಸರಿನಲ್ಲಿಯೇ ಆಕರ್ಷಣ ಶಕ್ತಿ ಇದೆ.ಭಾಗ್ಯವಿಲ್ಲದ ಜನರ ಪಾಲಿನ ಸೂರ್ಯ ಇದ್ದಂತೆ ಅವರು ಎಳೆದುತಂದಿರುವ ಹೋರಾಟದ ರಥವನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಸಮಗ್ರ ಭಾರತೀಯರ ಕುರಿತು ಸಂವಿಧಾನ ರಚಿಸುವ ಮೂಲಕ ಆಧುನಿಕ ಭಾರತವನ್ನು ನಿರ್ಮಿಸಿದ್ದಾರೆ. ವಿವಿಧ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಿದ್ದಾರೆ. ೫-೬ ವರ್ಷದಿಂದ ಸಂವಿಧಾನಕ್ಕೆ ಅಪಾಯ ಬಂದಿದೆ. ಸಂವಿಧಾನ ಬದಲಾವಣೆಯ ಕೂಗು ಎದ್ದಿದೆ. ಈ ಕುರಿತು ನಾವೆಲ್ಲರು ಚಿಂತಿಸಬೇಕಾಗಿದೆ. ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೭ ವರ್ಷ ಕಳೆದರೂ ಶೋಷಿತರ ಬದುಕು ತಹಬದಿಗೆ ಬಂದಿಲ್ಲವೆಂದರು.

ನಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಿವೇಶನ ರಹಿತರಿಗೆ ನಿವೇಶನ ಭೂ ರಹಿತರಿಗೆ ಭೂಮಿ ನೀಡಲು ಸರ್ಕಾರದ ಮೇಲೆ ಒತ್ತಡತರಬೇಕಿದೆ.ಪರಿಶಿಷ್ಟಜಾತಿ, ಪರಿಶಿಷ್ಟವರ್ಗದ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಸಮಾಜಕಲ್ಯಾಣ ಸಚಿವರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಪಂಚಗ್ಯಾರಂಟಿಗಳು ಶಾಶ್ವತ ಪರಿಹಾರವಲ್ಲದಿದ್ದರೂ ಸ್ವತಂತ್ರ ಬದುಕುಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಜಮೀನು ರಹಿತರಿಗೆ ಭೂಮಿ ನೀಡುವುದರಿಂದ ಸಮಾಜದಲ್ಲಿನ ಸಮಸ್ಯೆಗೆ ಪರಿಹಾರನೀಡಿದಂತಾಗುತ್ತದೆ. ಹಾಗಾದಾಗ ಮಾತ್ರ ಅಂಬೇಡ್ಕರ್ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಹೆಚ್.ಎಂ.ರುದ್ರಸ್ವಾಮಿ ಮಾತನಾಡಿ ಭಕ್ತಿ ಶೋಷಣೆ ಮಾರ್ಗವಾಗಬಾರದು. ಮಾನಸಿಕ ಗುಲಾಮಗಿರಿಯಿಂದ ಹೊರಬರಲು ವೈಚಾರಿಕ ಸಶಾಸ್ತ್ರ ಬೇಕು. ಶಕ್ತಿ ಯೋಜನೆಯಿಂದ ಮಜರಾಯಿ ಇಲಾಖೆಗೆ ಹೆಚ್ಚಿನ ಆದಾಯಬಂದಿದ್ದು, ಶೇ.೧೦ ರಷ್ಟು ಆದಾಯವನ್ನು ರಸ್ತೆಸಾರಿಗೆ ನಿಗಮಕ್ಕೆ ನೀಡಬೇಕೆಂದರು.

ಸಮಾಜವಾದಿ ಆಶಯ ಅಪಾಯದಲ್ಲಿದೆ.ದುಡಿಯುವ ವರ್ಗ ಆರ್ಥಿಕ, ಸಾಮಾಜಿಕವಾಗಿ ಅನ್ಯಾಯಕ್ಕೆ ಒಳಗಾಗಿದೆ. ಅವರನ್ನು ಜಾಗೃತಗೊಳಿಸಬೇಕಾಗಿದೆ.ದೇಶದ ಆರ್ಥಿಕ ವ್ಯವಸ್ಥೆ ಸಂವಿಧಾನಕ್ಕೆ ಟೋಪಿಹಾಕುತ್ತಿದೆ.ಸಮಾಜಿಕ ಅನುಕಂಪ ಅಳಿಸಿಹೋಗಿದೆ. ಅಧಿಕಾರಿಗಳು ಸಾಮಾಜಿಕ ಋಣ ತೀರಿಸಬೇಕು. ಮೀಸಲಾತಿ ಸಮಾಜಿಕ ಪರಿವರ್ತನೆಯ ಅಸ್ತ್ರವಿದ್ದಂತೆ ಅದೀಗ ಸ್ಪಿರಿಟ್‌ಕಳೆದುಕೊಂಡಿದೆ ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಅಧ್ಯಕ್ಷತೆವಹಿಸಿದ್ದರು.ಸಂಘಟನೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಹೆಚ್.ಬಿ.ಕೃಷ್ಣಮೂರ್ತಿ ಪ್ರಸ್ತಾವಿಸಿದರು.ರಾಜ್ಯಸಂಘದ ಅಧ್ಯಕ್ಷ ಅರವಿಂದ, ಜಿಲ್ಲಾಧ್ಯಕ್ಷ ಎಂ.ಎಸ್.ಉಮೇಶ್, ಖಜಾಂಚಿ ರೇಣುಕಾ,ಕಾನೂನು ಸಲಹೆಗಾರ ಅನಿಲ್‌ಕುಮಾರ್, ಗೌರವಾಧ್ಯಕ್ಷ ರಾಮಚಂದ್ರ, ಸಿಪಿಐ ಜಿಲ್ಲಾಕಾರ್ಯದರ್ಶಿ ಎಸ್.ಎಲ್.ರಾಧಾಸುಂದರೇಶ್, ಕಾವ್ಯಸಂತೋಷ್ ಇದ್ದರು.

Constitution Architect Babasaheb Ambedkar 133rd Birth Anniversary

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version