ALSO FEATURED IN

Munushree Mohjeet Kumarji’s:ಮುನುಶ್ರೀ ಮೋಹಜೀತ್ ಕುಮಾರ್‌ಜೀರವರ ದೀಕ್ಷಾ ಜೀವನದ ಸ್ವರ್ಣ ಮಹೋತ್ಸವ ಕಾರ್ಯಕ್ರಮ

Spread the love

ಚಿಕ್ಕಮಗಳೂರು: ಮುನಿ ಶ್ರೀ ಮೋಹಜೀತ್ ಕುಮಾರ್‌ಜೀಯವರು ಗುರು ಪರಂಪರೆಯನ್ನು ಶ್ರೀಮಂತಗೊಳಿಸಿ ಜೀವನ ಮೌಲ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಸಾರ್ಥಕ ಜೀವನ ನಡೆಸಿದ್ದಾರೆ ಎಂದು ಬಸವ ಮಂದಿರದ ಪೀಠಾಧ್ಯಕ್ಷ ಡಾ. ಮರುಳ ಸಿದ್ದ ಸ್ವಾಮೀಜಿ ಹೇಳಿದರು.

ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ತೇರಾಪಂಥ್ ಜೈನ್ ಸಂಘ ಏರ್ಪಡಿಸಿದ್ದ ಮುನುಶ್ರೀ ಮೋಹಜೀತ್ ಕುಮಾರ್‌ಜೀರವರ ದೀಕ್ಷಾ ಜೀವನದ ಸ್ವರ್ಣ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಇಡೀ ಸಮಾಜದ ಒಳಗೆ ಇರುವ ದುಶ್ಚಟಗಳನ್ನು-ದುರ್ಬುದ್ದಿಗಳನ್ನು ಹೋಗಲಾಡಿಸಲು ಆಂದೋಲನ ಮಾಡಲು ಸಾವಿರಾರು ಕಿಲೋ ಮೀಟರ್ ಪಾದ ಯಾತ್ರೆ ನಡೆಸಿರುವ ಮುನುಶ್ರೀ ಮೋಹಜಿತ್ ಕುಮಾರ್‌ಜೀ ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ ಎಂದರು.

ಮೋಹದ ಮೇಲೆ ದೈವ ಸನ್ಯಾಸಿ ಆಗಿದ್ದ ಮೋಹಜೀತ್ ಕುಮಾರ್‌ಜೀ ಅವರು ಅಧಿಕಾರದಿಂದ ನಮಸ್ಕಾರ ಪಡೆದುಕೊಳ್ಳಲಾಗದು ತ್ಯಾಗದಿಂದ ಮಾತ್ರ ಸಾಧ್ಯ ಎಂದು ಮನಗಂಡಿದ್ದು, ಇದು ಜಾರಿಯಾದಗ ಅಮೃತತ್ವ ಮತ್ತು ಗೌರವ ಸಿಗುತ್ತದೆ ಎಂದು ನಂಬಿದ್ದರು ಎಂದು ಹೇಳಿದರು.

ಜಾಗ-ಮೋಹದ ತ್ಯಾಗದಿಂದ ಮೋಹವನ್ನು ಗೆದ್ದು ಆಗಿರುವವರೇ ಮೋಹಜೀತ್ ಕುಮಾರ್‌ಜೀ ಅವರು ಇದು ಇಡೀ ಜೈನ ಸಮುದಾಯದಲ್ಲಿ ಇತಿಹಾಸ ಸೃಷ್ಠಿಯಾಗಿದೆ ಅವರು ಬದುಕಿನ ಇಡೀ ಸಾಧನೆಗಳನ್ನು ಜನರಿಗೆ ತತ್ವ ಸಿದ್ದಾಂತಕ್ಕೆ ಸಾಹಿತ್ಯ ನೀಡಿ ಆ ತತ್ವ ಜ್ಞಾನವನ್ನು ತಮ್ಮ ಸಾಹಿತ್ಯ ಕೃತಿಗಳಿಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರ ಆಧ್ಯಾತ್ಮಿಕ ಜೀವನವನ್ನು ಕೇವಲ ಪದಗಳಲ್ಲಿ ವರ್ಣಿಸಲಾಗದು ಸರ್ವರು ಅವರ ತತ್ವ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಶಾಂತಿ ಲಭಿಸುತ್ತದೆ ಎಂದರು.

ಯಾವುದೇ ಸಮಾಜದಲ್ಲಿ ಗುರುಗಳ ಸ್ವಾಮೀಜಿ ಸ್ಥಾನ ತುಂಬಿ ಐವತ್ತು ವರ್ಷಗಳು ಯಶಸ್ವಿಯಾಗಿ ಆಧ್ಯಾತ್ಮ ಚಿಂತನೆಗಳಲ್ಲಿ ತೊಡಗಿ ಧರ್ಮ ಪ್ರಚಾರ ಮಾಡುವಂತ ಕಾರ್ಯ ಅಷ್ಟು ಸುಲಭವಲ್ಲ ಈ ಕಾರ್ಯದಲ್ಲಿ ಜೈನ್ ಧರ್ಮದ ವಿಚಾರ ಧಾರೆಗಳನ್ನು ತುಳುಸಿಜೀ ಅವರ ಮಾರ್ಗದರ್ಶನದಲ್ಲಿ ದೇಶಕ್ಕೆ ಪ್ರಚಾರ ಮಾಡಿ, ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

೧೭ ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ ಆಚಾರ್ಯ ತುಳಸೀ ಜೀಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಅವರು ಜೀವನದಲ್ಲಿ ೫೦ ವರ್ಷ ಸಾಗಿ ಬಂದಿದ್ದಾರೆ ಧೀಕ್ಷೆ ಪಡೆದ ಬಳಿಕ ೪೫ ವರ್ಷಗಳ ಕಾಲ ವಿವಿಧ ಶಾಸ್ತ್ರಗಳಾದ ತತ್ವಶಾಸ್ತ್ರ, ಜೈನ್ ತತ್ವ ಸಮಾವೇಶ, ಸಿದ್ದಾಂತ, ದೀಪಿಕಾ, ಆಗಮ ಗ್ರಂಥಗಳ ಅಧ್ಯಯನ ಮಾಡಿ, ಧಾರ್ಮಿಕ ಸಂಘಟನೆಗೆ ಒತ್ತು ನೀಡಿ ದಾಖಲೆ ನಿರ್ಮಿಸಿದ್ದಾರೆ ಎಂದು ತಿಳಿಸಿದರು.

ಪ್ರವಚನಗಳ ಮೂಲಕ ಅಹಿಂಸಾತ್ಮಕ ಪ್ರಜ್ಞೆಗಳನ್ನು ಅನುಯಾಯಿಗಳಿಗೆ ಮೈಗೂಡಿಸಿಕೊಂಡು ಸರಳ, ಸ್ನೇಹಪರತೆ, ಜೀವನದಲ್ಲಿ ಆಲೋಚನೆಗಳು ಇಷ್ಟೊಂದು ಆಳಕ್ಕೆ ತಲುಪುತ್ತವೆ ಎಂಬುದು ಮೋಹಜೀತ್ ಅವರ ವಿಚಾರಧಾರೆಯಾಗಿತ್ತು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜೈನ್ ಸಮುದಾಯದ ವತಿಯಿಂದ ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರಿಗೆ ಧೀಕ್ಷಾ ಸ್ವರ್ಣ ಮಹೋತ್ಸವದ ಅಂಗವಾಗಿ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಡಾ. ಮೋಹನ್, ಕೆ.ಟಿ ರಾಧಾಕೃಷ್ಣ, ಗೌತಮ್ ಚಂದ್, ವಿಪುಲ್ ಕುಮಾರ್ ಜೈನ್, ಪದಮ್‌ಚಂದ್, ಬ್ರಹ್ಮಕುಮಾರಿ ಭಾಗ್ಯಕ್ಕ, ಪಲ್ಲವಿ.ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.ಮೊದಲಿಗೆ ತೇರಾಪಂಥ್ ಸಂಘದ ಅಧ್ಯಕ್ಷ ಮಹೇಂದ್ರ ಡೋಷಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Golden Jubilee Program of Munushree Mohjeet Kumarji’s Deeksha Life

Facebook
X
WhatsApp
Telegram
Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

[t4b-ticker]
Exit mobile version